ಹೊಸಪೇಟೆ( ವಿಜಯನಗರ ) ಜಾಗೃತಿ ಬೆಳಕು ನ್ಯೂಸ್
ಜೂ,1. ಹೊಸಪೇಟೆ ತಾಲ್ಲೂಕು ವಡ್ಡನಹಳ್ಳಿ ಬ್ರಿಡ್ಜ್ ಹತ್ತಿರ ಲಾರಿ ಮತ್ತು ಎರಡು ಆಟೋಗಳ ನಡುವೆ ಭೀಕರ ಅಪಘಾತ ಸಂಭವಿಸಿ ಐದು ಮಹಿಳೆಯರು ಇಬ್ಬರು ಪುರುಷರು ಸೇರಿದಂತೆ ಏಳು ಜನರು ಸ್ಥಳದಲ್ಲಿ ಮೃತ ಪಟ್ಟು 12 ಜನ ತೀವ್ರ ಗಾಯಗೊಂಡ ಹೃದಯ ವಿದ್ರಾವಕ ಶುಕ್ರವಾರ ಮಧ್ಯಾಹ್ನ 12:30 ಯಿಂದ 1 ಗಂಟೆ ಒಳಗೆ ಘಟನೆ ನಡೆದಿದೆ.
ಬಳ್ಳಾರಿ ನಗರದ ಡಿಸಿ ಕಾಲೋನಿಯ ನಿವಾಸಿಗಳಾದ ಇವರು ನಿನ್ನೆ ಬಕ್ರೀದ್ ಹಬ್ಬ ಮುಗಿಸಿ ಪ್ರತಿ ವರ್ಷದಂತೆ ಬಾಸಿ ಹಬ್ಬದ ಆಚರಣೆಗೆ ಹೊಸಪೇಟೆಯ ಪಕ್ಕ ತುಂ ಗಭದ್ರಾ ಜಲಾಶಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಬರುತ್ತಾ ರೆ. ಅದರಂತೆ ಬಳ್ಳಾರಿ ಗೌತಮ ನಗರದ ಅಂದ್ರಾಳ ಕ್ಯಾಂಪ್, ಡಿಸಿ ಕಾಲೋನಿಯ ನಿವಾಸಿಗಳಾದ ಇವರು ಬಾಸಿ ಹಬ್ಬ( ಹಬ್ಬದ ಮರುದಿನ ಹತ್ತಿರದ ಡ್ಯಾಮ್, ನದಿ, ಪಾರ್ಕ ಗೆ ಹೋಗಿ ಊಟ ಮಾಡಿ ಬರುವುದು ) ಆಚರಣೆ ಮಾಡಲು ಎರಡು ಆ ಟೋಗಳ ಲ್ಲಿ ಹೊಸಪೇಟೆಗೆ ಬರುತ್ತಿರುವ ಸಂದರ್ಭದಲ್ಲಿ ರಭಸ ವಾಗಿ ಬರುತ್ತಿದ್ದ ಲಾರಿ ಚಾಲಕನ ನಿರ್ಲಕ್ಷದಿಂದ ಮುಂದಿನ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಈ ಆಟೋದಲ್ಲಿದ್ದ ಆರು ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ನಂತರ ಹಿಂದಿನ ಆ ಟೋಗೆ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ ಒಬ್ಬರು ಮೃತ ಪಟ್ಟಿದ್ದು.ಇಬ್ಬರ ಸ್ಥಿತಿ ಚಿಂತಾ ಜನಕವಾಗಿದೆ. ಇವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸ ಲಾಗಿದೆ. ಉಳಿದ ಗಾಯಾಳುಗಳನ್ನು ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎರಡು ಆಟೋದಲ್ಲಿ ಒಟ್ಟು19 ಜನರು ಪ್ರಯಾಣಿಸುತ್ತಿದ್ದರು
ಈ ದುರ್ಘಟನೆಯಲ್ಲಿ ಮರಣ ಹೊಂದಿದವರು ಯಾಸ್ಮಿನ್(45) ಸಲೀಮಾ( 40 ) ಉಮೇಶ್(27) ಜಹೀರ(16) ಸಾಪ್ರಾಬಿ(55) ಕೌಸರ್ ಬಾನು (35) ಇಬ್ರಾಹಿಂ (33) ಸೇರಿದಂತೆ ಒಟ್ಟು ಐವರ ಹೆಸರು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ 12 ಜನ ಗಾಯಾಳುಗಳು ಪೈಕಿ 5 ಜನರನ್ನು ಬಳ್ಳಾ ರಿಯ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ.ಇನ್ನುಳಿದಂತೆ ಹೊಸಪೇಟೆ ಯ 100 ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಗ್ರಾ ಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲಾ ಉಸ್ತು ವಾರಿ ಸಚಿವರಾದ ನಾಗೇಂದ್ರ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳ ಆಸ್ಪತ್ರೆ ವೆಚ್ಚಕ್ಕಾಗಿ ಐವತ್ತು ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ಶಾಸಕ ಎಚ್. ಆರ್.ಗವಿಯಪ್ಪ ಗಾಯಾಳು ಗಳಿಗೆ ಸಾಂತ್ವನ ಹೇಳಿದರು. ಐಜಿಪಿ ಲೋಕೇಶ್ ಕುಮಾರ್, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಸಿ ಸಿದ್ದರಾಮೇಶ್ವರ, ಕಾಂಗ್ರೆಸ್ ಮುಖಂಡರು ಹಾಗೂ ಹೊಸಪೇಟೆ ಅಂಜುಮನ್ ಅಧ್ಯಕ್ಷರಾದ ಎಚ್.ಎನ್.ಎಫ್ ಮೊಹಮ್ಮದ್ ಭೇಟಿನೀಡಿದರು.
ವರದಿ :-ಮೊಹಮ್ಮದ್ ಗೌಸ್