ಒಂದು ಕೋಟಿ ಮೌಲ್ಯದ 100 ಕೆ.ಜಿ ಗಾಂಜಾ ವಶ:- ಎಸ್ಪಿ.ಚನ್ನಬಸವಣ್ಣ.ಎಸ್.ಎಲ್

0
170

ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್

ಬೀದರ, ಏ.7 ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಒಂದು ಕೋಟಿ ಮೌಲ್ಯದ 100 ಕೆ.ಜಿ. ಗಾಂಜವನ್ನು ರಾಷ್ಟ್ರೀಯ ಹೆದ್ದಾರಿ 65ರ ನಿಂಬೂರ ಕ್ರಾಸ್ ಬಳಿ ವಶಪಡಿಸಿಕೊಂಡು ನಾಲ್ಕು ಜನ ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.


ಶನಿವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಹೀರಾಬಾದ ಕಡೆಯಿಂದ ಟಾಟಾ ಸುಮೋ ವಾಹನದಲ್ಲಿ ಅನಧಿಕೃತವಾಗಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಹೇಶ ಮೇಘಣ್ಣನವರ, ಹುಮನಾಬಾದ ಸಹಾಯಕ ಪೊಲೀಸ್ ಅಧಿಕ್ಷಕ ಶಿವಾಂಶು ರಜಪುತ, ಚಿಟಗುಪ್ಪಾ ವೃತ್ತ ಸಿ.ಪಿ.ಐ ಮಹೇಶಗೌಡ ಪಾಟೀಲ್ ರವರ ಮಾರ್ಗದರ್ಶದಲ್ಲಿ ಮನ್ನಾಎಖೇಳ್ಳಿ ಪಿ.ಎಸ್.ಐ ಬಸವರಾಜ, ಚಿಟಗುಪ್ಪಾ ಪಿ.ಎಸ್.ಐ ಮಹೇಂದ್ರಕುಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಎಫ್.ಎಸ್.ಟಿ ತಂಡದ ಅಧಿಕಾರಿ ಧೂಳಪ್ಪಾ ಹೊಸಳ್ಳಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿದೆ ಎಂದರು.
ಹುಮನ್ನಾಬಾದ ತಾಲೂಕಿ ತಾಳಮಡಗಿಯ ನಿಬ್ಬೂರ ಕ್ರಾಸ್ ಬಳಿ ದಾಳಿ ನಡೆಸಿದಾಗ ಟಾಟಾ ಸುಮೊ ವಾಹನದಲ್ಲಿ ಅಂದಾಜು 1.00.38.500 ಮೌಲ್ಯದ 2.ಕೆಜಿ ತೂಕದ 50 ಪ್ಯಾಕೆಟ್‌ನಲ್ಲಿ ಸಾಗಿಸುತ್ತಿದ್ದ ಒಟ್ಟು 100 ಕೆ.ಜಿ ಗಾಂಜಾ ಪತ್ತೆಯಾಗಿದೆ. ವಿಚಾರಣೆಯಲ್ಲಿ ಇವರು ಆಂದ್ರಪ್ರದೇಶ ಜಹೀರಾಬಾದ ನಿಂದ ಮಹಾರಾಷ್ಟçಕ್ಕೆ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದ್ದೆ. ಇವರಿಂದ 100 ಕೆ.ಜಿ 385 ಗ್ರಾಂ ಗಾಂಜಾ, ನಾಲ್ಕು ಮೊಬೈಲ್ ಫೋನ್,800 ರೂಪಾಯಿ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಟಾಟಾ ಸುಮೊ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆರೋಪಿಗಳು ಮೂಲತ: ಮಾಹರಾಷ್ಟçದ ಉಸ್ಮಾನಾಬಾದ ಜಿಲ್ಲೆಯವರಾಗಿದ್ದಾರೆ. ಇವರು ಅಂದಾಜು 20 ರಿಂದ 35 ವಯಸ್ಸಿನವರಾಗಿದ್ದಾರೆ ಈ ಹಿಂದೆ ಇವರ ವಿರುದ್ದ ಕರ್ನಾಟಕದಲ್ಲಿ ಯಾವುದೇ ಪ್ರಕಣಗಳು ದಾಖಲಾಗಿಲ್ಲಾ ಆದರೆ ಬೀದರ ಗಡಿಯ ಬೇರೆ ರಾಜ್ಯಗಳಲ್ಲಿ ಪ್ರಕಣ ದಾಖಲಾಗಿರುವ ಶಂಕೆ ಇದ್ದು ಇನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದ ಅವರು ಆರೋಪಿಗಳ ವಿರುದ್ದ ಈಗಾಗಲೇ ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಲಾಗಿದೆ. ಈ ಪ್ರಕರಣದ ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಲಾಗಿದೆ ಎಂದರು.
ಏಪ್ರೀಲ್ 10 ರಂದು ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ನ್ನು ಶಾಂತಿಯುತವಾಗಿ ಹಾಗೂ ಯಾವುದೇ ಅಕ್ರಮ ನಡೆಯದಂತೆ ನೆರೆಯ ರಾಜ್ಯಗಳ ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಹೇಶ ಮೇಘಣ್ಣನವರ, ಹುಮನಾಬಾದ ಸಹಾಯಕ ಪೊಲೀಸ್ ಅಧಿಕ್ಷಕ ಶಿವಾಂಶು ರಜಪೂತ, ಭಾಲ್ಕಿ ಸಹಾಯಕ ಪೊಲೀಸ್ ಅಧಿಕ್ಷಕ ಪೃತ್ವಿಕ್ ಸೇರಿದಂತೆ ಕಾರ್ಯಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ :-ಸುಧೀರ್ ಕುಮಾರ್ ಬೀ ಪಾಂಡ್ರೇ

LEAVE A REPLY

Please enter your comment!
Please enter your name here