ಜಾಗೃತಿ ಬೆಳಕು-ನ್ಯೂಸ್ ವಿಜಯನಗರ ಜಿಲ್ಲೆ
ಅಂಜುಮನ್ ಕಮಿಟಿಯ ವತಿಯಿಂದ S. S. L. C. ಯಲ್ಲಿ ಶೇಕಡ 85% ಕಿಂತ ಮೇಲೆ ಉತ್ತೀರ್ಣ ಆಗಿರುವಂತ 160 ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಸೈಯದ್ ಖಾಧಾರ್ ರಾಫ್ಫಾಈ ಮತ್ತು ಸದಸ್ಯರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಅಂಜುಮನ್ ಅಧ್ಯಕ್ಷರಾದ ಸೈಯದ್ ಖಾದರ್ ರಾಫ್ಫಾಈ ರವರು ಮಾತನಾಡಿ 160 ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಕೊಡುವ ಮುಖಾಂತರ ತುಂಬಾ ಸಂತೋಷ ವ್ಯಕ್ತವಾಗುತ್ತಿದೆ ನಮ್ಮ ಸಂಸ್ಥೆಯಿಂದ ಸಹಾಯ ಪಡೆದುಕೊಂಡ ಬಹಳಷ್ಟು ಮಕ್ಕಳು 90% ರಿಂದ 96% ಅಂಕಗಳನ್ನು ಪಡೆದಿದ್ದಾರೆ ಇದಕ್ಕೆ ನಮ್ಮ ಸಂಸ್ಥೆಯಿಂದ ಮಕ್ಕಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸುತ್ತೇನೆ ಇನ್ನು ಮುಂದೆ ನಿಮ್ಮ
ವಿದ್ಯಾಭ್ಯಾಸಕ್ಕಾಗಿ ಯಾವ ತರಹ ಸಹಾಯ ಬೇಕಾಗುತ್ತೆ ನಮ್ಮ ಸಂಸ್ಥೆಯಿಂದ ಮತ್ತು ನಮ್ಮ ಅಂಜುಮನ್ ಕಮಿಟಿಯ ಸದಸ್ಯರಿಗೆ ಸಂಪರ್ಕಿಸಿ ನೀವು ಸಹಾಯ ಪಡೆದುಕೊಳ್ಳಬಹುದು ನಿಮ್ಮ ಬೆನ್ನೆಲುಬಾಗಿ ಅಂಜುಮನ್ ಕಮಿಟಿ ಸದಾ ನಿಮ್ಮ ಜೊತೆ ಇರುತ್ತದೆ ಮತ್ತು ಮುಂದಿನ ದಿನಮಾನಗಳಲ್ಲಿ ನಮ್ಮ ಅಂಜುಮನ್ ಕಮಿಟಿ ಇಂದ ಪ್ರೈಮರಿ ಸ್ಕೂಲ್. ಹೈ ಸ್ಕೂಲ್. ಮತ್ತು ಕಾಲೇಜ್ ಆದಷ್ಟು ಬೇಗನೆ ಮುಂದಿನ ದಿನಮಾನಗಳಲ್ಲಿ ಪ್ರಾರಂಭ ಮಾಡಲಿದ್ದೇವೆ ಇದರ ಸದುಪಯೋಗ ನೀವು ಪಡೆದುಕೊಳ್ಳಬೇಕು. ಎಸ್. ಎಸ್. ಎಲ್. ಸಿ
ಕಡಿಮೆ ಅಂಕ ತಂದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೂ ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ತಮ್ಮ ಮನದಾಳದ ಮಾತನ್ನು ವಿಜಯನಗರ ಜಿಲ್ಲೆ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಸೈಯದ್ ಖಾದರ್ ರಾಫ್ಫಾಈ ರವರು ತಿಳಿಸಿದರು.
ವರದಿ :-ಮೊಹಮ್ಮದ್ ಗೌಸ್