ಕರಕ್ಯಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಯಿಂದ ಜನರ ಪರದಾಟ,!!

0
255

ಔರಾದ:-ಜಾಗೃತಿ ಬೆಳಕು (ಬ್ರೇಕಿಂಗ್ )

ಮಾ,23. ಗ್ರಾಮಕ್ಕೆ ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ರವರು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಯಿಂದ ಜನರು ಪರದಾಡುತ್ತಿರುವದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೇ ಹರಿಸುವಂತೆ ಆಗ್ರಹಿಸಿದರು.

ಗ್ರಾಮದಲ್ಲಿ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾರು ಸಮಸ್ಯೆ ಬಗ್ಗೆ ಹರಿಸುವ ಕಡೆ ಗಮನ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಂಕು ನಿಷ್ಪತೆ, ಹರಿದೇವ ಸಂಗನಾಳ,ಇಬ್ರಾಹಿಂ , ನಬಿ ಮುಲ್ಲಾ, ಸೈಯದ್ ಇಸ್ಮೈಲ್,ರಂಜಿತ್, ಶಾಮ ,ಸಂಜು ಕಂಬಳೆ, ಮುಂತಾದರೂ ಉಪಸ್ಥಿತರಿದ್ದರು.

ವರದಿ:-ಸುಧೀರ್ ಕುಮಾರ್ ಬೀ ಪಾಂಡ್ರೆ

LEAVE A REPLY

Please enter your comment!
Please enter your name here