ಕೋಮುದ್ವೇಷ ಬೆಳೆಸುವವರ ವಿರುದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ!!

0
273

ಜಾಗೃತಿ ಬೆಳಕು

ಗೌರಿಬಿದನೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕನ್ನಡ ಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳ ವತಿಯಿಂದ ಪಠ್ಯ ಪುಸ್ತಕ ಕೇಸರಿಕರಣ ಹಾಗೂ ಕೋಮುವಾದಿಕರಣ ವಿರೋಧಿಸಿ ಹಾಗೂ ವಿದುರಾಶ್ವತ್ಥ ಉಳಿಸಲು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಜನ್ಮಭೂಮಿ ಕನ್ನಡಿಗರ ಸೇನೆ ಸಂಘಟನೆಯ ಸಂಸ್ಥಾಪಕ ಸಂಸ್ಥಾಪಕ

ರಾಜ್ಯಾಧ್ಯಕ್ಷರಾದ ಬಾಬು ಹುಸೇನ್ ರವರು ಮಾತನಾಡಿ, ವಿದುರಾಶ್ವತಕ್ಕೆ ಅದರದೇ ಆದ ಇತಿಹಾಸ ಹಾಗೂ ಮಹತ್ವವಿದೆ. ದೇಶ, ವಿದೇಶಗಳಲ್ಲಿ ವಿದುರಾಶ್ವತದ ಬಗ್ಗೆ ಮಾತನಾಡುತ್ತಾರೆ. ಇಂತಹ ಐತಿಹಾಸಿಕ ತಾಣಕ್ಕೆ ಕೆಲ ಕಿಡಿಗೇಡಿ ಸಂಘಟನೆ ಗಳು ಬಂದು ಕೋಮುದ್ವೇಷ ಬೆಳೆಸಲು ಮುಂದಾಗಿರುವುದು ಅಕ್ಷಮ್ಯ ಎಂದರು. ಇಂತಹ ಅಸಂವಿಧಾನಿಕ ಚಟುವಟಿಕೆ ಗಳು ನಡೆದಾಗ ಸರ್ಕಾರ ಎಚ್ಚೆತ್ತುಕೊಂಡು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದರು. ಯಾವುದೇ ಕಾರಣಕ್ಕೂ ಸಾಮರಸ್ಯ ಪ್ರಜಾಪ್ರಭುತ್ವ ಭಾರತವನ್ನು ಕೋಮುವಾದಿ

ರಾಷ್ಟ್ರವನ್ನಾಗಿಸಲು ಬಿಡುವುದಿಲ್ಲ. ಎಲ್ಲ ಕನ್ನಡಪರ, ಕಾರ್ಮಿಕ, ಮಹಿಳಾ ಪರ ಸಂಘಟನೆಗಳು ಒಂದಾಗಿ ಕೋಮುವಾದಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಅಂಬರಿಷ್ ರವರು ಬೆಂಗಳೂರು ಜಿಲ್ಲಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕನ್ನಡ ರಣಧೀರರ ಪಡೆ ರಾಜ್ಯಾಧ್ಯಕ್ಷರಾದ ಚೇತನಗೌಡ, ಮೈಕೋ ಕನ್ನಡ ಬಳಗದ ರಾಜ್ಯಾಧ್ಯಕ್ಷ ರಾದ ಮಂಜುನಾಥ, ಮಹಿಳಾ ಸಂಘಟನೆಯ ಸುಷ್ಮಾ, ಹಾಗೂ ರೈತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು
ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ವರದಿ :- ಸೈಯದ್ ಅಹ್ಮದ್

LEAVE A REPLY

Please enter your comment!
Please enter your name here