ಕೆಪಿಸಿಸಿ ವಿಜಯನಗರ ಜಿಲ್ಲಾ ಮಹಿಳಾ ಅಧ್ಯಕ್ಷೆ Dr.ಸಾಹಿರಾಬಾನು ನೇತೃತ್ವದಲ್ಲಿ 150ಕ್ಕೆ ಹೆಚ್ಚು ಮಹಿಳೆಯರು ಮೈಸೂರು ಚಲೋ,,!!!

0
74
Oplus_132096

ವಿಜಯನಗರ ( ಜಾಗೃತಿ ಬೆಳಕು ನ್ಯೂಸ್ )

ನಮ್ಮ ಮುಖ್ಯಮಂತ್ರಿ ನಮ್ಮ ಹೆಮ್ಮೆ.!!

ಕಾಂಗ್ರೆಸ್ ಜನಾಂದೋಲನ ವಿಜಯನಗರ ಜಿಲ್ಲೆಯಿಂದ ಕಾಂಗ್ರೆಸ್ ಜಿಲ್ಲಾ ಮಹಿಳಾಧ್ಯಕ್ಷಿಯಾದ Dr. ಸಾಯಿರಾಬಾನು ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ನಮ್ಮ ನಾಯಕರಾದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲ ಸೂಚಿಸುವ ನಿಟ್ಟಿನಲ್ಲಿ 150 ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತೆಯರು ತಮ್ಮ ಸ್ವಂತ ಖರ್ಚಿನಿಂದ ಮೈಸೂರಿಗೆ ಪ್ರಯಣ ಬೆಳೆಸಿದರು
ಭ್ರಷ್ಟ ಬಿಜೆಪಿ ಮತ್ತು ಜೆಡಿಎಸ್ ಪ್ರತಿಪಕ್ಷಗಳು ತಾವು ಮಾಡಿರುವ ಹಲವಾರು ಭ್ರಷ್ಟ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕರ್ನಾಟಕದ ಜನತೆಗೆ ಗೊತ್ತಿರೋದೇ ವಿಷಯ

ಬಿಜೆಪಿ ಮತ್ತು ಜೆಡಿಎಸ್ ಪ್ರತಿಪಕ್ಷಗಳಿಗೆ ನಾನು ಈ ದಿನ ಒಂದು ಹೆಸರನ್ನು ನಾಮಕರಣ ಮಾಡುತ್ತೇನೆ 40% ಭ್ರಷ್ಟಾಚಾರ ಪ್ರತಿಪಕ್ಷಗಳು ಎಂದು ವಿಜಯನಗರ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸಾಹಿರಬಾನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

6+ ರಾಜ್ಯಕ್ಕೆ ಅನ್ಯಾಯ ಎಸಗುತ್ತಿರುವ ಕೇ೦ದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟಿಸಿ, ಸುಪ್ರೀಂ ಕೋರ್ಟ್ ಮೊರೆ ಹೋಗಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣವನ್ನು ಪಡೆದ ಏಕೈಕ ಸರ್ಕಾರ ನಮ್ಮ ಕಾಂಗ್ರೆಸ್‌ ಸರ್ಕಾರ ನಮ್ಮ ನಾಯಕ ಸಾಧಾರಣ ಸಾಮಾನ್ಯ ಬಡ ರೈತ ಕುಟುಂಬದಿಂದ ಬಂದಿರುವ ನಾಯಕ ಸಿದ್ದರಾಮಯ್ಯ ರವರು ಜನಸಾಮಾನ್ಯರಿಗೋಸ್ಕರ ಒಳ್ಳೆಯ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಮುಕ್ತ ಸರ್ಕಾರ ಮತ್ತು ಆಡಳಿತ ನಡೆಸುತ್ತಿರುವ ನಾಯಕ ನಮ್ಮ ಸಿದ್ದರಾಮಯ್ಯ, ನಾವು ಇಂದು 25 ವಾಹನಗಳಲ್ಲಿ ಸರಿಸುಮಾರು ನೂರು ಜನ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕರನ್ನು ಬೆಂಬಲಿಸಲು ಮೈಸೂರು ದತ್ತ ನಡೆದಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿದವರು…
ವಿಜಯನಗರ ಜಿಲ್ಲಾ ಮಹಿಳಾ ಅಧ್ಯಕ್ಷಿ Dr.ಸಾಹಿರಾಬಾನು, ಯೋಗಲಕ್ಷ್ಮ, ಬಾನು ಬೀ,
ಭಾಗ್ಯಲಕ್ಷ್ಮಿ,, ಸಂಗೀತಾ ಸಿಂಗ್,
ಅನಿತಾ ರಾಣಿ,ಸುನಂದಮ್ಮ, ಹಲವರು ಮಹಿಳಾ ಕಾರ್ಯಕರ್ತರು ಭಾಗವಹಿಸಿದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here