ವಿಜಯನಗರ ಜಿಲ್ಲೆ ಹೊಸಪೇಟೆ
ಅಂಧ ಮಕ್ಕಳಿಗೆ ಕೈಲಾದಷ್ಟು ಅಳಿಲು ಸೇವೆ ಮತ್ತು ಎಲ್ಲರಿಗೂ ಸೇವಾ ಭಾವನೆ ಬರಲಿ :ಎಸ್ ಸಿ ವಿಶ್ವನಾಥ್
ನಗರದ ಅಂಧ ಮಕ್ಕಳಿಗೆ ದೃಷ್ಟಿ ಬರುವುದಾದರೆ ಜೆಎಸ್ ಡಬ್ಲ್ಯು ಸಂಸ್ಥೆಯಿಂದ ಸಹಾಯ ಮಾಡುತ್ತೇವೆ.ಹಾಗೂ ಅಂಧ ಮಕ್ಕಳಿಗೆ ನಾವು ಎಷ್ಟು ಸಹಾಯ ಮಾಡಿದರು .ಕಡಿಮೆ ಎಂದು ಜೆಎಸ್ ಡಬ್ಲ್ಯು ಸ್ಟೀಲ್ಸ್ (ಲಿ)ನ ಕಾರ್ಯಕಾರಿ ಉಪಾಧ್ಯಕ್ಷ .ಶ್ರೀ ಎಸ್.ಸಿ. ವಿಶ್ವನಾಥ್ ಹೇಳಿದರು. ಭೂಮಿಕಾ ಸಮಾಜ ಸೇವಾ ಟ್ರಸ್ಟ್ .ಗೋವಿಂದಂ ಪೌಂಡೇಶನ್ ಹೊಸಪೇಟೆ .ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಚೇತನ ಅಂಧ ಮಕ್ಕಳ ವಸತಿ ಶಾಲೆಯ ವಾರ್ಷಿಕೋತ್ಸವ ಸಮಾ ರಂಭವನ್ನು.
ಶ್ರೀ ರಾಮಕೃಷ್ಣ ಗೀತಾಶ್ರಮ ಬಳ್ಳಾರಿ ಸರ್ಕಲ್ ಹತ್ತಿರ ಹೊಸಪೇಟೆಯಲ್ಲಿ ನಡೆಯಿತು.ಸಮಾರಂಭವನ್ನು ಉದ್ಘಾಟನೆ ಮಾಡಿ ಶ್ರೀ ಎಚ್.ಸಿ.ವಿಶ್ವನಾಥ್ ಅವರು ಮಾತನಾಡುತ್ತಾ.
ಅಂಧ ಮಕ್ಕಳು ಕಣ್ಣು ಕಿವಿ ಇಲ್ಲ ಎಂದು ಕಾಣುತ್ತಿಲ್ಲ ಇವರು ನೃತ್ಯ ಮಾಡುವುದು ನೋಡಿದರೆ ಕಣ್ಣು ಇದ್ದರೆ ಮಾಡುವುದು ಕಷ್ಟ ಅಂಥದ್ರಲ್ಲಿ ಇವರು ಎಷ್ಟು ಚೆನ್ನಾಗಿ ಮಾಡಿದರು .ಮಕ್ಕಳಿಗಾಗಿ ನಮಗೆ ಕೈಲಾದಷ್ಟು ಅಳಿಲು ಸೇವೆ ಮಾಡುತ್ತೇನೆ.
ಶ್ರೀ ಸ್ವಾಮೀಜಿ ಅವರು ಪ್ರತಿ ವರ್ಷ ಕಾರ್ಯಕ್ರಮವನ್ನು ಮಾಡಲಿ ನಿಮ್ಮ ಎಲ್ಲರಿಗೂ ಸೇವಾ ಭಾವನೆ ಬರಲಿ ಎಂದು ಹೇಳಿದರು.
ಶ್ರೀ ಕಲ್ಯಾಣಿ ಮಹಾಸ್ವಾಮಿಗಳು ಮಾತನಾಡಿ ಹಾಗೂ ಸ್ವಾಮಿ ಸುಮೇಧಾ ನಂದ ಜಿ ಮಹಾ ರಾಜ್ ಅಧ್ಯಕ್ಷರು ಶ್ರೀ ರಾಮಕೃಷ್ಣ ಗೀತಾಶ್ರಮದ ಹೊಸಪೇಟೆ. ಹೊಸಪೇಟೆಯ ಬಿಇಒ ಸುನಂದ ಅವರು ಮಾತನಾಡಿ ವಿಶ್ವಚೇತನ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಮೂವತ್ತೈದು ಮಕ್ಕಳಿದ್ದು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಮಂಜುಳಾ ವಿಶ್ವಚೇತನ ಶಾಲೆಯ ಗಂಗಾಧರ್ ಗಡಾದ್ ಹಾಗೂ ಭೂಮಿಕಾ ಅವರನ್ನು ಅಭಿನಂದಿಸಿದರು .ಮನೆಯಲ್ಲಿ 2ಮಕ್ಕಳನ್ನು ಹಿಡಿಯಲಿಕ್ಕೆ ಸಾಕಾಗಿರುತ್ತದೆ . ಆದರೆ ಮಂಜುಳಾ ಅವರು 35ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು .ಶ್ರೀ ಬಸವರಾಜ ಉಮಾ ರಾಣೆ ಮಾನವ ಕಂಪ್ಯೂಟರ್ ಎಂದೇ ಹೆಸರು ಆಗಿರುವ ಇವರು .ಮಾತನಾಡಿ ಎಲ್ಲರ ಹುಟ್ಟಿದ ದಿನಾಂಕ ಕೇಳಿ ವಾರ ಹೇಳುತ್ತಿದ್ದರು ಯಾವುದೇ ತರಹದ ನೋಟು ಕೊಟ್ಟರೆ ಐವತ್ತು ಇಪ್ಪತ್ತು ಐನೂರು ರೂಪಾಯಿಗಳು ಎಂದು ಹೇಳಿದರು.ವಿಶ್ವಚೇತನ ಪ್ರಶಸ್ತಿ ಸಾಧಕರಿಗೆ ಸಿಗುವಂತಹ ಪ್ರಶಸ್ತಿ ಆದರೆ ಸಾಮಾನ್ಯ ಮನುಷ್ಯನಿಗೆ ಕೊಡುತ್ತಿರುವುದು ಸೂಕ್ತ ಅಲ್ಲ ನಮಗಿಂತ ಸಾಧನೆ ಮಾಡಿದವರು ಬಹಳ ಜನ ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂಮಿಕಾ ಗಡಾದ್ ಮತ್ತು ಭೀಮ್ ರಾಜ್ ನರೇಗಲ್ ಅವರು ಹಾಡುಗಳನ್ನು ಹಾಡಿದರು.ವಿಶ್ವಚೇತನ ಅಂಧಮಕ್ಕಳ ವಸತಿ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವರದಿ :-ಮೊಹಮ್ಮದ್ ಗೌಸ್