ಕೊಂಡನಾಯಕನಹಳ್ಳಿ ಗ್ರಾಮದಲ್ಲಿ ಮೆಣ್ಣತ್ತಿನ ಅಮವಾಸ್ಯೆ ಪ್ರಯುಕ್ತ ಜೋಡು ಎತ್ತುಗಳ ಮೆರವಣಿಗೆ!! 

0
323

ಹೊಸಪೇಟೆ ನ್ಯೂಸ್ (ಜಾಗೃತಿ ಬೆಳಕು)

 ಕೊಂಡನಾಯಕನಹಳ್ಳಿಯ ಗ್ರಾಮದಲ್ಲಿ ಮೆಣ್ಣತ್ತಿನ ಅಮವಾಸ್ಯೆ ಪ್ರಯುಕ್ತ ಜೋಡು ಎತ್ತುಗಳ ಮೆರವಣಿಗೆ!! 

ಹೊಸಪೇಟೆಯ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಂಖಡರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಅವರು ಭಾಗವಹಿಸಿ. ಮಾತನಾಡಿ ಸಮಸ್ತ ನಾಡಿನ ರೈತಭಾಂಧವರಿಗೆ ಮೆಣ್ಣತ್ತಿನ ಅಮವಾಸ್ಯೆಯ ಶುಭಕೋರಿದರು..


ಇಡೀ ದೇಶಕ್ಕೆ ಅನ್ನದಾತರಾಗಿರುವ ಹಾಗು ಭಾರತ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ದಿನಚರಿ ಪ್ರಾರಂಭವಾಗುವುದೆ  ಈ ಎತ್ತುಗಳಿಂದ ಅಂತಹ ಎತ್ತುಗಳಿಗೆ ಪೂಜ್ಯನೀಯ ಭಾವದಿಂದ ಆರಾಧಿಸುವ ಹಬ್ಬದ ಪ್ರಯುಕ್ತ ಈ ಒಂದು ಮಣ್ಣೆತ್ತಿನ ಅಮವಾಸ್ಯೆಯನ್ನು ಪ್ರತಿವರ್ಷವೂ ಆಚರಿಸುತ್ತಾರೆ . ಹಾಗು ಆ ಭಗವಂತನ ಆಶಿರ್ವಾದದಿಂದ ದೇಶದಾದ್ಯಂತ  ಉತ್ತಮ ಮಳೆ ಬೆಳೆಯಾಗಿ ಹಸಿರು ಸಮೃದ್ಧವಾಗಿ ಎಲ್ಲರೂ ಸುಖ, ಶಾಂತಿ, ನೆಮ್ಮದಿ, ಹಾಗು ಪ್ರೀತಿ ಪ್ರೇಮ ವಾತ್ಸಲ್ಯ ದಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು.     ಸಮಾರಂಭದಲ್ಲಿ ಮಾಜಿನಗರ ಸಭಾ ಸದಸ್ಯರಾಗಿರುವ ಎಸ್ ಪಿ. ಬಸವರಾಜಪ್ಪ, ಪಿ. ರಾಜಪ್ಪ, ಸಿ. ಚೆನ್ನ ಮಲ್ಲೇಶ್, ಆರ್. ಆರ್ ತಾಯಪ್ಪ, ವಿ.ಗಾಳೆಪ್ಪ, ಎಂ.ಪಿ.ಕೆ. ಮಂಜಪ್ಪ, ಸಿರಿಗೇರಿ ಈರಣ್ಣ,ಗೋಗಿ ಕಣಿಮೆಪ್ಪ, ಗೋಗಿ ಸೋಮಪ್ಪ, ದೊಡ್ಡ ಬಸಪ್ಪ, ಹಾಗು ಗ್ರಾಮದ ಮುಖಂಡರು , ಹಾಗು ಸದ್ಭಕ್ತರು ಉಪಸ್ಥಿತರಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here