ಕೂಡ್ಲಿಗಿ ನ್ಯಾಯಾಲಯದಲ್ಲಿ ವಕೀಲರ ಮೇಲೆ ನಡೆದ ಹಲ್ಲೆ!!!!

0
359

ವಿಜಯನಗರ ಜಿಲ್ಲೆ ಕೂಡ್ಲಿಗಿ

ಕೂಡ್ಲಿಗಿ ನ್ಯಾಯಾಲಯದಲ್ಲಿ ವಕೀಲರ ಮೇಲೆ ನಡೆದ ಹಲ್ಲೆ!!!

ಈ ದಿನ ದಿನಾಂಕ: 11/03/2022 ರಂದು ಬೆಳಿಗ್ಗೆ 10-30 ಗಂಟೆಗೆ ಕೊಟ್ಟ ಪಟ್ಟಣದ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ, ನ್ಯಾಯಾಲಯದ ಕಟ್ಟಡದ ಪ್ರವೇಶ ದ್ವಾರದ ಬಳಿ ಆರೋಪಿತನಾದ ಹನುಮಾನಾಯ ತಂದೆ ರಾಮಾನಾಯ್ಕ, 59 ವರ್ಷ, ಜಾತಿ ಲಂಬಾಣಿ ಜನಾಂಗ, ವೃತ್ತಿ: ಕೂಲಿ ವ್ಯವಸಾಯ ಕೆಲಸ, ವಾಸ: ಮೋತಿಕಲ್ ತಾಂಡಾ ಈತನು ಆತನ ವಿರುದ್ಧದ ಪಾಲುವಿಭಾಗ ದಾನ: ಒ.ಎಸ್. ನಂಬರ್ 282/2021 ರಲ್ಲಿ ಫಿರಾದುದಾರರಾದ ಶ್ರೀ ಸ್ವರೂಪಾನಂದ ನಾಯ್ಕ ತಂದೆ ನೇಮ್ಯಾನಾಯ್ಕ, 35 ವರ್ಷ, ವಕೀಲರು, ವಾಸ: ಮೋಹಿಕಲ್‌ತಾಂಡ, ಕೊಟ್ಟೂರು ತಾಲೂಕು ಹಾಲಿ ವಾಸ: ಕೂಡ್ಲಿಗಿ ರವರ ಕಕ್ಷಿದಾರರಾದ ಕೀಮ್ಯಾಪಾಯ ತಂದೆ ಚಂದ್ರನಾಯ್ಕ, ವಾಸ: ಮೋತಿಕಲ್ ಇವರ ಪರವಾಗಿ ವಕಾಲತ್ತು ನಡೆಸುತ್ತಿದ್ದು, ಈ ದಾವ ಹೂಡಿದ್ದಾಗಿನಿಂದ ಶ್ರೀ ಸ್ವರೂಪಾನಂದ ನಾಯ್ಕ, ವಕೀಲರ ಮೇಲೆ ಹನುಮಾನಾಯ್ಕನು ದ್ವೇಷ ಇಟ್ಟುಕೊಂಡು ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ಹಾಜರಾಗದಂತೆ ಮಾಡುವ ಉದ್ದೇಶದಿಂದ ಫಿರಾದುದಾರರ ಮೇಲೆ ಕೊಲೆ ಮಾಡಲು ಸಂಚು ರೂಪಿಸಿ ತನ್ನ ಬಳಿ ಹಂತವಾದ ಚಾಕುವನ್ನು ಇಟ್ಟುಕೊಂಡು ನ್ಯಾಯಾಲಯದ ಕಟ್ಟಡಕ್ಕೆ ಆಪರಾಧಿಕ ಉದ್ದೇಶದಿಂದ ಅಕ್ರಮವಾಗಿ ಪ್ರವೇಶ ಮಾಡಿ, ಅವರನ್ನು ಕೊಲೆ ಮಾಡಲು ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ ವೇಳೆಯಲ್ಲಿ ನ್ಯಾಯಾಲಯದ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯವರು ಮತ್ತು ವಕೀಲರು ಸೇರಿ ಆರೋಪಿತನಾದ ಹನುಮಾನಾಯ್ಕ ಈತನನ್ನು ವಶಕ್ಕೆ ಪಡೆದಿದ್ದು ಮತ್ತು ಫಿಲಾದುದಾರರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅವರಿಂದ ದೂರನ್ನು ಪಡೆದು, ಕೂಡ್ಲಿಗಿ ಠಾಣೆ ಗುನ್ನೆ ನಂಬರ್: 64/2022 ಕಲಂ, 452, 504, 506(2), 307 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣವು ಸೂಕ್ಷ್ಮವಾಗಿರುವುದರಿಂದ ಪ್ರಕರಣದ ತನಿಖೆಯನ್ನು ಡಿ.ಎಸ್.ಪಿ. ಕೂಡ್ಲಿಗಿ ರವರಿಗೆ ವಹಿಸಲಾಗಿರುತ್ತದೆ. ಪ್ರಕರಣದಲ್ಲಿಯ ಆರೋಪಿತನಾದ ಹನುಮಾನಾಯ್ಕನನ್ನು ದಸ್ತಗಿರಿ ಮಾಡಿ ಪ್ರಗತಿಯಲ್ಲಿರುತ್ತದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here