ಔರಾದ ನಗರದ ಗ್ರಾಮದಲ್ಲಿ ಕುಡಿಯುವ ನೀರಿನ ಪರದಾಟ..!!

0
247

ಜಾಗೃತಿ ಬೆಳಕು -ಔರಾದ

ಔರಾದ ತಾಲ್ಲೂಕಿನ ಸಂತಪುರ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಮಸ್ಕಲ್ ಗ್ರಾಮದ ದಲಿತರ ಓಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದ ಜನ ಪರದಾಡುತ್ತಿದ್ದಾರೆ. ಇಂದು ಮಸ್ಕಲ್ ಗ್ರಾಮದ ದಲಿತರ ಓಣೆಗೆ ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು ಮತ್ತು ಅಲ್ಲಿನ ಜನರೊಂದಿಗೆ ಚರ್ಚಿಸಿದರು, ಈ ಸಂದರ್ಭದಲ್ಲಿ ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನೀರಿಗಾಗಿ ಪರದಾಡುವ ಪರಿಸ್ಥಿತಿ ನಮ್ಮದಾಗಿದೆ ನಮ್ಮ ಸಮಸ್ಯೆಗಳು ಯಾರು ಕೇಳುತಿಲ್ಲಾ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಹೇಳಿದರೆ ಯಾವುದೇ ರೀತಿ ಸಮಸ್ಯೆ ಬಗೆಹರಿಸಿಲ್ಲ ಎಂದು ಹೇಳಿಕೊಂಡರು.ನಂತರ ಮಾತನಾಡಿದ ಸುಧಾಕರ್ ಕೊಳ್ಳುರ ಅವರುಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಬಿಟ್ಟು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋಥರ ವರ್ತಿಸುತ್ತಿರುವುದು ಸರಿ ಎಲ್ಲಾ ಇದು ಖಂಡನೀಯ.

ಮತ್ತು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರು ಓಣೆಗಳಲ್ಲಿಯೇ ಕುಡಿಯೋ ನೀರಿನ ಸಮಸ್ಯೆಗಳಿವೆ, ಹಾಗಾದರೆ ತಾಲೂಕಿನಲ್ಲಿ ಮಾಡಲಾದ scp-tsp ಯೋಜನೆ ಕಾಮಗಾರಿಗಳು ಏಲ್ಲಿ ಹೋದು, ಅದರ ಬಗ್ಗೆ ತನಿಖೆ ನಡೆಸಬೇಕು,ಮಸ್ಕಲ್ ಗ್ರಾಮದಲ್ಲಿನ, ಸಮಸ್ಯೆ ಕೂಡಲೇ ಬಗೆಹರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸುಧಾಕರ್ ಕೊಳ್ಳುರ ಅವರು ತಿಳಿಸಿದರು.

ವರದಿ :-ಸುಧೀರ ಕುಮಾರ್ ಬಿ ಪಾಂಡ್ರೆ

LEAVE A REPLY

Please enter your comment!
Please enter your name here