ಗೋವಿಂದಪುರ ಪೊಲೀಸರ ಕಾರ್ಯಾಚರಣೆ:2.5 ಕೋಟಿ ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟಲ್ ಪೌಡರ್ ಮಾದಕ ವಸ್ತು ವಶ!!

0
284

ಗೋವಿಂದಪುರ

ಗೋವಿಂದಪುರ ಪೊಲೀಸರ ಕಾರ್ಯಾಚರಣೆ: ಶಾಂಪೇನ್ ಬಾಟಲ್‌ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವೋರಿಯನ್ ವಿದೇಶಿ ಪ್ರಜೆ ಬಂಧನ; ಸುಮಾರು 2.5 ಕೋಟಿ ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟಲ್ ಪೌಡರ್ ಮಾದಕ ವಸ್ತು ವಶ;

ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಣೆ ಮತ್ತು ಸೇವನೆ ಮಾಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ 1ನೇ ಬ್ಲಾಕ್, 4ನೇ ಹಂತ, ಹೆಚ್.ಬಿ.ಆರ್ ಲೇಔಟ್, ಯೂಸಫ್ ಮಸೀದಿ ಬಳಿ ಸರ್ವೀಸ್ ರಸ್ತೆಯಲ್ಲಿ ಶಾಂಪೇನ್ ಬಾಟಲ್‌ಗಳಲ್ಲಿ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ ಅನ್ನು ತಂದು ಉದ್ಯಮಿಗಳಿಗೆ ಮತ್ತು ವಿವಿಧ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ತನ್ನದೇ ಆದ ಗಿರಾಕಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಭಾದಾರರಿಂದ ಖಚಿತ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ದ ನಡೆಸಿ ಅನುಮಾನಾಸದ ಆಸಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ,

ಸದರಿ ಆಸಾಮಿಯು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿರುತ್ತದೆ.ಈತನ ವಶದಿಂದ ಸುಮಾರು 2.5 ಕೋಟಿ ಮೌಲ್ಯದ 2500 ಗ್ರಾಂ ತೂಕದ ಎಂ.ಡಿ.ಎಂ.ಎ ಕ್ರಿಸ್ಟಲ್ ಪೌಡರ್ ಎಂಬ ಮಾದಕ ವಸ್ತುವನ್ನು ಒಂದು ಸ್ಯಾಮ್‌ಸಂಗ್, & ಒಂದು ಇನ್‌ಫಿನಿಕ್ಸ್ ಕಂಪನಿಯ ಮೊಬೈಲ್‌ ಫೋನ್‌ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಹೋಂಡಾ ನ್ಯಾವಿ ದ್ವಿ-ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು ಗೋವಿಂದಪುರ ಪೊಲೀಸ್ ಠಾಣೆ ಮೊ.ಸಂ.77/2021 ಕಲಂ.8(4), 22(೩), ಎನ್.ಡಿ.ಪಿ.ಎಸ್ ಆಕ್ಸ್ & 14 ಆಫ್ ಫಾರಿನರ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.ಆರೋಪಿತನ ಹಿನ್ನೆಲೆ;ಆರೋಪಿಯು Ivorian Country ಪ್ರಜೆಯಾಗಿದ್ದು ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು ನೆಲೆಸಿರುತ್ತಾನೆ

ಆರೋಪಿತನ ಬಳಿ ಯಾವುದೇ ಅಧಿಕೃತ ಪಾಸ್‌ಪೋರ್ಟ್ ಮತ್ತು ವೀಸಾ ದೊರೆತಿರುವುದಿಲ್ಲ. ಆರೋಪಿತನ ವಿರುದ್ಧ ವಿದೇಶಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿರುತ್ತದೆ.ಗೋವಾದಿಂದ ಮಾದಕ ವಸ್ತುಗಳನ್ನು ತಂದು ಮಾರಾಟಆರೋಪಿಯು ಶಾಂಪೇನ್ ಬಾಟಲ್‌ನಲ್ಲಿ ಗೋವಾ ರಾಜ್ಯದಿಂದ ಮಾದಕ ವಸ್ತು ಎಂ.ಡಿ.ಎಂ.ಡಿ.ಎ ಕ್ರಿಸ್ಟಲ್ & ಇನ್ನಿತ್ತರೆ ಮಾದಕ ವಸ್ತುಗಳನ್ನು ತಂದು ಮಾರಾಟ ಬೆಂಗಳೂರಿನಲ್ಲಿ ಪ್ರತಿಷ್ಟಿತ ಹೋಟೆಲ್‌ಗಳಲ್ಲಿ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಹಾಗೂ ತನ್ನದೇ ಆದ ಗಿರಾಕಿಗಳಿಗೆ ಮಾದಕ ವಸ್ತು ಎಂ.ಡಿ.ಎಂ.ಡಿ.ಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯಿಂದ ತಿಳಿದುಬಂದಿರುತ್ತದೆ. ಆರೋಪಿಯು ಮಾದಕ ವಸ್ತುಗಳನ್ನು ಗೋವಾದಲ್ಲಿ ಎಲ್ಲಿ ಮತ್ತು ಹೇಗೆ ಖರೀದಿಸುತ್ತಿದ್ದ ಎಂಬ ಬಗ್ಗೆ ಹೆಚ್ಚಿನ ತನಿಖೆಕೈಗೊಳ್ಳಲಾಗಿರುತ್ತದೆ.

ವಿದೇಶಿ ಪ್ರಜೆಗೆ ಯಾವುದೇ ದಾಖಲಾತಿಗಳನ್ನು ಪರಿಶೀಲಿಸದೇ ಮನೆ ಬಾಡಿಗೆಗೆ ನೀಡಿದ್ದ ಮಾಲೀಕರ ವಿರುದ್ದ ಕ್ರಮವಿದೇಶಿ ಪ್ರಜೆಯ ಪಾಸ್‌ಪೋರ್ಟ್ ಮತ್ತು ವೀಸಾ ಪರಿಶೀಲಿಸದೆ ಮತ್ತು ವಿದೇಶಿ ಪ್ರಜೆಗೆ ಬಾಡಿಗೆಗೆ ಮನೆ ನೀಡಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಪಾರಂ-ಸಿ ಸಲ್ಲಿಸದೇ ಇರುವ ಬಗ್ಗೆ ಮನೆಯ ಮಾಲೀಕರಿಗೆ ನೋಟೀಸ್ ನೀಡಿದ್ದು, ವಿಚಾರಣೆ ಕೈಗೊಂಡಿದ್ದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ಈ ಕಾರ್ಯಾಚರಣೆಯನ್ನು ಡಾ| ಶರಣಪ್ಪ, ಎಸ್.ಡಿ, ಐ.ಪಿ.ಎಸ್. ಡಿ.ಸಿ.ಪಿ ಪೂರ್ವ ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ.ಕೆ.ಎಸ್.ಜಗದೀಶ್, ಎ.ಸಿ.ಪಿ ಕೆ.ಜಿ.ಹಳ್ಳಿ ಉಪ-ವಿಭಾಗ ರವರ ಮುಂದಾಳತ್ವದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಕಾಶ್.ಆರ್, ಶ್ರೀ.ಮೊಹ್ಮದ್ ಅಲಿ ಇಮ್ರಾನ್, ಪಿ.ಎಸ್.ಐ ಶ್ರೀ.ರಮೇಶ್ ಕೆ.ಆರ್ ಎ.ಎಸ್.ಐ, ಶ್ರೀ.ಆನಂದ್ ಕುಮಾರ್ ಹಾಗೂ ಸಿಬ್ಬಂದಿಯವರಾದ ಶ್ರೀ.ಸತೀಶ್ ಶ್ರೀ.ಆನಂದ್ ಹೆಚ್.ಸಿ.-9649 ಶ್ರೀ.ಸಂಗೂರ್ ಹೆಚ್.ಸಿ-10873, ಶ್ರೀ, ಮೊಹ್ಮದ್ ಖಾದಿರುವುಲ್ಲ ಹೆಚ್.ಸಿ-9676, ಶ್ರೀ ಸದಾಶಿವಬೆಳಗಲಿ ಹೆಚ್.ಸಿ-10402 ಶ್ರೀ.ಸುರೇಶ್ ಬಾಡಗಿ ಹೆಚ್.ಸಿ-10894. ಶ್ರೀ.ಮಧು ಹೆಚ್ ಹೆಚ್.ಸಿಶ್ರೀ.ಸದಾಶಿವಬೆಳಗಲಿ ಹೆಚ್.ಸಿ-10402 ಶ್ರೀ ಸುರೇಶ್ ಬಾಡಗಿ ಹೆಚ್.ಸಿ-10894, ಶ್ರೀ.ಮಧು ಹೆಜ್ಜೆ ಹೆಚ್.ಸಿ10883, ಶ್ರೀ ನಾಗರಾಜ್ ವೈ ಪಿಸಿ-13654 ಶ್ರೀ.ಶಿವಾನಂದ ಬಂಡಿವಡ್ಡರ ಪಿಸಿ-126ll, ಶ್ರೀ.ಸಂದೀಪ ಪಿಸಿ 14093, ಶ್ರೀ.ಚಿನ್ನಸ್ವಾಮಿ.ಎನ್ ಪಿಸಿ-12609, ಶ್ರೀ.ಪ್ರತಾಪ್ ಪಿಸಿ-12590, ಶ್ರೀ.ಮಹೇಶ್‌ಕುಮಾರ್ ಪಿಸಿ 12595. ಶ್ರೀ.ಬಿಎಂ ಹೊನವಾಡ ಪಿಸಿ-12617 ಶ್ರೀ ಮಹಂತೇಶ್ ಕಡಕಲ್ ಪಿಸಿ-14874 ಶ್ರೀ.ಫಕಿರಪ್ಪ ಪಿಸಿ 20242, ರವರುಗಳು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ಮತ್ತು ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕರ್ತವ್ಯವನ್ನು ಶ್ರೀಕಮಲ್ ಪಂತ್., ಐ.ಪಿ.ಎಸ್., ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಶ್ರೀ.ಎಸ್.ಮುರುಗನ್., ಐ.ಪಿ.ಎಸ್,, ಅಪರ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ರವರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

ವರದಿ :-ಕ್ಯಾಮರಾ ಮೊಯಿನುದ್ದಿನ್

LEAVE A REPLY

Please enter your comment!
Please enter your name here