ಕನ್ನಡಕ್ಕೆ ದ್ರೋಹ ಮಾಡಿದ ನಗರಸಭೆಯ ಅಧಿಕಾರಿಗಳು!!!

0
320

ವಿಜಯನಗರ ಜೆಲ್ಲೆ (ಹೊಸಪೇಟೆ) ಬಿಗ್ ಬ್ರೇಕಿಂಗ್

ಕನ್ನಡಕ್ಕೆ ದ್ರೋಹ ಮಾಡಿದ ನಗರಸಭೆಯ ಅಧಿಕಾರಿಗಳು ಯಂದು ಹೇಳಿದ ಕರ್ನಾಟಕ ರಕ್ಷಣಾ ವೇದಿಕೆಯ ವಿಜಯನಗರ ಜಿಲ್ಲಾಧ್ಯಕ್ಷರು ತಾರೆಹಳ್ಳಿ ಹನುಮಂತಪ್ಪ, ಹೊಸಪೇಟೆ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದರು..

ನಗರಸಭೆಯ ವತಿಯಿಂದ ಸ್ವಚ್ಛ ಭಾರತ ಅಭಿಯಾನವನ್ನು ಸಾರ್ವಜನಿಕರಿಗೆ ಜಾಗೃತಿ
ಮುಡಿಸುವ ಕಾರ್ಯಕ್ಕೆ ಗೋಡೇ ಬರಹದಲ್ಲಿ ಹಿಂದಿ ಭಾಷೆಯಲ್ಲಿ ಬರೆಸಿದ್ದನ್ನು ಖಂಡಿಸಿ ಪ್ರತಿಭಟನೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ,,,

ಸಂಬಂಧಿಸಿದಂತೆ ಹೊಸಪೇಟೆ ನಗರದಲ್ಲಿ ನಿನ್ನೆಯಿಂದಲೇ ನಗರಸಭೆ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಎಂಬ ಗೋಡೆ ಬರಹವನ್ನು ಹಿಂದಿ ಭಾಷೆಯಲ್ಲಿ ಬರೆದು ಕನ್ನಡಿಗರ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದಾರೆ ಕೂಡಲೇ ನಗರಸಭೆ ಆಯುಕ್ತರು ಈ ಪದವನ್ನು ಹಿಂದಿ ಭಾಷೆಯಲ್ಲಿ ಬರೆಸುವ ಬದಲು ಕನ್ನಡದಲ್ಲೇ ಕನ್ನಡಿಗರಿಗೆ ಅರ್ಥ ಅಗುವ ರೀತಿಯಲ್ಲೇ ಸ್ವಚ್ಛ ಭಾರತ ಅಭಿಯಾನ ಯೋಜನೆಯನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಈ ದಿನದಿಂದಲೇ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕ ವತಿಯಿಂದ ಈ ದಿನ ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಸುತ್ತಿದೆ. ಮುಂದಿನ 10 ದಿನಗಳಲ್ಲಿ ಹೊಸಪೇಟೆ ನಗರದಲ್ಲಿ ಇತರಹ ಯಾವುದೇ ಹಿಂದಿಯಲ್ಲಿ ಬರವಣಿಗೆ ಕಾಣಿಸಿಕೊಂಡಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಅನೇಕ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರೆಲ್ಲರು ಸೇರಿ ಮಸಿ ಬಳಿಯುವ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡುತ್ತವೆ….

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here