ಅನಧಿಕೃತ ಸಾಗುವಳಿ ಸಕ್ರಮ ಅರ್ಜಿ ಸಲ್ಲಿಸಲು 1 ವರ್ಷ ಕಾಲಾವಕಾಶ ವಿಸ್ತರಣೆ:ಡಿಸಿ ಅನಿರುದ್ಧ ಶ್ರವಣ್!!!

0
614

ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಸಕ್ರಮ ಅರ್ಜಿ ಸಲ್ಲಿಸಲು 1 ವರ್ಷ ಕಾಲಾವಕಾಶ ವಿಸ್ತರಣೆ:ಡಿಸಿ ಅನಿರುದ್ಧ ಶ್ರವಣ್

ಹೊಸಪೇಟೆ ಬ್ರೇಕಿಂಗ್ ನ್ಯೂಸ್ (ಜಾಗೃತಿ ಬೆಳಕು)

ವಿಜಯನಗರ ಜಿಲ್ಲೆಯ ಸರ್ಕಾರಿ ಜಮೀನುಗಳಲ್ಲಿ ಅನಧೀಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94-ಎ(4)ಗೆ ತಿದ್ದುಪಡಿ ಮಾಡಿದ ತರುವಾಯ ನಮೂನೆ-57ರಲ್ಲಿ ಅರ್ಜಿಯನ್ನು ಸ್ವೀಕರಿಸಲು 01 ವರ್ಷದವರೆಗೆ ಕಾಲವಕಾಶವನ್ನು ವಿಸ್ತರಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮೂನೆ-57ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು https://landrecords.karnataka.gov.in/service73/login.aspx ರಲ್ಲಿ ತಾಂತ್ರಿಕ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸದರಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ದೂ:08394-295655 ,ಹೊಸಪೇಟೆ,ಹರಪನಹಳ್ಳಿ ಸಹಾಯಕ ಆಯುಕ್ತರ ಕಚೇರಿ ಅಥವಾ ತಾಲೂಕುಗಳ ತಹಸೀಲ್ದಾರರ ಕಚೇರಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here