ಕಾರು ಪಲ್ಟಿ ಓರ್ವ ಸ್ಥಳದಲ್ಲೇ ಸಾವು,ನಾಲ್ವರು ಗಾಯ!!

0
310
ಅಪಘಾತದಲ್ಲಿ ಪಲ್ಟಿಯಾದ ಕಾರು

ವಿಜಯಪುರ ಜಿಲ್ಲೆ ಮುದ್ದೇಬಿಹಾಳ


ಮುದ್ದೇಬಿಹಾಳ : ತಾಲೂಕಿನ ಗಂಗೂರ ಕ್ರಾಸ್ ಬಳಿ ಕಾರು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ದೇವರ ಹಿಪ್ಪರಗಿಯ ಸಲೀಂ ಉರ್ಫ್ ಸಲ್ಮಾನ್ ಬಂದೇನವಾಜ್ ಟಕ್ಕಳಕಿ(20) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಹುನಗುಂದ ಕಡೆಯಿಂದ ಮುದ್ದೇಬಿಹಾಳ ಮಾರ್ಗವಾಗಿ ದೇವರ ಹಿಪ್ಪರಗಿ ಕಡೆಗೆ ಕಾರು ತೆರಳುತ್ತಿತ್ತು. ವಾಹನ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನು ನಾಲ್ವರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:-ಗಪೂರ ಮುಜಾವರ

LEAVE A REPLY

Please enter your comment!
Please enter your name here