ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ!ವಿಜಯ ನಗರ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ!

0
411

ವಿಜಯನಗರ ಜಿಲ್ಲೆ, ಬಿಗ್ ಬ್ರೇಕಿಂಗ್

ವಿಜಯನಗರ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಅಂದರೆ 18/12/2021 ರಂದು ಬೆಳಿಗ್ಗೆ 11 ಗಂಟೆಗೆ ಹೊಸಪೇಟೆ ನಗರದ ಪ್ರಿಯದರ್ಶಿನಿ ಹೋಟೆಲ್ ನ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯ ನಗರ ಜಿಲ್ಲಾ ಘಟಕದ ಉಧ್ಗಾಟನೆಯನ್ನು ಪ್ರವಾಸೋಧ್ಯಮ ಸಚಿವರು ಹಾಗೂ ವಿಜಯನಗರ ಜಿಲ್ಲೆಯಾಗಿ ಉದಯವಾಗಲು ಕಾರಣಿಭೂತರಾಗಿರುವ ಮಾನ್ಯ ಆನಂದ್ ಸಿಂಗ್ ರವರು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಚಾಲನೆ ನೀಡಿದಂತ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ, ವಿಜಯ ನಗರ ಜಿಲ್ಲಾ ನೂತನ ಅಧ್ಯಕ್ಷರಾದ

ಸತ್ಯನಾರಾಯಣ,ಪ್ರ.ಕಾ.ಬಿ.ಎಚ್.ಎಸ್.ರಾಜು,ಖಜಂಚಿಗಳಾದ ಅನಂತ ಜೋಷಿ,ಉಪಾಧ್ಯಕ್ಷರಾದ ಉಜಿನಿ ರುದ್ರಪ್ಪ,ಕಾರ್ಯದರ್ಶಿಗಳಾದ ಪ್ರಕಾಶ್ ಕಾಕುಬಾಳು ಹಾಗೂ ಇನ್ನೀತರರು ಉಪಸ್ಥಿತರಿದ್ದ ಈ ಅರ್ಥಪೂರ್ಣ ಸಮಾರಂಭಕ್ಕೆ ಮರಿಯಮ್ಮನಹಳ್ಳಿ,ಹೆಚ್.ಬಿ.ಹಳ್ಳಿ,ಕೂಡ್ಲಿಗಿ,ಕೊಟ್ಟೂರು,ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ಭಾಗದ ಪತ್ರಕರ್ತರು ತಾಲೂಕು ಅಧ್ಯಕ್ಷರು ,ಪದಾಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು…..
ವಿಜಯನಗರ ಜಿಲ್ಲಾ ಘಟಕ ಉದ್ಘಾಟನೆ ಸಂದರ್ಭದಲ್ಲಿ ಪ್ರವಾಸೋದ್ಯಮ ಮತ್ತು ವಿಜಯನಗರ/ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆನಂದ್ ಸಿಂಗ್ ಅವರನ್ನು ಮಂತ್ರಾಲಯ ಶ್ರೀಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಬಳ್ಳಾರಿ-ವಿಜಯನಗರ-ಕೊಪ್ಪಳ ಜಿಲ್ಲಾ ಕೋ-ಆರ್ಡಿನೇಟರ್ ಹಾಗೂ ಪತ್ರಕರ್ತ ಅನಂತ ಪದ್ಮನಾಭ ರಾವ್ ಸನ್ಮಾನಿಸಿದ ಕ್ಷಣ. ಹೊಸಪೇಟೆ ಮಠಾಧಿಕಾರಿ ಪವನಾಚಾರ್ಯ ಇದ್ದರು
.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here