ಹೊಸಪೇಟೆಯ  ಕಾರಿಗನೂರ ಗ್ರಾಮದಲ್ಲಿ  ವಿಜೃಂಭಣೆಯ ಗೌರಿ ಹಬ್ಬ ಆಚರಣೆ‌!

0
211

ಹೊಸಪೇಟೆ:- ಜಾಗೃತಿ ಬೆಳಕು

ನಗರದ 23ನೇ ವಾರ್ಡ್ ಕಾರಿಗನೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ 41ನೇ ಗೌರಿ ಉತ್ಸವವನ್ನು ಆಚರಣೆ ಮಾಡಲಾಯಿತು.

ಗೌರಿ-ಸುಂಕಲಮ್ಮದೇವಿ ಟ್ರಸ್ಟ್ ನೇತೃತ್ವದಲ್ಲಿ ಗೌರಿ ಹಬ್ಬವನ್ನು ಆಚರಣೆ ಮಾಡಲಾಯಿತು. ಗೌರಿ ಉತ್ಸವವನ್ನು ಗೌರಿ ದೇವಿಯ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಇರಸಿ ಮೆರವಣಿಗೆಯ ಮೂಲಕ ಸಾಗಿಸುವುದು.

ಗೌರಿ ಉತ್ಸವದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಕಳಸದ ಆರತಿ ಬೆಳಗಿದರು, ಯುವಕರು ಡಿ.ಜೆ. ಗೆ ಕುಣಿದು ಕುಪ್ಪಳಿಸಿದರು ಮತ್ತು ವಿವಿಧ ನಾದಕ್ಕೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಕಾರಿಗನೂರಿನ ನಿವಾಸಿಎಸ್.ಯರ್ರಿಸ್ವಾಮಿ ಮಾತಾನಾಡಿ ಕಾರಿಗನೂರಿ ಸರ್ವ ಭಕ್ತರು ಸತತವಾಗಿ 41ನೇ ವರ್ಷದ ಗೌರಿ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿರುತ್ತೇವೆ. ಗೌರಿ ದೇವಿಯ ಉತ್ಸವವನ್ನು ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಣೆ ಮಾಡುತ್ತಾ ಬಂದಿರುತ್ತೇವೆ‌. ದೇವಿಯು ಎಲ್ಲಾರಿಗೂ ಒಳ್ಳೆಯದು ಆಗಲಿ ಸುಖಃ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯ ದಯಪಾಲಿಸಲಿ ಎಂದು ಬೇಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಕಾರಿಗನೂರಿನ ಮುಖಂಡರಾದ ಹುಲುಗಪ್ಪ, ರಾಮಣ್ಣ,ವದ್ದಟ್ಟಿ ಸುಂಕಪ್ಪ, ಮಂಜುನಾಥ ಪಿ ಎಲ್, ಮೇಸ್ತ್ರಿ ರಾಮಾಂಜಿನಿ,ಸಣ್ಣ ಓಬಳೇಶ್,ಹನುಮಂತ, ಚೌಡಪ್ಪ, ನಾಗರಾಜ, ಎರ್ರಿಸ್ವಾಮಿ(ಬೋಡ),ಸುಂಕಣ್ಣ,ದೊಡ್ಡ ಹುಲಿ, ಯುವಕರಾದ ಪ್ರವೀಣ್ ಕುಮಾರ್, ಗುರುರಾಜ, ಗುರುಮೂರ್ತಿ, ಬಸವರಾಜ, ಹುಲುಗಣ್ಣ,ಭರತ್ ಕುಮಾರ್ ಸಿ ಆರ್, ಪ್ರಕಾಶ್, ರಾಮಾಂಜಿನಿ ಸೇರಿದಂತೆ ಮತ್ತಿತರರು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here