ಉಚಿತ ಉಚಿತ ಜೈಪುರ್ ಕೃತಕ ಕಾಲು ಜೋಡಣೆ ಶಿಬಿರ..

0
204

ಜಾಗೃತಿ ಬೆಳಕು- ಹೊಸಪೇಟೆ

ಉಚಿತ ಜೈಪುರ್ ಕೃತಕ ಕಾಲು ಜೋಡಣೆ ಶಿಬಿರ

ಎಂ ಎಸ್ ಪಿ ಎಲ್ ಸಂಸ್ಥೆಯು ಜನರಲ್ ಮ್ಯಾನೇಜರ್ H. K. ರಮೇಶ ರವರ ನೇತೃತ್ವದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿಸಲಾಯಿತು
ಎಂ ಎಸ್ ಪಿ ಎಲ್ ಸಂಸ್ಥೆಯು ಹಲವಾರು ಸಮಾಜಮುಲಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಅವುಗಳಲ್ಲಿ ಉಚಿತ ಜೈಪುರ್ ಕೃತಕ ಕಾಲು ಶಿಬಿರವು ಸಹ ಒಂದಾಗಿದೆ ಈ ಜೋಡಣೆ ಶಿಬಿರವನ್ನು ಜೈಪುರ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿಯ ಸಹಯೋಗದಲ್ಲಿ 12 ಮೇ 2022 ರಿಂದ 14 ಮೇ 2022 ರ ವರೆಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರವಿರುವ ಸ್ವಾಮಿ ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.
ಈಗಾಗಲೇ ಹೊಸಪೇಟೆ ನಗರದಲ್ಲಿ 9.ಬಾರಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಸುಮಾರು 1,916 ಕ್ಕು ಹೆಚ್ಚು ಫಲಾನುಭವಿಗಳು, ಪ್ರಯೋಜನ ಪಡೆದಿದ್ದರು. 813 ಜನರಿಗೆ ಕೃತಕ ಕಾಲು, 662 ಕ್ಯಾಲಿಪರ್ಸ್, 14 ವಾಕರ್‌, 5 ಕ್ಕೆ ಗೋಲು 215 ಜನರಿಗೆ ಊರುಗೋಲುಗಳನ್ನು, 34 ಜನರಿಗೆ ಗಾಲಿ ಕುರ್ಚಿಗಳನ್ನು ಮತ್ತು 18 ಕೈಚಾಲಿತ ಸೈಕಲ್ ಪಡೆದರೆ, 15 ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು,
ಈ ಶಿಬಿರವನ್ನು ವಿಜಯನಗರ ಜಿಲ್ಲೆ, ಬಳ್ಳಾರಿ ಮತ್ತು ಕೊಪ್ಪಳ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ, ಹೊಸಪೇಟೆ ನಗರದಲ್ಲಿ ಆಯೋಜಿಸಿದ್ದು, ಈ ವರ್ಷವು ಸಹ ಆವಶ್ಯಕವೆನಿಸಿದವರಿಗೆ ಈ ಮೇಲಿನ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು.
ಹುಟ್ಟಿನಿಂದ ಕಾಲಿನ ಅಂಗವಿಕಲತೆ ಹೊಂದಿದವರು, ಪೋಲಿಯೊ ಪೀಡಿತರು, ಆಕಸ್ಮಿಕ ಅಪಘಾತದಿಂದ ಕಾಲು ಕಳೆದುಕೊಂಡವರು ಸೇರಿದಂತೆ ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿದವರು ಪಡೆದುಕೊಳ್ಳಬಹುದಾಗಿದೆ. ಪ್ರಯೋಜನವನ್ನು ಉಚಿತವಾಗಿ ಇದರ ಸದಉಪಯೋಗ ಪಡೆದುಕೊಳ್ಳಬೇಕು ಎಂದು
ಎಂ ಎಸ್ ಪಿ ಎಲ್ ಸಂಸ್ಥೆಯು ವತಿಯಿಂದ ಜನರಲ್ ಮ್ಯಾನೇಜರ್ H. K. ರಮೇಶ ರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು..

ಆಸಕ್ತರು ಹೆಸರು ನೋಂದಾಯಿಸಲು ಬಿ.ಎಮ್. ನಾಗರಾಜ್ 9002S002601 ಶಂಭುಲಿಂಗಯ್ಯ 9449135837 ಸಂಪರ್ಕಿಸಬಹುದು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here