ಭಾರತ ಜೋಡೋ ಐಕ್ಯತಾ ಪಾದಯಾತ್ರೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಸಿದ್ಧತೆ!
ಹೊಸಪೇಟೆ:- ಜಾಗೃತಿ ಬೆಳಕು ಬಿಗ್ ಬ್ರೇಕಿಂಗ್
90 ವಿಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ, ಕಾಂಗ್ರೆಸ್ ಪಕ್ಷದ ಅಕಾಂಕ್ಷಿಗಳ, ಮೂಂಚೂಣಿ ಘಟಕಗಳು ಅಧ್ಯಕ್ಷರ ಸಭೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಭಾರತ ಜೋಡೋ ಪಾದಯಾತ್ರೆಯ ಬಳ್ಳಾರಿಯಲ್ಲಿ ಜರುಗಲಿರುವ ಬೃಹತ್ ಬಹಿರಂಗ ಸಭೆಯ ಉಸ್ತುವಾರಿ ಎಂ.ಬಿ.ಪಾಟೀಲ್ ರವರ ಅದೇಶದ ಮೇರೆಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್.ಅಬ್ದುಲ್ ವಹಾಬ್ ರವರ ಅಧ್ಯಕ್ಷತೆಯಲ್ಲಿ ಇಂದು ಹೊಸಪೇಟೆ ನಗರದ ಖಾಸಗಿ ಹೋಟೆನಲ್ಲಿ ಸಭೆಯನ್ನು ಅಯೋಜಿಸಲಾಗಿತ್ತು.
ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀಧರ್ ಬಾಬು ರವರು ರಾಜ್ಯಸಭೆಯ ಸಧ್ಯಸರು, ಮಾತನಾಡುತ್ತಾ ಬಳ್ಳಾರಿ ನಗರದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಜರುಗಲಿರುವ ಪಾದಯಾತ್ರೆ ಹಾಗೂ ಬೃಹತ್ ಬಹಿರಂಗ ಸಭೆಗೆ ವಿಜಯನಗರ ವಿಧಾನ ಕ್ಷೇತ್ರದಿಂದ ಎಲ್ಲಾ ಅಕ್ಷಾಕ್ಷಿಗಳು ಮುಖಂಡರೆಲ್ಲರು ಸೇರಿ ಕನಿಷ್ಟ 25 ಸಾವಿರ ಜನರನ್ನು ಸೇರಿಸಿ ಸಭೆಯನ್ನು ಯಶಸ್ಸು ಮಾಡಲು ಸಿದ್ದತೆ ಮಾಡಬೇಕೆಂದು ಮುಖಂಡರಿಗೆ ತಿಳಿಸಿದರು.
ಐತಿಹಾಸಿಕ ಪಾದಯಾತ್ರೆ ರಾಜ್ಯದಲ್ಲಿ ಕೇವಲ ಬಳ್ಳಾರಿ ನಗರದಲ್ಲಿ ಮಾತ್ರ ಬಹಿರಂಗ ಸಭೆ ಜರುಗುತ್ತಿದ್ದು ಈ ಸಭೆಗೆ ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಬಿಜಾಪುರ, ಚಿತ್ರದುರ್ಗ ಜಿಲ್ಲೆಗಳಿಂದ ಸುಮಾರು 5 ಲಕ್ಷ ಜನರು ಸೇರುವ ಸಂಭವವಿದೆ ಆದ್ದರಿಂದ 90-ವಿಜಯನಗರ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಸೇರಿ ಪಾದಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಈ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, 90-ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಅರ್, ಮಂಜುನಾಥ್
ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ವೈ ಘೋರ್ಪಡೆ, ಮಾಜಿ ಶಾಸಕರಾದ ಹೆಚ್.ಆರ್.ಗವಿಯಪ್ಪ, ರಾಜಶೇಖರ್ ಹಿಟ್ನಾಳ,
ಗುಜ್ಜಲ ರಘು, ಹೆಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಕುರಿ ಶಿವಮೂರ್ತಿ , ಸೈಯದ್ ಮೋಹಮ್ಮದ್, ಜಿಲ್ಲಾಧ್ಯಕ್ಷರಾದ ಬಿ. ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಸೀ.ಖಾಜಾ ಹುಸೇನ್, ಮುಖಂಡರಾದ ಎಲ್.ಸಿದ್ದನಗೌಡ, ವೆಂಕಟೇಶ್ವರ ರೆಡ್ಡಿ, ಗುಜ್ಜಲ ನಾಗರಾಜ್, ಭಾಗ್ಯಲಕ್ಷ್ಮೀ ಭರಾಡೆ, ನಿಂಬಗಲ್ ರಾಮಕೃಷ್ಣ,
ಎಂ.ಸಿ.ವೀರಸ್ವಾಮಿ, ಬಿ.ಮಾರೆಣ್ಣ, ಕೊಟಗಿನಾಳ್ ಹುಲುಗಪ್ಪ, ಡಾ.ಸಲೀಂ, ಕಮಲಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷ ಸೈಯ್ಯದ್ ಆಮಾನುಲ್ಲಾ, ಮಾಜಿ ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಕಮಲಾಪುರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಮುಕ್ತಯಾರ್ ಪಾಷ, ಬಿ.ಆರ್.ಮಳಲಿ, ಮುಖಂಡರಾದ ಅಭೀದ್ ಹುಸೇನ್, ಅಯ್ಯಾಳಿ ಮೂರ್ತಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಡಿ.ವೆಂಕಟರಮಣ, ವಿ.ಸೋಮಪ್ಪ, ಯುವ ಮುಖಂಡರಾದ ಭರತ್ ಕುಮಾರ್, ವೀರಭದ್ರ ನಾಯಕ, ಪಿ.ಬಾಬು, ಪಾಂಡು, ಬಣ್ಣದ ಮನೆ ಸೋಮಶೇಖರ್, ಲಿಂಗಣ್ಣ ನಾಯಕ, ಕೆ. ಪಿ.ಗುರುನಾಥ್, ರಾಮಚಂದ್ರ ಗೌಡ, ಹೆಚ್. ಗುಜ್ಜಲ ರಾಘವೇಂದ್ರ, ವಿಜಯಕುಮಾರ್, ಅಬ್ದುಲ್ ಜಲೀಲ್. ಕಟಕಿ ಸಾಧಿಕ್. ಎಸ್.ಬಿ. ಮಂಜುನಾಥ್, ನವಾಜ್, ಅಂಕಲೇಶ್ ನಾಯಕ, ವೀರೆಶ್ ಕುಮಾರ್, ಶೇಕ್ ತಾಜುದ್ದೀನ್, ಹೆಚ್.ಬಿ. ಶ್ರೀನಿವಾಸ ಪಿ.ರಾಜಾ ಸಾಭ್, ಶ್ರೀಮತಿ ಬಿ.ರಂಗಮ್ಮ, ಅನಿತಾ ರಾಣಿ, ನೇತ್ರಾ ಪಾಟೀಲ್, ಕವಿತಾ ನಾಯಕ, ಮಂಜುಳ, ನೂರ್ ಜಹಾನ್, ಕನ್ನೇಶ್ವರ, ಚಾಂದ್, ಗೀತಾ, ಸೇರಿದಂತೆ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ನಗರ ಸಭೆ,ಪಟ್ಟಣ ಪಂಚಾಯಿತಿ, ಹಾಲಿ ಸದಸ್ಯರು/ಮಾಜಿ ಸಧ್ಯಸರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಗಳು. ಮಾಜಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಸಧ್ಯಸರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು. ಗ್ರಾಮ ಪಂಚಾಯಿತಿ ಹಾಲಿ/ಮಾಜಿ ಅಧ್ಯಕ್ಷರು ಹಾಗೂ ಸದ್ಯಸರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ವರದಿ :-ಮೊಹಮ್ಮದ್ ಗೌಸ್