ಗೋವಿಂದಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ!!!

0
448

ಗೋವಿಂದಪುರ ಬಿಗ್ ಬ್ರೇಕಿಂಗ್

ಗೋವಿಂದಪುರ ಪೊಲೀಸರ ಕಾರ್ಯಾಚರಣೆ; ಅಕ್ರಮವಾಗಿ ಮತ್ತು ಅನಧೀಕೃತವಾಗಿ ನಕಲಿ ಛಾಪಕಾಗದಗಳನ್ನು ಸೃಷ್ಟಿಸಿ ಎಂಬೋಜಿಂಗ್ /ಪ್ರಾಂಕಿಂಗ್ ಅಸಲಿಯವಗಳೆಂದು ನಂಭಿಸಿ ಗ್ರಾಹಕರಿಗೆ ಮಾರಾಟ ಮಾಡಿ ಸರ್ಕಾರದ ರಾಜಸ್ವಕ್ಕೆ ನಷ್ಟ ಪಡಿಸಿ; ಮೋಸ ಮಾಡುತಿದ್ದ ಹವ್ಯಾಸಿ ದಂಧೆಕೋರ ಆರೋಪಿಗಳ ಬಂಧನ :

ಘನ ಉಚ್ಚ-ನ್ಯಾಯಾಲಯ ಕರ್ನಾಟಕ ರಾಜ್ಯ ಬೆಂಗಳುರು ಡಬ್ಲೂ.ಪಿ ನಂ-7344/2021 (ಪಿ.ಐ.ಎಲ್) ಮತ್ತು ಡಬ್ಲೂ.ಪಿ ನಂ-4333/2021 ರಲ್ಲಿ ವಿಚಾರಣೆ ನಡೆಸಿದ ಘನ ಉಚ್ಚ-ನ್ಯಾಯಾಲಯ ಅರ್ಜಿಯನ್ನು ಅಂಗೀಕರಿಸಿ

1) index ora 0.89/2020 0.302. 468. 471. 474. 421. 120(ಬಿ), 201 ಸಹಿತ 34 ಐ.ಪಿ.ಸಿ

(2) Jo Lode DOT .30-148/2020 0:465, 468. 471, 420.

120(ಬಿ) ರೆ/ವಿ 34 ಐಪಿಸಿ,

3) edo es in den vero .0.07/2021 00:255, 256, 257, 258, 259, 260, 420 ಐಪಿಸಿ

ಈ ಮೇಲಿನ ಪ್ರಕರಣಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ರವರಿಗೆ ಡಿ.ಸಿ.ಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಸದರಿ ಮೂರು ಪ್ರಕರಣದಲ್ಲಿ ತನಿಖೆ ನಡೆಸಲು ಎಸ್.ಐ.ಟಿ ತಂಡವನ್ನು ರಚಿಸಲು ಆದೇಶಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಡಾ:ಎಸ್.ಡಿ ಶರಣಪ್ಪ ಐಪಿಎಸ್ ಡಿ.ಸಿ.ಪಿ ಪೂರ್ವ ವಿಭಾಗ, ಮೇಲ್ವಿಚಾರಣೆಯ ಅಧಿಕಾರಿಯಾಗಿ ಶ್ರೀ.ನಿಂಗಪ್ಪ ಬಿ ಸಕ್ರಿ ಎಸಿಪಿ ಬಾಣಸವಾಡಿ ಉಪ-ವಿಭಾಗ, ತನಿಖಾಧಿಕಾರಿಯಾಗಿ ಪ್ರಕಾಶ್.ಆರ್ ಪೊಲೀಸ್ ಇನ್ಸ್‌ಪೆಕ್ಟರ್‌ ಗೋವಿಂದಪುರ ಪೊಲೀಸ್ ಠಾಣೆ ರವರಿಗೆ ಆದೇಶವಾಗಿರುತ್ತದೆ.

ಘನ ಉಚ್ಚ ನ್ಯಾಯಾಲಯ & ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಹಲಸೂರು ಗೇಟ್ DUET ODF o.o.07/2021 do:255, 256, 257, 258, 259, 260, 420 ಪ್ರಕರಣದ ತನಿಖೆಯನ್ನು ದಿನಾಂಕ.14/06/2021 ರಿಂದ ಪ್ರಾರಂಬಿಸಿದ್ದು ತನಿಖೆಯಲ್ಲಿ ಸಿಟಿ ಸಿವಿಲ್ ಕೋರ್ಟ್ & ಮ್ಯಾಜಿಸ್ಟ್ರೇಟ್ ಕೋರ್ಟ್ ಬೆಂಗಳೂರುನಗರ ಕಡೆಗಳಲ್ಲಿ ಪ್ರಾಂಕಿಂಗ್ ಮಾಡಿರುವ ನಕಲಿ

ಛಾಪಕಾಗದಗಳು & ಪ್ರಾಂಕಿಂಗ್ ಮಾಡದಿರುವ ಛಾಪಕಾಗದಗಳನ್ನು ಮಾರಾಟ ಮಾಡುತ್ತಾರೆಂಬ ಮಾಹಿತಿ ಮೇಲೆ ಈ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಮಾಹಿತಿ ಸಂಗ್ರಹಿಸಲು ಶ್ರೀ.ನಿಂಗಪ್ಪ ಬಿ ಸಕ್ರಿ ಎಸಿಪಿ ಬಾಣಸವಾಡಿ ಇವರ ಮಾರ್ಗದರ್ಶನದಲ್ಲಿ ಶ್ರೀ.ಪ್ರಕಾಶ್.ಆರ್ ಪಿ.ಐ ಗೋವಿಂದಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ 04 ತಂಡಗಳನ್ನು ರಚನೆ ಮಾಡಲಾಗಿತ್ತು. ಸದರಿ ತಂಡಗಳು ಸುಮಾರು ಒಂದುವರೆ ತಿಂಗಳಿಂದ ಸದರಿ ಸ್ಥಳಗಳಲ್ಲಿ ನಿಗಾವಹಿಸಿ ಮಾಹಿತಿ ಕಲೆಹಾಕಿ ಡಿಕಾಯಿಯಾಗಿ ಸಿಬ್ಬಂದಿಗಳನ್ನು ಕಳುಹಿಸಿ ನಕಲಿ ಛಾಪಕಾಗದಗಳನ್ನು ಖರೀದಿಸಿ ಖಚಿತ ಪಡಿಸಿಕೊಂಡಿದಲ್ಲದೆ ಹಾಗೂ ಭಾತ್ಮೀಧಾರರಿಂದ ದೊರೆತ ಮಾಹಿತಿ ಮೇರೆಗೆ ದಿನಾಂಕ.12/11/2021 ರಂದು ಆರೋಪಿಗಳ ಮನೆಗಳನ್ನು ಸರ್ಚ್ ಮಾಡಲು ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ದಿನಾಂಕ.13/11/2021 ರಂದು ಐದು ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದು, ಎ-1 ರಿಂದ ಎ-4 ಆರೋಪಿಗಳು ಹೆಚ್ಚಿನ ತನಿಖೆಗೆ ಸಲುವಾಗಿ ಪೊಲಿಸ್ ಬಂಧನದಲ್ಲಿರುತ್ತಾರೆ.

ಅಲ್ಲದೆ ಕೃತ್ಯಕ್ಕೆ ಉಪಯೋಗಿಸಲು ಇಟ್ಟುಕೊಂಡಿದ್ದ, State Bank of Mysore B’lore Cottonpet Branch ಎಂಬ ಹೆಸರಿನ ಚಿಕ್ಕ ರೌಂಡ್ ಸೀಲ್, ರಬ್ಬರ್ ಸೀಲುಗಳು, ರಬ್ಬರ್ ಸೀಲುಗಳಿಗೆ ಬಳಸುವ ವಿವಿಧ ಇಸವಿ & ತಿಂಗಳುಗಳ ಪ್ಲಾಸ್ಟಿಕ್ ಕಟ್ ಪೀಸ್ ಜೊತೆಗೆ ಪ್ಲಾಸ್ಟಿಕ್ ಡಬ್ಬಗಳು, ಚಿಕ್ಕ & ದೊಡ್ಡ ಗಾತ್ರದ ಸ್ಕಿನ್ ಪ್ರಿಂಟ್ ಮೇಷಿನ್ & 4 ಉಜ್ಜುವ ಪ್ಯಾಡುಗಳು. Govt Of India ಎಂದು ಆಂಗ್ಲ ಭಾಷೆಯಲ್ಲಿ & ಭಾರತ್ ಸರ್ಕಾರ್ ಎಂದು ಹಿಂದಿ ಭಾಷೆಯಲ್ಲಿ ವಾಟರ್ ಮಾರ್ಕ್ ಇರುವ ಛಾಪ ಕಾಗದಗಳನ್ನು ಮುದ್ರಿಸಲು ಉಪಯೋಗಿಸುವ ಒಟ್ಟು 233 ಖಾಲಿ ಹಾಳೆಗಳು, ವಿವಿಧ ಮುಖ ಬೆಲೆಯ 208 ಖಾಲಿ ಇ-ಸ್ಟಾಂಪ್ ಪೇಪರ್‌ಗಳನ್ನು ಪಂಚರ ಸಮಕ್ಷಮ ಮುಖೇನ ಶೋಧನೆ ಮಾಡಿ ವಶಪಡಿಸಿಕೊಂಡಿರುತ್ತದೆ.

ಎ-1 ರಿಂದ ಎ-5 ರ ವರೆಗಿನ ಆರೋಪಿಗಳು ಪರಸ್ಪರ ಪರಿಚಯಸ್ಥರಾಗಿದ್ದು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಜಾಲವನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಮಾನ ಉದ್ದೇಶದಿಂದ ಕಾನೂನು ಬಾಹಿರವಾಗಿ ಸರ್ಕಾರಿ ದಸ್ತಾವೇಜು ದಾಖಲಾತಿಗಳನ್ನು 2005ನೇ ಸಾಲಿನಿಂದಲೂ, 2020ಕ್ಕೆ ಹಿಂದಿನ ವರ್ಷಗಳ ನಕಲಿ ಛಾಪಕಾಗದಗಳನ್ನು ಅಸಲುಗಳೆಂಬಂತೆ ಬಿಂಬಿಸಿ ತನಗೆ ಪರಿಚಯವಿರುವ ಸಾರ್ವಜನಿಕರಿಗೆ/ಗಿರಾಕಿಗಳಿಗೆ 3000 5000/- ರೂ ಹಾಗೂ ರಿಂದ ಅಪರಿಚಿತರಿಗೆ 5000 ರಿಂದ 10,000/-ರೂ ವರೆಗೆ ಮಾರಾಟ ಮಾಡಿ ಮೋಸ ಮಾಡುತ್ತಾ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿ, ಅಕ್ರಮಲಾಭ ಸಂಪಾದಿಸಿಕೊಂಡು ಬಂದಿರುತ್ತಾರೆ.

ಆರೋಪಿಗಳ ವಿರುದ್ಧ ಇದ್ದಕ್ಕೂ ಮೊದಲು ಹಲಸೂರುಗೇಟ್ ಪೊಲೀಸ್ ಠಾಣೆ ಮೊ.ಸಂ.60/2013, 282/2013 ಹಾಗೂ ಎಸ್.ಜೆ ಪಾರ್ಕ್ ಪಿ.ಎಸ್ ಮೊ.ಸಂ.93/2020 ರಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಶ್ರೀ ಕಮಲ್ ಪಂತ್ ಐ.ಪಿ.ಎಸ್ ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಶ್ರೀ.ಎಸ್.ಮುರುಗನ್, ಐ.ಪಿ.ಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಶ್ರೀ ಡಾ|| ಶರಣಪ್ಪ ಎಸ್.ಡಿ, ಐ.ಪಿ.ಎಸ್. ಡಿ.ಸಿ.ಪಿ ಪೂರ್ವ ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ.ನಿಂಗಪ್ಪ ಬಿ ಸಕ್ರಿ ಎ.ಸಿ.ಪಿ ಬಾಣಸವಾಡಿ ಉಪ-ವಿಭಾಗ ರವರ ನೇತೃತ್ವದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಪ್ರಕಾಶ್.ಆರ್, ಆರ್.ಎಂ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಮಲ್ವಿನ್ ಪ್ರಾನ್ಸಿಸ್, ಕೆ.ಜಿ ಹಳ್ಳಿ ಪೊಲೀಸ್ ಶ್ರೀ.ಸಂತೋಷ್ ಕುಮಾರ್ ಎಲ್, ಶ್ರೀ.ವಂಸತ್‌ಕುಮಾರ್, ಬಾಣಸವಾಡಿ, ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪೊಲೀಸ್ ಇನ್ಸ್‌ಪೆಕ್ಟರ್‌ ಪಿ.ಎಸ್.ಐ ಶ್ರೀ.ಅಮರೇಶ್ ಹಾಗೂ ಪಿ.ಎಸ್.ಐ ಶ್ರೀ.ಸುರೇಶ್ ಕೆ ಹಾಗೂ ಸಿಬ್ಬಂದಿಗಳಾದ ಶ್ರೀ.ಸತೀಶ್ ಕುಮಾರ್ ಹೆಚ್.ಸಿ-6500, ಶ್ರೀ.ಆನಂದ್ ಹೆಚ್.ಸಿ-9649, ಶ್ರೀ.ಬಿ.ಎಂ ಹೊನವಾಡ ಪಿಸಿ-12617, ಶ್ರೀ.ಚಿನ್ನಸ್ವಾಮಿ,ಎನ್ ಪಿಸಿ-12609, ಶ್ರೀಮತಿ.ಚೈತ್ರಾ ಡಿ.ಎನ್ ಮಪಿಸಿ-l1785, ಕು#ಕಾಶಿಬಾಯಿ ಮಪಿಸಿ 16807 ರವರುಗಳೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಮತ್ತು ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಶ್ರೀ.ಕಮಲ್ ಪಂತ್, ಐ.ಪಿ.ಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಶ್ರೀಮುರುಗನ್.ಎಸ್., ಐ.ಪಿ.ಎಸ್., ಅಪರ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ರವರು ಪ್ರಶಂಸಿಸಿ 50 ಸಾವಿರ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
ಇವರ ಕಾರ್ಯಕ್ಕೆ ಗೋವಿಂದಪುರ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದರು!

ವರದಿ :- ಕ್ಯಾಮರಾ ಮೊಈನ್

LEAVE A REPLY

Please enter your comment!
Please enter your name here