ಚಿನ್ನಿ ದಾಂಡು ಆಡಿದ ರಾಬರ್ಟ್​ ರಾಣಿ Asha Bhat: ಅಪ್ಪಟ ಮಣ್ಣಿನ ಮಗಳು ಎಂದ ನೆಟ್ಟಿಗರು..!

0
209

ನಟಿ ಆಶಾ ಭಟ್​ ಅವರು ಸೆಲ್ವಾರ್ ತೊಟ್ಟು ಹಳ್ಳಿಯಲ್ಲಿ ಮಕ್ಕಳ ಜೊತೆ ಚಿನ್ನಿ ದಾಂಡು ಆಡುವ ವಿಡಿಯೋ ನೋಡಿದರೆ, ನಿಮಗೆ ನಿಮ್ಮ ಬಾಲ್ಯದ ದಿಗನಳು ನೆನಪಾಗದೆ ಇರದು. ಹೌದು, ಆಶಾ ಭಟ್​ ಎಷ್ಟು ಚೆನ್ನಾಗಿ ಚಿನ್ನಿ ದಾಂಡು ಆಡುತ್ತಾರೆ ಅನ್ನೋದು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ.

ರಾಬರ್ಟ್​ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟ ಕನ್ನಡತಿ ಆಶಾ ಭಟ್​ ತುಂಡುಡುಗೆ ತೊಟ್ಟು ಬೆಳ್ಳಿ ತೆರೆಯ ಮೇಲೆ ಮಿಂಚೋಕು ಸೈ…. ಹಳ್ಳಿಯಲ್ಲಿ ಮಕ್ಕಳ ಜತೆ ಗ್ರಾಮೀಣ ಆಟಗಳನ್ನು ಆಡಲು ಜೈ ಎನ್ನುತ್ತಾರೆ. ಅಪ್ಪಟ ಕನ್ನಡದ ಹುಡುಗಿ ಆಶಾ ಭಟ್​ ಸಿನಿಮಾ ವಿಷಯ ಬಂದಾಗ ಪಾತ್ರಕ್ಕಾಗಿ ಏನೆಲ್ಲ ಮಾಡಬೋಕೋ ಅದನ್ನು ಮಾಡುತ್ತಾರೆ. ಅದೇ ಅವರ ವೈಯಕ್ತಿಕ ಜೀವನದಲ್ಲಿ ಇನ್ನೂ ತಮ್ಮ ಮನಸ್ಸಿಗೆ ಖುಷಿ ಕೊಡುವ ಕೆಲಗಳನ್ನೇ ಮಾಡುತ್ತಾರೆ. ಹೌದು, ಎಷ್ಟೇ ಮಾಡರ್ನ್​ ಆದರೂ ಹಳ್ಳಿಗೆ ಹೋದಾಗ ಹಳ್ಳಿ ಹುಡುಗಿಯೇ ಆಗಿ ಬಿಡುತ್ತಾರೆ. ತಮಗೆ ಸಮಯ ಸಿಕ್ಕಾಗಲೆಲ್ಲ ಅಜ್ಜಿ ಮನೆಗೆ ಹೋಗುವ ಆಶಾ ಭಟ್​ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಲ ಕಳೆಯುತ್ತಿದ್ದಾರೆ.

ನಟಿ ಆಶಾ ಭಟ್​ ಅವರು ಸೆಲ್ವಾರ್ ತೊಟ್ಟು ಹಳ್ಳಿಯಲ್ಲಿ ಮಕ್ಕಳ ಜೊತೆ ಚಿನ್ನಿ ದಾಂಡು ಆಡುವ ವಿಡಿಯೋ ನೋಡಿದರೆ, ನಿಮಗೆ ನಿಮ್ಮ ಬಾಲ್ಯದ ದಿಗನಳು ನೆನಪಾಗದೆ ಇರದು. ಹೌದು, ಆಶಾ ಭಟ್​ ಎಷ್ಟು ಚೆನ್ನಾಗಿ ಚಿನ್ನಿ ದಾಂಡು ಆಡುತ್ತಾರೆ ಅನ್ನೋದು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ.

https://www.instagram.com/reel/CUcbtH6oAT3/embed/captioned/?cr=1&v=14&wp=540&rd=https%3A%2F%2Fkannada.news18.com&rp=%2Fnews%2Fentertainment%2Froberrt-actress-asha-bhat-shares-throwback-video-of-her-playing-chinni-dandu-ae-637241.html#%7B%22ci%22%3A0%2C%22os%22%3A4003.7999999988824%2C%22ls%22%3A3902.0999999996275%2C%22le%22%3A3959.7999999988824%7D

ಆಶಾ ಭಟ್ ಅವರು ಸಮಯ ಸಿಕ್ಕಾಗಲೆಲ್ಲ ತಮ್ಮ ಅಜ್ಜಿ ಮನಗೆ ಭೇಟಿ ಕೊಡುತ್ತಾರೆ. ಹಳ್ಳಿಯಲ್ಲಿರುವ ಅಜ್ಜಿ ಮನೆಗೆ ಹೋದಾಗಲೆಲ್ಲ ಅವರು ಅಲ್ಲಿ ಮಕ್ಕಳ ಜೊತೆ ಆಟವಾಡುತ್ತಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಆಶಾ ಭಟ್​ ಅಜ್ಜಿ ಮನೆಗೆ ಹೋಗಿದ್ದರು. ಆಗ ತೆಗೆದಿದ್ದ ವಿಡಿಯೋಗಳನ್ನು ಈಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಥ್ರೋಬ್ಯಾಕ್​ ಥರ್ಸ್​ಡೇ ಅನ್ನೋ ಹ್ಯಾಶ್​ಟ್ಯಾಗ್​ ಹಾಕಿ ಪೋಸ್ಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Asha Bhat: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಬರ್ಟ್​ ರಾಣಿ ಆಶಾ ಭಟ್​..!

ಆಶಾ ಭಟ್ ಅವರ ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆಯ ಮಳೆ ಸುರಿಸುತ್ತಿದ್ದಾರೆ. ನೀವು ನಮ್ಮ ನಾಡಿನ ಅಪ್ಪಟ ಮಣ್ಣಿನ ಮಗಳು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಆಶಾ ಭಟ್ ಅವರು ಆಗಾಗ ತಮ್ಮ ವೆಸ್ಟರ್ನ್​ ಹಾಗೂ ಭರತನಾಟ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿಯ ಡ್ಯಾನ್ಸಿಂಗ್​ ವಿಡಿಯೋಗಳಿಗೆ ಈಗಾಗಲೇ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇದರ ಜೊತೆಗೆ ಆಶಾ ಬಹುಮುಖ ಪ್ರತಿಭೆ. ಹೌದು, ಅವರು ಎಷ್ಟು ಸುಮಧುರವಾಗಿ ಹಾಡುಗಳನ್ನು ಹಾಡುತ್ತಾರೆ ಅನ್ನೋದು ಸಹ ಈಗಾಗಲೇ ಸಾಬೀತಾಗಿದೆ. ಆಗಾಗ ಹಾಡಿನ ವಿಡಿಯೋಗಳನ್ನು ಇನ್​ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: Asha Bhat: ಹುಬ್ಬಳ್ಳಿಯಲ್ಲಿ ಶೇಂಗಾ ಹೋಳಿಗೆ-ರೊಟ್ಟಿ ಊಟ ಸವಿದ ರಾಬರ್ಟ್​ ರಾಣಿ ಆಶಾ ಭಟ್​..!

ಈ ಹಿಂದೆ ಆಶಾ ಭಟ್​ ಅಜ್ಜಿ ಮನೆಯಲ್ಲಿದ್ದಾಗ ಮಾಡಿದ್ದ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಅದು ಅವರು ಅಡಿಕೆ ಸುಲಿಯುವ ವಿಡಿಯೋ. ಹೌದು, ಇಳಿಗೆ ಮಣೆಯ ಮೇಲೆ ಕುಳಿತು ಅಡಿಕೆ ಸುಲಿದ ವಿಡಿಯೋ ಆಗ ವೈರಲ್ ಆಗಿತ್ತು.  ಅಡಿಕೆ ಸುಲಿಯುವ ಮಜಾನೇ ಬೇರೆ ಎಂದು ಶೀರ್ಷಿಕೆ ಸಹ ಕೊಟ್ಟಿದ್ದರು.

https://www.instagram.com/reel/CJIrSDDgpRT/embed/captioned/?cr=1&v=14&wp=540&rd=https%3A%2F%2Fkannada.news18.com&rp=%2Fnews%2Fentertainment%2Froberrt-actress-asha-bhat-shares-throwback-video-of-her-playing-chinni-dandu-ae-637241.html#%7B%22ci%22%3A1%2C%22os%22%3A4008.0999999996275%2C%22ls%22%3A3902.0999999996275%2C%22le%22%3A3959.7999999988824%7D

ಭದ್ರಾವತಿಯ ಹುಡುಗಿ ಆಶಾ ಭಟ್​ ಸ್ಯಾಂಡಲ್​ವುಡ್​ಗಿಂತ ಮೊದಲು ಬಾಲಿವುಡ್​ನಲ್ಲಿ ನಟಿಸಿದ್ದು, ಮಾಡೆಲಿಂಗ್​ ಕ್ಷೇತ್ರದಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ಹಿಂದಿಯಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸುತ್ತಲೇ ರೂಪದರ್ಶಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾಬರ್ಟ್​ ಸಿನಿಮಾದ ಮೂಲಕ ಈ ಕನ್ನಡ ಸಿನಿರಂಗದಲ್ಲಿ ಖಾತೆ ತೆರೆದಿದ್ದಾರೆ. ದರ್ಶನ್​ ಜೊತೆ ನಾಯಕಿಯಾಗಿ ರಾಬರ್ಟ್​ ಚಿತ್ರದಲ್ಲಿ ನಟಿಸಿದ್ದು, ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಬಾಕ್ಸಾಫಿಸ್​ನಲ್ಲೂ ಈ ಸಿನಿಮಾ ಸಖತ್ಗ ಸದ್ದು ಮಾಡಿತ್ತು.

LEAVE A REPLY

Please enter your comment!
Please enter your name here