ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿರುವ ಒಂದು ದೇಶ-ಒಂದು ಚುನಾವಣೆ ಮಾಡಲು ಕಷ್ಟ,

0
114

ಹೊಸಪೇಟೆ :(ವಿಜಯನಗರ) ಜಾಗೃತಿ ಬೆಳಕು

  ಸಾಧ್ಯ ಇಂದು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವಿಧಾನ ಸಭಾ, ಮತ್ತು ಸ್ಥಳೀಯ ಮಟ್ಟದಲ್ಲಿ ವಿಸ್ತೃತ ಚರ್ಚೆ ಆಗಬೇಕು, ಸಾಧಕ ಬಾಧಕಗಳ ಬಗ್ಗೆ ಕುರಿತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕಾಗಿದೆ.

ದೇಶದ 140 ಕೋಟಿಗೂ ಹೆಚ್ಚು ಜನಸಂಖ್ಯೆ  ಇರುವ ದೇಶದಲ್ಲಿ ಒಂದು ದೇಶ – ಒಂದು ಚುನಾವಣೆ ಮಾಡಲು  ಚುನಾವಣೆ ಆಯೋಗ ಚುನಾವಣೆ ಮಾಡಲು ತಾಂತ್ರಿಕವಾಗಿ ಬೇಕಾಗುವ ನೈಪುಣ್ಯತೆ ಹೊಂದಿಲ್ಲ.

ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಚುನಾವಣೆ ಸುಧಾರಣೆ ತರಬೆಕಾದರೆ ದೇಶದ ಸಂವಿಧಾನದ ಬಹಳಷ್ಟು ವಿರೋಧಿಗಳಿಗೆ ತಿದ್ದುಪಡಿ ಮಾಡಬೇಕಿದೆ, ಸಧ್ಯಕ್ಕೆ ಅಂತಹ ಪರಿಸ್ಥಿತಿ ಬಂದರೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚೆಯಾಗಿ ಒಪ್ಪಿಗೆ ಪಡೆಯವುದು ಕಷ್ಟ, ಇತ್ತೀಚೆಗೆ ಕೆಲವೂಂದು ರಾಜ್ಯಗಳಲ್ಲಿ ಲೋಕಸಭೆ ಜೋತೆ ವಿಧಾನ ಸಭಾ ಚುನಾವಣೆ ಜರುಗಿದೆ ನೂತನ ರಾಜ್ಯ ಸರ್ಕಾರ ರಚನೆಯಾಗಿವೆ, ಇನ್ನೂ ಕೆಲ ರಾಜ್ಯಗಳಲ್ಲಿ ಆರು ತಿಂಗಳ ನಂತರ  ಚುನಾವಣೆಗಳು ನೆಡೆಯಬೇಕಿದೆ. ಇಂಥಹ ಸಂರ್ಭದಲ್ಲಿ ಒಂದು ದೇಶ ಒಂದು ಚುನಾವಣೆಗೆ ಕೆಲವೊಂದು ರಾಜ್ಯಗಳು ಚುನಾವಣೆಗೆ ಒಪ್ಪಿಗೆ ನೀಡುವುದು ಕಷ್ಟವಾಗುವ ಸಂಭವವಿದೆ.

ಪ್ರಸ್ತುತ ಕೇಂದ್ರ ಸರ್ಕಾರದ ತನ್ನ ನಿರುಧ್ಯೋಗ, ಆರ್ಥಿಕ ಪರಿಸ್ಥಿತಿ, ದೇಶದ ಕೆಲ ಭಾಗಗಳಲ್ಲಿನ ಗಡಿ ಭಾಗದ ರಕ್ಷಣೆಯಂತಹ ವೈಫಲ್ಯಗಳನ್ನು ಮುಚ್ಚಿ ಹಾಕಿ, ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರ ಮಾಡುತ್ತಿದೆ ಎಂದು ಅನ್ನಿಸುತ್ತೆ.

ಲೋಕಸಭೆ, ವಿಧಾನ ಸಭಾ ಚುನಾವಣೆ ಜೋತೆಗೆ ಸ್ಥಳೀಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆ  ಮಾಡುವುದು ಸರಿಯಲ್ಲ  ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣ ನಾಶ ಮಾಡಿದಂತಾಗುತ್ತದೆ.

ಪ್ರಸ್ತುತ ದೇಶದ ಹಣಕಾಸಿನ ಪರಿಸ್ಥಿತಿ, ಒಂದು ದೇಶ ಒಂದು ಚುನಾವಣೆ ನಡೆಸಲು ಬೇಕಾಗುವಷ್ಟು ಸಂಪನ್ಮೂಲ
ಸಧೃಡವಾಗಿಲ್ಲ ಯಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ನಿಂಬಗಲ್ ರಾಮಕೃಷ್ಣ ರವರು ಪತ್ರಿಕೆಗೆ ತಿಳಿಸಿದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here