ಉಡುಪಿಯಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಜಯಶಾಲಿಯಾಗಲೆಂದು ಕ್ರೀಡಾ ಅಭಿಮಾನಿ ಪ್ರೋತ್ಸಾಹಿಸಿದರು,

0
56

ಉಡುಪಿಯಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಜಯಶಾಲಿ ಕ್ರೀಡಾ ಅಭಿಮಾನಿ ಪ್ರೋತ್ಸಾಹಿಸಿದರು,

ಹೊಸಪೇಟೆ (ವಿಜಯನಗರ), ಜಾಗೃತಿ ಬೆಳಕು

13ರಿಂದ 15ರವರೆಗೆ ಮೂರು ದಿನಗಳ ಕಾಲ ಉಡುಪಿಯ ಸಾಲಿಗ್ರಾಮದಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಹದಿನಾಲ್ಕು ಜನ ವಿಜಯನಗರ ಜಿಲ್ಲೆಯಿಂದ ಭಾಗವಹಿಸಿದ್ದಾರೆ ವಿಕ್ಟರಿ ಜಿಮ್ ವತಿಯಿಂದ ಮಹಿಳೆಯರು ಸೇರಿದಂತೆ (ವಲಿಬಾಷ, ವಿಜಯವಾಣಿ, ಎ ಅರುಣ್ ಕುಮಾರ್,
ಕೆ.ಮಲ್ಲಿಕಾರ್ಜುನ್, ಜಿ ತನುಜಾ ಗಂಗಾಧರ್, ಶರಣ್, ದೀಪಕ್, ಕೆ ಎಸ್ ಅಬ್ದುಲ್ಲಾ, ವಾಸಿಂ ಎಸ್. ಭಾಷಾ, ಗೌಸ್ ಪೀರ್ ಎಂ. ರೋಷರ್ ಜಮೀರ್, ಅಮೀರ್ ಜಾನ್, ಭಾಗವಹಿಸಲಿದ್ದಾರೆ.
ಮೆಂಬರ್ ಆಫ್ ಟೀಮ್ ಶಾರುಖ್ ಖಾನ್,
ಕರ್ನಾಟಕ ಟೀಮ್ ಶಾರುಖ್ ಖಾನ್, ಹೊಸಪೇಟೆ ಫ್ಯಾನ್ಸ್ ಕ್ಲಬ್, ರೋಷನ್ (ಅಡ್ಮಿನ್), ಕೆ ಫಿರ್ದೋಸ್ ಬಾಷಾ (ಅಡ್ಮಿನ್), ಖಾಸಿಂ, ವಸೀಮ್ , ರಿಯಾಜ್, ಶಿಹಾನ್ ಮತ್ತು ತಂಡದವರು, ಜಯಭೇರಿ ಆಗಲೆಂದು ಸಿಹಿ ತಿನ್ನಿಸಿ ಕ್ರೀಡಾಪಟುಗಳಿಗೆ ಟಿ-ಶರ್ಟ್ ಕೊಡುವ ಮೂಲಕ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ವಿಕ್ಟರಿ ಜಿಮ್ ನ ಮಾಲಿಕ ಮತ್ತು ಕೋಚ್ ಆದ ಅಂತಾರಾಷ್ಟ್ರೀಯ ಕ್ರೀಡಾಪಟು ವಲಿಭಾಷ ಮಾತಾಡಿ ನಮ್ಮ ವಿಜಯನಗರ ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹಿಸುವುದು ತುಂಬಾ ಕಡಿಮೆಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ಹೆಚ್ಚಾಗಿ ಬಡವರೇ ಇರುತ್ತಾರೆ ಈ ರೀತಿ ಪ್ರೋತ್ಸಾಹಿಸಲು ಮುಂದೆ ಬಂದರೆ ಇನ್ನೂ ಹೆಚ್ಚಾಗಿ ನಮ್ಮ ಜಿಲ್ಲೆಯಿಂದ ಕ್ರೀಡಾಪಟುಗಳು ಬರಲು ಪ್ರೊತ್ಸಾಹ ನೀಡಿದಂತಾಗುತ್ತದೆ ಪ್ರೋತ್ಸಾಹಿಸಿದ್ದವರನ್ನು ಕೃತಜ್ಞತೆ ಸಲ್ಲಿಸುವ ಮುಖಾಂತರ ಸಂತೋಷವನ್ನು ವ್ಯಕ್ತಪಡಿಸಿದರು.

ಜಿಲ್ಲೆಯಿಂದ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ನೀಡಬೇಕು ಆಗ ಮಾತ್ರ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಎಸ್, ಆರ್, ಕೆ, ಟೀಮ್ ನ ಸದಸ್ಯರು ಎಂ.ಡಿ. ಖಾಸಿಂ ಮಾತನಾಡಿ ಕ್ರೀಡಾ ಸಾಧನೆಗೆ ಯಾವಾಗಲೂ ನಮ್ಮ ಬೆಂಬಲವಿರುತ್ತದೆ ಯಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here