ಮಾಯಾದಂತ ಮಳೆಗೆ ವಿಜಯನಗರ ತತ್ತರ : ಜನ ಜೀವನ ಅಸ್ತವ್ಯಸ್ತಾ

0
269

ಹೊಸಪೇಟೆ : ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್ ನ್ಯೂಸ್)

ಮನೆಯಲೆಲ್ಲ ನೀರು ನುಗ್ಗೆ ಅವಾಂತರ ಸೃಷ್ಟಿ ಮಾಡಿದ ಮಳೆರಾಯ!

ಮಾಯದಂತ ಮಳೆಗೆ  ವಿಜಯನಗರ ಜಿಲ್ಲೆ  ಹೊಸಪೇಟೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು ಮಿಂಚಿನ ಅರ್ಭಟದಿಂದ  ಸತತ ಎರಡು ತಾಸಿಗೂ ಅಧಿಕವಾಗಿ ಧೋ ಎಂದು ಸುರಿದ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ಮಧ್ಯಾಹ್ನದಿಂದ ಸುರಿದ ಭಾರಿ ಮಳೆಗೆ ಹೊಸಪೇಟೆ ನಗರದ ಎಲ್ಲಾ ರಸ್ತೆಗಳು, ಓಣಿಗಳು ಹಳ್ಳ ಕೊಳ್ಳಗಳಾಗಿ ಮನೆಗಳಿಗೆ ನೀರು ನುಗ್ಗಿದೆ. ನಗರದ ಕೆಲವು ಕಡೆ  ರಸ್ತೆಗಳಲ್ಲಿ ಗಿಡಮರಗಳು ಉರುಳಿ ಬಿದ್ದಿವೆ.  ದೀಪಾವಳಿ ಹಬ್ಬದಲ್ಲಿ ಹಚ್ಚುವ ಸರಣಿ ಪಟಾಕಿಯಂತೆ ಪ್ರತಿಯೊಂದು ನಿಮಿಷಕ್ಕೆ ಒಂದೊಂದರಂತೆ ನಿರಂತರ ಅರ್ಧತಾಸು ಗುಡುಗು ಸಿಡಿಲುಗಳ ಅರ್ಭಟ ಹಾಗೂ ಎರಡು ಗಂಟೆ ಭಯಂಕರ ವಾಗಿ ಸುರಿದ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.ರಾತ್ರಿಯಲ್ಲಿ ಮತ್ತೆ ಮಳೆ ಸುರಿಯುತ್ತೋ ಎಂಬ ಭಯದಲ್ಲಿದ್ದಾರೆ. ಗುಡುಗು ಸಿಡಿಲಿನಿಂದ ವಿಜಯ ನಗರದಲ್ಲಿ ಎಲೆಲ್ಲಿ ಅನಾಹುತ ಗಳಾಗಿವೆಯೋ ಇನ್ನು ಮಾಹಿತಿ ಸಿಕ್ಕಿಲ್ಲ. ರವಿವಾರ ಇರುವುದರಿಂದ  ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ಹೊಸಪೇಟೆ ನಗರದ ಇಂದಿರಾನಗರ ,ಗಾಂಧಿನಗರ, ಅರವಿಂದ್ ನಗರ, ಪಟೇಲ್ ನಗರ ಸೇರಿದಂತೆ ಅನೇಕ ಕಡೆ ರಸ್ತೆಗಳು ಜಲಾವೃತಗೊಂಡು ಮನೆಗಳ ಲ್ಲಿ ನೀರು ನುಗ್ಗಿದೆ, ಮನೆಗಳಲ್ಲಿ ನುಗ್ಗಿದ ನೀರು ಹೊರಗೆ ಚೆಲ್ಲಲು ಜನರು ಹರಸಾಹಸಪಡು ತ್ತಿರೋ ದೃಶ್ಯ ಸಾಮಾನ್ಯವಾಗಿತ್ತು ಕೆಲವು ಕಡೆ ಮರಗಳು ಬಿದ್ದು ವಾಹನಗಳು ಜಖಂಗೊಂಡಿವೆ.

ನಗರದ ಅರವಿಂದ್ ನಗರದ ಬಾಪೂಜಿ ಪ್ರೌಢಶಾಲೆ  ಶಾಲೆ ಹಾಗೂ ವಾಸವಿ ಪ್ರೌಢಶಾಲೆ ಹತ್ತಿರದ ಚರ್ಚ್ನ ಮುಂದಿನ ಭಾಗದ ರಸ್ತೆಗಳಲ್ಲಿ ಮಳೆನೀರು ಹಳ್ಳ ದಂತೆ ಹರಿಯುತ್ತ ಜಲಾವೃತಗೊಂಡು ಮನೆಗಳ ಸುತ್ತ ನೀರು ತುಂಬಿಕೊಂಡಿದೆ. ಜನರ ಕರೆಗೆ  ಸ್ಪಂದಿಸಿದ ನಗರಸಭೆ ಸದಸ್ಯ  ಕಾರ್ಪುಡಿ  ಮಹೇಶ್ :

ನಗರದ 22ನೇ ವಾರ್ಡಿನ ವಾಸವಿ ಶಾಲೆ ಹತ್ತಿರ ಹಾಗೂ ಬಾಪೂಜಿ ಪ್ರೌಢಶಾಲೆ ಯ ಮುಂದಿನ ಭಾಗದ ರಸ್ತೆ ತುಂಬಾ ಜಲಾವೃತ್ತಗೊಂಡು ಮನೆಗಳಿಗೆ ನೀರು ನುಗ್ಗಿ ತೊಂದರೆಯಲ್ಲಿದ್ದ ಜನರ ಕರೆಗೆ ಓಗಟ್ಟು ಕೂಡಲೇ ಜೆಸಿಬಿಯೊಂದಿಗೆ ಬಂದು ನೀರು ಹರಿದು  ಹೋಗುವಂತೆ ಅನುವು ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ ನಗರ ಸಭೆಯ 22ನೇ ವಾರ್ಡಿನ ಸದಸ್ಯ ಕಾರದಪುಡಿ  ಮಹೇಶ್ ಜಾಗೃತಿ ಬೆಳಕು  ಪತ್ರಿಕೆ ಯೊಂದಿಗೆ ಮಾತಾಡಿ: ನಾನು ಚುನಾವಣೆಯಲ್ಲಿ ಗೆದ್ದು ಬಂದು ಎಂಟು ತಿಂಗಳಾಗಿದೆ.ಮೊದಲು ಈ ಪ್ರದೇಶ ದಲ್ಲಿ ಮಳೆ ಬಂದಾಗ ಈ ಪರಿಸ್ಥಿತಿ ಉಂಟಾಗುತ್ತಿರುವುದು ಗೊತ್ತಿರಲಿಲ್ಲ . ಪ್ರಕೃತಿ ವಿಕೋಪವಾಗಿ ಅತಿ ಹೆಚ್ಚು ಮಳೆ ಯಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳು ಹಾಗೂ ಚರಂಡಿಗಳನ್ನು ನಿರ್ಮಿಸಿರು ವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ನಾನು ಸಚಿವರಾದ ಆನಂದ್ ಸಿಂಗ್ ಹಾಗೂ ಜಿಲ್ಲಾಧಿಕಾರಿ ಯೊಂದಿಗೆ ಸಮಸ್ಯೆಯನ್ನು ಅವರ ಗಮನಕ್ಕೆ ತಂದು  ಇದಕ್ಕೆ ಸೂಕ್ತ ಪರಿಹಾರ ಮಾಡುವ ಮೂಲಕ ಮುಂದೆ ಈ ತರಹ ಆಗದಂತೆ, ಹಾಗೇನೆ ನೀರು ಬರುವ ಮೂಲ ದಿಂದ ಹಿಡಿದು ಕೊನೆಯವರೆಗೂ ಇದಕ್ಕೆ ಚರಂಡಿ ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಚರ್ಚ್ ಫಾದರ್ ಫ್ರಾನ್ಸಿಸ್ :
20ನೇ ವಾರ್ಡಿನ ಚರ್ಚಿನ ಫಾದರ್ ಫ್ರಾನ್ಸಿಸ್ ರವರು ಮಾತಾಡಿ ತಾವು ನಗರಸಭೆ ಸದಸ್ಯರಾದ ಕಾರದಪುಡಿ ಮಹೇಶ್ ಅವರಿಗೆ ಫೋನಿನಲ್ಲಿ ಮಾಹಿತಿ ತಿಳಿಸಿ ನಮ್ಮ ಏರಿಯಾದ  ಮನೆಗಳಲ್ಲಿ ಮಳೆಯ ನೀರು ನುಗ್ಗುತ್ತಿದೆ ತಾವು ಬೇಗನೆ ಬಂದು ಸಮಸ್ಯೆ ಬಗೆಹರಿಸ ಬೇಕೆಂದು ಮನವಿ ಮಾಡಿದ ತಕ್ಷಣ ಕರೆಗೆ ಸ್ಪಂದಿಸಿದ ನಗರ ಸಭೆ ಸದಸ್ಯ ಕಾರದಪುಡಿ ಮಹೇಶ್ ಸ್ಥಳಕ್ಕೆ ಧಾವಿಸಿ ತಮ್ಮೆಲ್ಲರ ಜೊತೆ ನಾನು ಇದ್ದೇನೆ ಆದಷ್ಟು ಬೇಗ ಇದಕ್ಕೆ ಕಾಯಂ ಪರಿಹಾರ ಮಾಡುತ್ತೇನೆ ಎಂದು ಹೇಳಿ ದ್ದಾರೆ ಎಂದರು.

ಕಳೆದ ತಿಂಗಳು ನಗರದ 15ನೇ ವಾರ್ಡ್ ಇಂದಿರಾ ನಗರ ಹಾಗೂ ಬಾಪೂಜಿ ನಗರದಲ್ಲಿ ಅತಿ ಹೆಚ್ಚು ಮಳೆಯಾಗಿ ಮನೆ ಮನೆಗಳಿಗೆ ನೀರು ನುಗ್ಗಿ ಅನೇಕ ಮನೆಗಳು ಹಾನಿಗೊಳಗಾಗಿದ್ದು ಆ ಸಂದರ್ಭದಲ್ಲಿ ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಳೆಯಿಂದಾಗಿ ರಾಜ ಕಾಲುವೆಯ
ಕಳೆದ ತಿಂಗಳು ನಗರದ 15ನೇ ವಾರ್ಡ್ ಇಂದಿರಾ ನಗರ ಹಾಗೂ ಬಾಪೂಜಿ ನಗರದಲ್ಲಿ ಅತಿ ಹೆಚ್ಚು ಮಳೆಯಾಗಿ ಮನೆ ಮನೆಗಳಿಗೆ ನೀರು ನುಗ್ಗಿ ಅನೇಕ ಮನೆಗಳು ಹಾನಿಗೊಳಗಾಗಿದ್ದು ಆ ಸಂದರ್ಭದಲ್ಲಿ ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಳೆಯಿಂದಾಗಿ ರಾಜ ಕಾಲುವೆಯಿಂದ ಮನೆ ಗಳಿಗೆ ನೀರು ನುಗ್ಗಿ 64 ಮನೆಗಳು  ಹಾನಿಯಾಗಿದ್ದವು.ಹಾನಿಗೊಳಗಾದ ಇಂದಿರಾ ನಗರ ಬಡಾವಣೆಯ 64 ಮನೆಗಳ ಮಾಲೀಕರಿಗೆ ತುರ್ತು ಪರಿಹಾರ ವಾಗಿ ತಲಾ 10 ಸಾವಿರ ರೂ.ಗಳ ಚೆಕ್ ವಿತರಿಸಿದ್ದರು.ನಂತರ ಗಾಂಧಿ ನಗರ ಬಡಾವಣೆಗೂ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದರು. ಈ ಸಮಸ್ಯೆಯನ್ನು ಹಸಿರಿರುವಾಗಲೇ ನಗರದಲ್ಲಿ ಸುರಿದ  ಭಾರಿಮಳೆಗೆ ಎಲ್ಲೆಲ್ಲಿ ಏನು ಅನಾಹುತಗಳಾಗಿವೆ ನೋಡಬೇಕಾಗಿದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here