ಏಕಾಏಕಿ ಅಧಿಕಾರಿಗಳ ವರ್ಗಾವಣೆಗೆ  ಪ್ರಗತಿಪರ ಸಂಘಟನೆಗಳ ಅಸಮಾಧಾನ!

0
302

ಹೊಸಪೇಟೆ :-ಜಾಗೃತಿ ಬೆಳಕು ( ಬಿಗ್ ಬ್ರೇಕಿಂಗ್ )

 ನ, 5 ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಏಕಾ ಏಕಿ ವರ್ಗಾವಣೆ ಮಾಡಿರುವುದಕ್ಕೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸರಕಾರಕ್ಕೆ ದಿಕ್ಕಾರ ಕೂಗಿ, ಇಂದು ಅವರು ನಾಳೆ ನೀವು ಅಧಿಕಾರಿಗಳೆ ಎಚ್ಚರ, ಎಚ್ಚರ, ಹಾಗೂ ಕಾನೂನನ್ನು ಕಟ್ಟಿ ನಿಟ್ಟಿನಿಂದ ಅನುಷ್ಠಾನಗೊಳಿಸುವುದೇ ತಪ್ಪಾ ಎನ್ನುವ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಸೋಮಶೇಖರ್ ಬಣ್ಣದ ಮನೆ ಮಾತನಾಡಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡಿರುವುದು ಮುಂಬರುವ ಚುನಾವಣೆಗೆ ಅನುಕೂಲವಾಗುವಂತೆ ಸ್ಥಳೀಯ ಶಾಸಕರು ಕೈವಾಡದಿಂದಾಗಿದೆ.

 ಜಿಲ್ಲೆಯಲ್ಲಿ ಶ್ರಮವಹಿಸಿ ಕರ್ತವ್ಯ ನಿರ್ವಹಿಸುವ ದಕ್ಷ ಅಧಿಕಾರಿಗಳನ್ನು ಸ್ಥಳ ನಿಗದಿಪಡಿಸದೇ ಎತ್ತಂಗಡಿ ಮಾಡಲಾಗಿದೆ. ಸ್ಥಳೀಯ ಶಾಸಕರಾದ ಆನಂದ್ ಸಿಂಗ್ ಅವರು ಸರಕಾರಿ ಜಮೀನಿನಲ್ಲಿ ಬಂಗಲೆಯನ್ನು ಕಟ್ಟದ್ದಾರೆ ಎನ್ನು ಆರೋಪವಿದೆ, ಸರಕಾರಿ ಇಲಾಖೆಯ ಕಾಮಗಾರಿಗಳಿಗೆ ಟೆಂಡರ್ ಇಲ್ಲದೇ ಕಾಮಗಾರಿಗಳನ್ನು ತಮ್ಮ ಸಹಪಾಠಿಗಳಿಗೆ ನೀಡಿರುತ್ತಾರೆ ಎನ್ನುವ ಆರೋಪವು ಸಹ ಇದೆ. ಇತ್ತಿಚ್ಚೀಗೆ ಪರಿಶಿಷ್ಟ ಜಾತಿಗೆ ಸೇರಿದವರು ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್ ದಾಖಲಿಸಿದ ಕಾರಣಕ್ಕೆ ಪೋಲಿಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಮತ್ತು ಜಿಲ್ಲೆಯ ಅದ್ಯಾಂತ ಸರ್ಕಾರಿ ಜಾಗಗಳನ್ನು ಪತ್ತೆ ಮಾಡಿ ಸರ್ವೆಮಾಡಿಸಿ ಅದ್ದುಬಸ್ತು ಮಾಡಿದ್ದರು ಜಿಲ್ಲೆಯಲ್ಲಿ ಪ್ರಮಾಣಿಕತೆ ಮತ್ತು ದಕ್ಷತೆಯಿಂದ ಸೇವೆಸಲ್ಲಿಸುವ ಕಾರಣಕ್ಕೆ ಜಿಲ್ಲಾಧಿಕಾರಿಗಳಾದ ಅನಿರುದ್ ಶ್ರವಣ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ರಾಜಶೇಖರ್ ಹಿಟ್ನಾಳ್, ಎಂ ಸಿ  ವೀರಸ್ವಾಮಿ, ಮರಡಿ ಜಂಬಯ್ಯ ನಾಯಕ, ಭಾಸ್ಕರ, ನಾಗರತ್ನಮ್ಮ,ನಿಂಬಗಲ್ ರಾಮಕೃಷ್ಣ,ವಿನಾಯಕ ಶೆಟ್ಟರ್,ಯೋಗಲಕ್ಷ್ಮಿ, ಸಣ್ಣ ಈರಪ್ಪ, ವೀರಭದ್ರ ನಾಯಕ, ಶಿವುಕುಮಾರ್, ಭರತ್ ಕುಮಾರ್ ಸಿ ಆರ್, ಬಿ ಮಾರೇಣ್ಣ, ಕವಿತಾ, ರಾಧಾ, ಜಾಫರ, ಸೈಯದ್ ಬುಡೇನ್, ಸುಹೇಲ್, ಓಬಳೇಶ, ನಿಂಬಗಲ್ ನಾಗರಾಜ, ಅಣ್ಣಾಮಲೈ, ಕರಿ ಹನುಮಂತಪ್ಪ ಸೇರಿದಂತೆ ಮತ್ತಿತರರು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here