ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ಶಾಸಕ ಮುನಿರತ್ನ ರವರನ್ನು ಕೂಡಲೇ ಬಂಧಿಸಿ:ಸೋಮಶೇಖರ್ ಬಣ್ಣದಮನೆ,!

0
74

ಹೊಸಪೇಟೆ :ವಿಜಯನಗರ (ಜಾಗೃತಿ ಬೆಳಕು)

  ಪರಿಶಿಷ್ಟ ಸಮುದಾಯವನ್ನು ಅವೇಳನ ಮಾಡಿದ ಮತ್ತು ಒಕ್ಕಲಿಗ ಸಮುದಾಯವನ್ನು ಸಹ  ಅತ್ಯಂತ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ಶಾಸಕ ಮುನಿರತ್ನ ನನ್ನ  ಕೂಡಲೇ ಬಂಧಿಸಿ ಜಾತಿನಿಂದನೆ ಕೇಸ್ ದಾಖಲಿಸಿ  ಮತ್ತು  ಆತನ ಶಾಸಕ ಸದಸ್ಯತ್ವವನ್ನ ರದ್ದು ಪಡಿಸಬೇಕೆಂದು  ಒತ್ತಾಯಿಸಿ ಇಂದು  ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಮನವಿಯನ್ನ   ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು

  ಈ ಸಂದರ್ಭದಲ್ಲಿ  ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ನಿಮಗಲ್ ರಾಮಕೃಷ್ಣ, ವಿಜಯನಗರ ಜಿಲ್ಲಾ  ಕಾನೂರು ಘಟಕದ ಅಧ್ಯಕ್ಷರಾದ ಮಹೇಶ್ ವಕೀಲರು, ಬಳ್ಳಾರಿ ಶ್ರೀಕೃಷ್ಣದೇವರಾಯ  ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪೀರ್ ಭಾಷಾ, ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಯುವ ಬರಹಗಾರ ವಿಶಾಲ್ ವಿಶಾಲ್ ಮಾಸರ್, ಚಲವಾದಿಕೇರಿ ಪ್ರಕಾಶ್, ಸುನಿಲ್ ಕುಮಾರ್, ಜಯಣ್ಣ ಪಟ್ಟಿ, ದಮಾಣಿ ಅಂಬರೀಶ್, ಇಮ್ತಿಯಾ, ಮೋಹನ್ ಕುಮಾರ್, ರಮೇಶ್ ಕುಮಾರ್, ಯೋಹನ್, ಸುನಿಲ್ ಕುಮಾರ್ ಚಿತ್ತವಾಡಗಿ, ಅಲ್ಲಾಭಕ್ಷಿ ಕಲಬುರ್ಗಿ ಸೇರಿದಂತೆ ಇನ್ನೂ ಅನೇಕ ಜನರು ಪಾಲ್ಗೊಂಡಿದ್ದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here