ಅಧಿಕಾರಿಗಳ ನಿರ್ಲಕ್ಷ! ಗಿಡ ಮರಗಳ ಬಲಿ!!

0
304

ಹೊಸಪೇಟೆ :- ಜಾಗೃತಿ ಬೆಳಕು

ನಗರದ ರಸ್ತೆ ಬದಿಗಿರುವ ಗಿಡಮರಗಳನ್ನು ಕಡಿಯುತ್ತಾ ಪೈಪ್ ಲೈನ್ ಹಾಕುತ್ತಿರುವ ದೃಶ್ಯ ಕಂಡು ಬಂದಿತ್ತು ವಿಚಾರಿಸಿದಾಗ ಗುತ್ತಿಗೆದಾರರು ಈ ಕೆಲಸವನ್ನು ಮಾಡುತ್ತಿರುವುದನು ಗೊತ್ತಾಗಿದೆ.

ಸಂಬಂಧಪಟ್ಟ ಅರಣ್ಯ ಅಧಿಕಾರಿಗಳ ನಮನಕ್ಕೆ ತಂದ ಗ್ರೀನ್ ಆರ್ಮಿ ಅಸೋಸಿಯೇಷನ್ ವಡಕರಾಯ: ಗುಡಿ ವೃತ್ತದಿಂದ ಬಳ್ಳಾರಿ ವೃತ್ತಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಬೆಳೆದ ಮರವನ್ನು ಕಡಿದಿರುವ ಬಗ್ಗೆ ಅರಣ್ಯ ಇಲಾಖೆ ಇವರ ಗಮನಕ್ಕೆ ತಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಗುತ್ತಿಗೆದಾರರ ಮೇಲೆ ಎಫ್.ಐ.ಆರ್. ಮಾಡಿದರು ಗುತ್ತಿಗೆದಾರರ ಹೆಸರು ಪಂಪಾಪತಿ, ತಂದೆ ದೇವರಮನಿ, ದೇವಪ್ಪ, ಗಂಗಾವತಿ ಮತ್ತು ಮಿಠಾಯಿಗಾರ ಹನುಮಂತಯ್ಯ, ತಂದೆ ನಾಗಪ್ಪ.ಎಂ. ಗಂಗಾವತಿ ಇವರ ಮೇಲೆ ಎಫ್.ಐ.ಆರ್. ದಾಖಲಿಸಲಾಯಿತು. ಎಫ್.ಐ.ಆರ್. ನಂ : FOC No : 03/2022-23, Date : 08.09.2022 ರಂದು ದಾಖಲಿಸಲಾಯಿತು. 1963ರ ಕಾಯ್ದೆ ಅಡಿಯಲ್ಲಿ 33/2(v)(3), ಮತ್ತು ನಿಯಮ 25(3), 43ರ ಉಲ್ಲಂಘನೆ ಯಾಗಿರುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಬೆಳೆದ ಗಿಡ-ಮರಗಳನ್ನು ನಾಶ ಮಾಡುತ್ತಾ ಹೋದರೆ ನಮಗೆ ಆಮ್ಲಜನಕವೇ ಇಲ್ಲದಂತಾಗುತ್ತದೆ ಮರಗಳನ್ನು ಕಡಿಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಉಸಿರುಗಟ್ಟಿ ಸಾಯುವ ಪರಿಸ್ಥಿತಿ ಎದುರಾಗುತ್ತದೆ. ಆದ ಕಾರಣ ಕರ್ನಾಟಕದ ಎಲ್ಲ ಸರ್ಕಾರಿ ಇಲಾಖೆಗಳು ರಸ್ತೆಯ ಬದಿಯಲ್ಲಿ ಬೆಳೆದಿರುವ ಗಿಡಮರಗಳನ್ನು ಪರಿಶೀಲನೆ ಮಾಡಿ ತದನಂತರ ಗುತ್ತಿಗೆದಾರರಿಗೆ ಅನುಮತಿಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಗ್ರೀನ್ ಆರ್ಮಿ ಅಸೋಶಿಯೇಷನ್‌ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನಗರದ ನಿವಾಸಿಗಳಿಂದ ಕೇಳಿಕೊಳ್ಳುತ್ತಿದ್ದೇವೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಡಿ.ಜೆ.ಮಂಜುನಾಥ, ರಾಜ್ಯ ಉಪಾಧ್ಯಕ್ಷರಾದ ಜೆ.ಕುಬೇರ, ಸಂಘಟನಾ ಕಾರ್ಯದರ್ಶಿ ಸಂತೋಶ್ ಕುಮಾರ್, ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಾಧ ಆರ್.ಎಫ್.ವಿನಯಕ್, ಉಪವಲಯ ಅರಣ್ಯ ಅಧಿಕಾರಿಗಳು ಶಿವಕುಮಾರ್, ಅರಣ್ಯ ರಕ್ಷಕ ಯಂಕಪ್ಪ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ :-ಮೊಹಮ್ಮದ್. ಗೌಸ್

LEAVE A REPLY

Please enter your comment!
Please enter your name here