ಹೊಸಪೇಟೆ :-ಜಾಗೃತಿ ಬೆಳಕು ನ್ಯೂಸ್
ಜೂ,29. ನಗರದ ಶಾ ವಾಲಿ ಈದ್ಗ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಹೊಸಪೇಟೆ ಕಾಂಗ್ರೆಸ್ ಮುಖಂಡರು ಹಾಗು ಅಂಜುಮನ್ ಕಮಿಟಿ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಈ ದಿನ ವಿಶ್ವದಾದ್ಯಂತ ಬಕ್ರೀದ್ ಹಬ್ಬ ಆಚರಿಸುತ್ತಿರುವ ಎಲ್ಲ ನನ್ನ ಮುಸ್ಲಿಂ ಭಾಂದವರಿಗೂ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಬಕ್ರೀದ್ ಹಬ್ಬವು ನಮ್ಮ ಕ್ಷೇತ್ರದಾದ್ಯಂತ ಹಾಗೂ ದೇಶದಾದ್ಯಂತ ಉತ್ತಮ ಮಳೆ ಬೆಳೆಯಾಗಿ ಪ್ರತಿಯೊಬ್ಬರಿಗೂ ಸುಃಖ ಶಾಂತಿ, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ ಪ್ರೇಮ ವಾತ್ಸಲ್ಯದಿಂದ ಸಮೃದ್ಧಿಗೊಂಡು ಉತ್ತಮ ಆರ್ಥಿಕತೆ’ ಆರೋಗ್ಯ ಆಯುಷ್ಯ ನೀಡಲಿ ಯಂದು ದೇವರಲ್ಲಿ ಪ್ರಾರ್ಥಿಸಿದರು ಹಾಗು ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ ಆದೇಶದ ಪ್ರಕಾರ ಕುರ್ಬಾನಿ ಎಂದರೆ ತ್ಯಾಗ ಕೆಟ್ಟ ಗುಣಗಳಾದ ಕಾಮ ಕ್ರೋಧ, ಲೋಭ, ಮೋಹ ಮದ, ಮತ್ಸರ ಹಾಗು ಇವುಗಳೊಂದಿಗೆ ಮುಂತಾದ ದುರ್ಗುಣಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಪರಸ್ಪರೊಂದಿಗೆ ಹಂಚಿಕೊಂಡು ತಿನ್ನುವ ಮನೋಭಾವನೆಯನ್ನು ಪ್ರತಿಯೊಬ್ಬರು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನೆಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮೌಲಾನ
(ಧರ್ಮ ಗುರುಗಳು) ಮೊಹಮ್ಮದ್ ಅಬ್ದುಲ್ ಸಮದ್ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್ ಕಾರ್ಯದರ್ಶಿಗಳಾದ ಎಮ್.ಡಿ.ಅಬೂಬಕ್ಕರ್ ಖಾಜಾಂಚಿಗಳಾದ ಜಿ.ಅನ್ಸರ್ ಭಷಿ ಸಹಕಾರ್ಯದರ್ಶಿಗಳಾದ ಡಾ.ಎಮ್.ಡಿ.ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಮತ್ತು ಎಲ್ ಗುಲಾಮ್ ರಸೂಲ್ ಅಬ್ದುಲ್ ಖಾದರ್ ರಫಾಯಿ ಖದೀರ್ ಹಾಗೂ ಮುಸ್ಲಿಂ ಮುಖಂಡರುಗಳಾದ ಖದೀರ್, ವಾಹೀದ್ ಬೈ, ನಾಸೀರ್, ಜಫ್ರುಲ್ಲಾ ಖಾನ್‌ಸಾಬ್, ರಜಾಕ್, ಹಾಗೂ ಸಾವಿರಾರು ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.
ವರದಿ :-ಮೊಹಮ್ಮದ್ ಗೌಸ್