ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ ಅಂದಾಜು 24 ಲಕ್ಷದ ಆಭರಣಗಳ ವಶ!!!

0
362

ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)

ಹೊಸಪೇಟೆ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆ!
ಅಂದಾಜು 24 ಲಕ್ಷ ಮೌಲ್ಯದ ಚಿನ್ನಾಭರಣ ವಶ!

ಮನೆಗಳ್ಳತನ ಬಾಲಾಪರಾಧಿ ಸೇರಿದಂತೆ 06 ಜನರ ಬಂಧನ

ವಿಜಯನಗರ(ಹೊಸಪೇಟೆ): ನಗರದಲ್ಲಿ ನೆಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿ ಸೇರಿದಂತೆ ಒಟ್ಟು 06 ಜನ ಅಪರಾಧಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ವಿವೇಕಾನಂದ ನಗರದಲ್ಲಿ ನೆಡೆದಿದ್ದ ಮನೆಗಳ್ಳತನದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ನು ಇದರ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನೆಡೆಸಿದ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ.ಎಸ್.ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಶ್ರೀನಿವಾಸ್ ಸಿ. ಮೇಟಿ ಅವರು ವಿಶೇಷ ತಂಡವನ್ನು ರಚಿಸಿ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದ ಅಂದಾಜು 24 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಹಾಗೂ ಬೆಲೆ ಬಾಳುವ ಎರೆಡು ರಾಡೋ ವಾಚ್ಗಳ ಸಮೇತ ಅಪರಾಧಿಗಳನ್ನು ಬಂಧಿಸಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗೋಷ್ಠಿ ನೆಡೆಸಿದ ಜಿಲ್ಲೆಯ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಅವರು ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಪ್ರಶಂಷೆ ವ್ಯಕ್ತಪಡಿಸಿದರು.

ವರದಿ :- ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here