ಗ್ರಾಮ ಅಭಿವೃದ್ಧಿ ಯೋಜನೆ 2.5,ಲಕ್ಷ ರೂಪಾಯಿ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ,,!

0
109

ವಿಜಯನಗರ ( ಜಾಗೃತಿ ಬೆಳಕು ನ್ಯೂಸ್)

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ವಲಯದ ಜಿ. ನಾಗಲಾಪುರ ಕಾರ್ಯ ಕ್ಷೇತ್ರದ ಶ್ರೀ ಒಪ್ಪಥೇಶ್ವರ ಮಠದ ಸಮುದಾಯ ಭವನದ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ.2,50,000 ಮಂಜೂರಾತಿ ಆದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಒಪ್ಪೋತ್ತೆಶ್ವರ ಮಠದ ಸಭಾಂಗಣದಲ್ಲಿ ನಡೆಯಿತು ಮಂಜೂರಾತಿ ಪತ್ರವನ್ನು ಸಂಸ್ಥೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ ಶೆಟ್ಟಿ ರವರು ವಿತರಣೆ ಮಾಡಿದರು.

ದಿವ್ಯ ಸಾನಿಧ್ಯ ವಹಿಸಿದ ಪೂಜ್ಯಶ್ರೀ ನಿರಂಜನ ಪ್ರಭು ದೇಶಿಕರು ಸ್ವಾಮೀಜಿಯವರು ಸಂಸ್ಥೆಯ ಅಧಿಕಾರಿಗಳು ತಾವೇ ಖುದ್ದಾಗಿ ಮುಂದಾಳತ್ವ ವಹಿಸಿ ಈ ಅನುದಾನಕ್ಕೆ ಸಹಾಯ ಮಾಡಿದ್ದಾರೆ, ಎಂದು ಮೆಚ್ಚುಗೆ ಮಾತನಾಡಿದರು ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಕರ್ನಾಟಕದ ಪೂರ್ತಿ ಪ್ರಸರಿಸಿದೆ ಹಾಗೂ ಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ರೂಪಿತರಾದ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಬಗ್ಗೆ ಶ್ಲಾಘನೆ ಮಾತುಗಳನ್ನಾಡಿದರು,ಹಾಗೂ ನಿರ್ದೇಶಕರಾದ ಸತೀಶ್ ಶೆಟ್ಟಿ ಅವರು ಗ್ರಾಮಭಿವೃದ್ಧಿ ಯೋಜನೆ ಕಾರ್ಯಕ್ರಮಗಳಾದ ಸುಜ್ಞಾನ ನಿಧಿ ಒಟ್ಟು ರಾಜ್ಯದಲ್ಲಿ 97000 ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಜನಮಂಗಳ ಕಾರ್ಯ ಕ್ರಮದ ಅಡಿಯಲ್ಲಿ ನಿರಾಶ್ರಿತರಿಗೆ ಮಾಸಾಶನ, ಜ್ಞಾನದೀಪ ಕಾರ್ಯಕ್ರಮದಡಿ ಶಾಲಾ ಶಿಕ್ಷಕರ ನೇಮಕ,ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ದೇಗುಲದ ನಿರ್ಮಾಣಕ್ಕೆ , ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿ,ರುದ್ರ ಭೂಮಿ ನಿರ್ಮಾಣ,ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆಯ ಸಹಾಯ ಧನದ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿ , ಕ್ಷೇತ್ರದ ಅಭಯದಾನಗಳ ಬಗ್ಗೆ ಮಾಹಿತಿ ನೀಡಿದರು.ಉಪಸ್ಥಿತಿಯಲ್ಲಿ ಮಾನ್ಯ ಯೋಜನಾಧಿಕಾರಿಗಳಾದ ಮಾರುತಿ,ಮೇಲ್ವಿಚಾರಕರಾದ ನಂದನ್, ಸೇವಾ ಪ್ರತಿನಿಧಿಗಳಾದ ಕಲಾವತಿ,ಯಶೋದ,ಗ್ರಾಮ ಪಂಚಾಯತಿ ಸದಸ್ಯರಾದ,ಎಚ್ ಎಂ ಶಿವ ಶಂಕ್ರಯ್ಯ, ಜೀ.ಸೋಮಣ್ಣ, ಕೆ. ಹನುಮಂತಮ್ಮ, ಭುವನೇಶ್ವರಿ ಹನುಮಂತಮ್ಮ, ಒಕ್ಕೂಟ ಪದಾಧಿಕಾರಿಗಳು ಸಂಘದ ಸದಸ್ಯರು, ಮಠದ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here