ಗಂಡು ಸಿಂಹ ಕೇಸರಿಯ9ನೇ ವರ್ಷದ ಹುಟ್ಟುಹಬ್ಬ ಆಚರಣೆ,!

0
171
{"remix_data":[],"remix_entry_point":"challenges","source_tags":["default"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ಪ್ರಾಣಿಗಳ ಮೇಲೆ ದಯೆ ಇರಲಿ: ಶಾಸಕರಾದ ಹೆಚ್.ಆರ್.ಗವಿಯಪ್ಪ ಸಲಹೆ

ಹೊಸಪೇಟೆ (ವಿಜಯನಗರ) ಜಾಗೃತಿ ಬೆಳಕು ನ್ಯೂಸ್

ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಜಗಜ್ಯೋತಿ ಬಸವೇಶ್ವರರು ಹೇಳಿದ ವಚನದ ಸಾಲುಗಳನ್ನು ಅರ್ಥೈಸಿಕೊಳ್ಳಬೇಕು ಪ್ರಾಣಿಗಳ ಮೇಲೆ ಪ್ರತಿಯೊಬ್ಬರು ದಯಾಗುಣ ವಿಟ್ಟುಕೊಳ್ಳಬೇಕು ಎಂದು ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಹೇಳಿದರು.

ಹೊಸಪೇಟೆ ತಾಲೂಕಿನ ಕಮಲಾಪುರದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಅವರಿಂದ ಜಿಯಾಲಾಜಿಕಲ್ ಪಾರ್ಕನಲ್ಲಿ ಸೆಪ್ಟೆಂಬರ್ 4ರಂದು ಆಯೋಜಿಸಿದ್ದ ಕೇಸರಿ ಹೆಸರಿನ ಗಂಡು ಸಿಂಹದ 9ನೇ ವರ್ಷದ ಹುಟ್ಟುಹಬ್ಬದ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಾಣಿಗಳ ಸಂತತಿಯು ನಿರಂತರ ಮುಂದುವರೆಯುವ ಹಾಗೆ ಪ್ರಾಣಿಗಳನ್ನು ರಕ್ಷಣೆ ಮಾಡುವ, ಅವುಗಳನ್ನು ಉಳಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ‌ ನಮ್ಮೆಲ್ಲರ ಮೇಲಿದೆ. ಅದರಂತೆ ಮೃಗಾಲಯದಲ್ಲಿನ ಪ್ರಾಣಿಗಳ ಪಾಲನೆ-ಪೋಷಣೆ ಮಾಡುವಲ್ಲಿ ಮೃಗಾಲಯದ ಸಿಬ್ಬಂದಿಯೇ ತಂದೆ ತಾಯಿ ಇರುವ ಕಾಳಜಿಯ ಗುಣಹೊಂದಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಈಗಿನ ದಿನಗಳಲ್ಲಿ ಪ್ರಕೃತಿ ನಮಗೆ ತುಂಬಾ ಅತ್ಯವಶ್ಯಕ. ಪರಿಸರಕ್ಕೆ ಮತ್ತು ಮಾನವರಿಗೆ ಸಹಕಾರಿಯಾಗಿರುವ ಪ್ರಕೃತಿಯನ್ನು ಹಾಗೂ ಪ್ರಾಣಿಗಳನ್ನು ಉಳಿಸಿಕೊಳ್ಳವುದು ಈಗಿನ ಅತೀ ಅವಶ್ಯಕತೆಯಾಗಿದೆ ಎಂಬುದನ್ನು ಮುಖ್ಯವಾಗಿ ಪ್ರಾಣಿ ಸಂಗ್ರಹಾಲಯ, ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ಅರಿಯಬೇಕಿದೆ ಎಂದು ತಿಳಿಸಿದರು.

ಪ್ರಾಣಿಗಳನ್ನು ದತ್ತು ಪಡೆಯುವ ಪದ್ದತಿ ಇದೆ ಇದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ. ಆಸಕ್ತರು, ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು ಎಂದು ಸಲಹೆ ಮಾಡಿದ ಶಾಸಕರು, ತಾವು ಕೂಡ ಈ ವರ್ಷ ಎರಡು ಪ್ರಾಣಿಗಳನ್ನು ದತ್ತು ಪಡೆಯುತ್ತೇನೆ ಯಂದು ತಿಳಿಸಿದರು.

ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಪಾರ್ಕ್
ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಾಜೇಶ್ ನಾಯಕ್ ಅವರು ಮಾತನಾಡಿ, ಕಮಲಾಪುರದ ಪ್ರಾಣಿ ಸಂಗ್ರಹಾಲಯದಲ್ಲಿ 33 ಜಾತಿಯ ಒಟ್ಟು 380ಕ್ಕಿಂತ ಹೆಚ್ಚು ಪ್ರಾಣಿಗಳಿವೆ. ಕೇಸರಿ ಸಿಂಹವು 2015ರಲ್ಲಿ ಜನಿಸಿದ್ದು ಇಂದಿಗೆ 9 ವರ್ಷಗಳನ್ನು ಪೂರೈಸಿದೆ ಎಂದು ತಿಳಿಸಿದರು.
ನಮ್ಮ ಭಾಗದ ಪರಿಸರದಲ್ಲಿ ಸಿಂಹಗಳಿಗೆ ಬೇಕಾದ ವಾತಾವರಣವನ್ನು ರೂಪಿಸುವುದು ತುಂಬ ಕಷ್ಟಕರ. ನಾವು ಹಂಪಿಯಂತಹ ಐತಿಹಾಸಿಕ ತಾಣ ಹೊಂದಿದ್ದೇವೆ. ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಜಾಗತಿಕ ಪ್ರಸಿದ್ಧ ಹಂಪಿಯ ಪರಿಸರದಲ್ಲಿ ನಾವಿರುವುದು ನಮಗೆ ಸಾಕಷ್ಟು ಅನುಕೂಲವಿದೆ. ನಮ್ಮ ಮುಂದಿನ ಯೋಜನೆಗೆ ಇದು ಸಹಕಾರಿಯಾಗಲಿದೆ.

ಯುಪಿಐ ಐಡಿಗೆ ಚಾಲನೆ:
ಕಮಲಾಪುರದ ಪ್ರಾಣಿ ಸಂಗ್ರಹಾಲಯಕ್ಕೆ ಬರುವವರು ಇನ್ಮುಂದೇ ಆನ್ ಲೈನ್ ಮೂಲಕವೇ ಪ್ರವೇಶಾತಿ ಶುಲ್ಕ ಪಾವತಿಸಬಹುದಾಗಿದೆ.
ಪ್ರವಾಸಿಗರ ಪ್ರವೇಶಕ್ಕೆ ಇನ್ನಷ್ಟು ಅನುಕೂಲವಾಗಲಿ ಎಂದು
ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಪಾರ್ಕನ ಅಧಿಕಾರಿಗಳು ಹೊಸದಾಗಿ ರಚಿಸಿರುವ ಯುಪಿಐ ಐಡಿಗೆ ಸಹ ಶಾಸಕರು ಚಾಲನೆ ನೀಡಿದರು.

ಪ್ರಾಣಿಗಳ ವೀಕ್ಷಣೆ ನಡೆಸಿದ ಶಾಸಕರು:

ಪ್ರಾಣಿ ಸಂಗ್ರಹಾಲಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿದ್ಧ‌ ಶಾಸಕರು, ಇದೆ ವೇಳೆ ವಿದ್ಯಾರ್ಥಿಗಳ ಜೊತೆ ವಾಹನದಲ್ಲಿ ಸಂಚರಿಸಿ
ಕೇಸರಿ ಸಿಂಹ‌ ಸೇರಿದಂತೆ ವಿವಿಧ ಪ್ರಾಣಿಗಳನ್ನು ವೀಕ್ಷಿಸಿದರು.

ಕಾರ್ಯನಿರ್ವಾಹಕ ನಿರ್ದೇಶಕರು ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದ Dr Rajesh Naik ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆನಂದ,ವಲಯ ಅರಣ್ಯಾಧಿಕಾರಿ (ಪ್ರಭಾರ) ನಿಲೀಮಾ ಎಸ್, ಜಿಯಾಲಾಜಿಕಲ್ ಪಾರ್ಕಿನ ವೈದ್ಯಾಧಿಕಾರಿಗಳಾದ ವಾಣಿ, ಹಾಗೂ ದಾದಾಪೀರ, ಕಾಳಪ್ಪ, ಅಂಜಿನಪ್ಪ, ಗುಜ್ಜಲ್ ನಾಗರಾಜ್, ದೀಪಕ್, ಪ್ರಭಾಕರ ಮತ್ತು ಡಿಎವಿ ಸ್ಕೂಲ್ ವಿದ್ಯಾರ್ಥಿಗಳು, ಜಿಯಾಲಾಜಿಕಲ್ ಪಾರ್ಕನ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here