ಕೊಡಗು ಜಿಲ್ಲೆಯ ಪೋಲಿಸರಿಂದ ಭರ್ಜರಿ ಬೇಟೆ!!!

0
239

ಕೊಡಗು ಜಿಲ್ಲೆ ವಿರಾಜಪೇಟೆ: (ಜಾಗೃತಿ ಬೆಳಕು)

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಕೂರು ಹೊಸೇರಿ ಗ್ರಾಮದ ಕೂತಂಡ ಸುಬ್ಬಯ್ಯರವರ ಮನೆಯಲ್ಲಿ ನಡೆದ ಕಳುವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿಯವರು ಹಾಗೂ ಕೊಡಗು ಡಿಸಿಆರ್‌ಬಿ ಘಟಕದ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಆರೋಪಿಗಳ ಪತ್ತೆಯ ಬಗ್ಗೆ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರವರು ಮತ್ತು ಸಿದ್ದಾಪುರ ಪೊಲೀಸ್ ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿಯವರುಗಳು ಹಾಗೂ ಡಿ.ಸಿ.ಆರ್.ಬಿ.ನಿರೀಕ್ಷಕರವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಹಚ್ಚಲು ಮಾರ್ಗದರ್ಶನವನ್ನು ನೀಡಿದ್ದರು.

ಆರೋಪಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ಇಬ್ಬರು

ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.

ಬಂಧಿತರ ಹೆಸರು ಮತ್ತು ವಿವರ: 1. ಕುರ್ಬನ್ ಆಲಿ, ತಂದೆ ಹುಸೈನ್ ಪ್ರಾಯ? ವರ್ಷ, ಕೂಲಿಕೆಲಸ, ಸ್ವಂತ ವಿಳಾಸ, ನದಿ‌ ಕಾಸ್, ಬೆಚಿಮರಿ, ಧರಂಗ್, ಆಸ್ಸಾಂ ರಾಜ್ಯ ಹಾಲಿ ವಾಸ ದುಬಾರೆ ಚೆಟ್ಟಿನಾಡು – ಪ್ಲಾಂಟೇಶನ್, ಮೇಕೂರು 2. ಮಹಿಶುದ್ದೀನ್ ಆಲಿ, ತಂದೆ ಲೇಟ್ ಅಬ್ದುಲ್ ಬರಕ ಆಲಿ, ಪ್ರಾಯ 28 ವರ್ಷ, ಕೂಲಿಕೆಲಸ, ಸ್ವಂತ

ವಿಳಾಸ, ವಾರೋಪಾರಾ ಗ್ರಾಮ, ಖಾರುಪೇಟಿಯಾ ಅಂಚೆ, ದೊಂಗ ಜಿಲ್ಲೆ, ಆಸ್ಸಾಂ ರಾಜ್ಯ ಹಾಲಿ ವಾಸ

ದುಬಾರೆ ಚೆಟ್ಟಿನಾಡು – ಪ್ಲಾಂಟೇಶನ್, ಮೇಕೂರು ಹೊಕ್ಕೇರಿ ಗ್ರಾಮ ಬಂಧಿತರಿಂದ ವಶಪಡಿಸಿಕೊಂಡ ಸ್ವತ್ತುಗಳ ವಿವರ ಹಾಗೂ ಮೌಲ್ಯ
ಚಿನ್ನಾಭರಣ ಒಟ್ಟು ತೂಕ 247.7 ಗ್ರಾಂ ಹಾಗೂ ಬೆಳ್ಳಿಯ ಪೀಚೆ ಕತ್ತಿ, ಒಟ್ಟು ರೂ. 11,70,000/=(ಹನ್ನೊಂದು ಲಕ್ಷದ ಎಂಬತ್ತು ಸಾವಿರ ರೂ) ಮೌಲ್ಯದ ಸ್ವತ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಕೊಡಗು ಜಿಲ್ಲೆಯಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು. ಹೆಚ್ಚಿನ ಅಪರಾದಗಳಲ್ಲಿ ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ಭಾಗಿಯಾಗಿರುವುದು ಕಂಡು ಬರುತ್ತದೆ. ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವಾಗ ತೋಟದ ಮಾಲೀಕರು ಕಡ್ಡಾಯವಾಗಿ ಕಾರ್ಮಿಕರ ಅಪರಾದ ಹಿನ್ನಲೆಯನ್ನು ಪರಿಶೀಲಿಸಿಕೊಂಡು ಅವರಿಂದ ನೈಜ ದಾಖಲಾತಿಗಳನ್ನು (ಗುರುತಿನ ಚೀಟಿಯನ್ನು ಪರಿಶೀಲಿಸಿ ಹೊಂದಿಕೊಂಡು ಕೆಲಸಕ್ಕೆ ನೇಮಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಹಾಗೂ ಕಾರ್ಮಿಕರ ಇತ್ತಿಚ್ಚಿನ ಭಾವಚಿತ್ರವನ್ನು ಹೊಂದಿಕೊಳ್ಳುವುದು, ಹಾಗೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕೆಲಸಕ್ಕೆ ನೇಮಿಸಿಕೊಂಡ. ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಸಾರ್ವಜನಿಕರಿಗೆ ಈ ಮೂಲಕ ತಿಳಿಯ ಪಡಿಸುತ್ತೇವೆ ಮುಖ್ಯವಾದ ವಿಷಯ ಏನಂದರೆ ಯಾವುದೇ ಅಪರಾಧ ಕಂಡುಬಂದಲ್ಲಿ 112 ಗೆ ಕರೆ ಮಾಡಿ ಮಾಹಿತಿ ಕೊಡಿ ಯಂದು ಪೊಲೀಸ್ ವೃತ್ತ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣಾ ಪಿಎಸ್‌ಐ ಮಾಧ್ಯಮದ ಮುಖಾಂತರ ಜನರಲ್ಲಿ ಮನವಿ ಮಾಡಿಕೊಂಡರು.

ವರದಿ :- ಸೈಯದ್ ಅಹಮದ್

LEAVE A REPLY

Please enter your comment!
Please enter your name here