ಔರಾದ ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ!!!

0
1724

ಬೀದರ್ ಜಿಲ್ಲೆ ಔರಾದ

ಔರಾದನಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಔರಾದ ಪಟ್ಟಣದ ಬಸ್ ನಿಲ್ದಾಣ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶಿವು ಭಕ್ತ ಮಂಡಳಿಯ ಪ್ರಮುಖರಾದ ಶಿವಾಜಿರಾವ ಪಾಟೀಲ್ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜಯಂತಿ ಆಚರಿಸಲಾಯಿತು.

ಖ್ಯಾತ ವೈದ್ಯ ಡಾ ಕಲ್ಲಪ್ಪಾ ಉಪ್ಪೆ ಹಾಗೂ ಬಾಲಾಜಿ ನರೊಟೆ ನೇತ್ರತ್ವದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮ‌ೂಲಕ ಸರಳವಾಗಿ ಸಾರ್ಮಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ರಾಮಶೇಟ್ಟಿ ಪನ್ನಾಳೆ,ಶಿವಾಜಿರಾವ ಪಾಟೀಲ್ ಮುಂಗನಾಳ, ಪಂಡರಿ ಅಡೆ,ರಹೀಮ ಸಾಬ, ಗೋವಿಂದ ನಿಂಗಳೆ,ಸತೀಶ್ ವಾಸರೆ,ರಾಮರಾವ ಜಾಧವ,ಬಾಲಾಜಿ ಜಾಧವ, ಸಂಬಾಜಿ ಬ್ರಿಗೇಡ್ ಪ್ರಮುಖ ಖಂಡೆರಾವ ರಂದವೆ,ಕೊಂಡಿಬಾ ಬಿರಾದಾರ,ವೇಂಕಟರಾವ ನೇಳಗೆ,ವಿಜಯಕುಮಾರ್ ನುಂದನೂರೆ,ಉದ್ದವರಾವ ನೇಳಗೆ,ಬಾಲಾಜಿ ಜಬಡೆ,ನಾರಾಯಣ ಮುಳೆ,ಶರತ ಪವಾರ,ಹಾಗೂ ಅನೇಕ ಸಂಘ ಸಂಸ್ಥೆಗಳ ಅದ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು,

ವರದಿ:-ಸುಧೀರ ಕುಮಾರ ಬೀ ಪಾಂಡರೇ

LEAVE A REPLY

Please enter your comment!
Please enter your name here