ಗೀರಣೆ ಬಡಾವಣೆಯಲ್ಲಿ ಹನುಮ ಜಯಂತಿ ಆಚರಣೆ..!!

0
161

ಔರಾದ

ಪಟ್ಟಣದ ಗೀರಣೆ ಬಡಾವಣೆಯಲ್ಲಿ ಬೆಳಿಗ್ಗೆ ಹನುಮ ಜಯಂತಿಯನ್ನು ಭಕ್ತರು ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು.

ಬಡಾವಣೆಯ ಉದ್ಯಾನದಲ್ಲಿರುವ ಶ್ರೀ ಹನುಮಂತ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಮಂಗಳಾರತಿ ನಂತರ ಮಾತೆಯರಿಂದ ತೊಟ್ಟಿಲೋತ್ಸವ ಕಾರ್ಯಕ್ರಮ. ನೈವೇದ್ಯ ಸಮರ್ಪಣೆ ಸೇರಿದಂತೆ ಭಕ್ತರಿಗೆ ಮಹಾ ಪ್ರಸಾದ ವಿನಿಯೋಗ, ವಿವಿಧ ಧಾರ್ಮಿಕ ಕಾರ‍್ಯಕ್ರಮಗಳು ವೈಶಿಷ್ಟಪೂರ್ಣವಾಗಿ ನಡೆದವು.

ಈ ಸಂದರ್ಭದಲ್ಲಿ ಸಂಗಮೇಶ್ವರ ಗೀರಣೆ, ಶಿವಕುಮಾರ ಗೀರಣೆ, ಹಾವಗಿರಾವ ಹಂಡಗೆ, ವಿಶ್ವನಾಥ ಬಿರಾದಾರ, ದಯಾನಂದ ಬಾವಗೆ, ಸಿದ್ದೇಶ್ವರ ಗೀರಣೆ, ಹರೀಶ ಗೀರಣೆ ಸಂಗೀತಾ ಗೀರಣೆ ವನಮಾಲಾ ಗಿರಣೆ ಸಚಿನ ಗೀರಣೆ ಹೃತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು


ವರದಿ:-ಸುಧೀರ ಕುಮಾರ್ ಬೀ ಪಾಂಡ್ರೆ

LEAVE A REPLY

Please enter your comment!
Please enter your name here