ಹಳ್ಳಿಯ ಯುವಕನಿಗೆ ಗೌರವ ಡಾಕ್ಟರೇಟ್ ಪದವಿ”

0
319

“ಅರಣ್ಯ ರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಹಳ್ಳಿಯ ಯುವಕನಿಗೆ ಗೌರವ ಡಾಕ್ಟರೇಟ್ ಪದವಿ”

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಮಾಹೋಸಳ್ಳಿ ಗ್ರಾಮದ ಹಳ್ಳಿ ಹುಡುಗನ ಪಾಲಿಗೆ ಬಂತು ಡಾಕ್ಟರೇಟ್ ಪ್ರಶಸ್ತಿ..

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ “ಲೋಂಡಾ ವಲಯ ಅರಣ್ಯ ಕಛೇರಿ ” ಯಲ್ಲಿ ‘ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಯುವಕ, ಕು || ಗುಂಡಪ್ಪ ತಂದೆ ಶಾಮರಾವ ಹೊಸಮನಿ ರವರಿಗೆ, ಅರಣ್ಯ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿಯ ” ಅಣಬೆ ” ಗಳ ಅಧ್ಯಯನಕ್ಕೆ ” ಶ್ರೀ ವಿಶ್ವನಾಥ್ ಚಿಮ್ಮಕೋಡ ರವರ ಮಾರ್ಗದರ್ಶನಲ್ಲಿ ಮಂಡಿಸಿದ “ಫಾರೆಸ್ಟ್ ಆಂಡ್ ವೈಲ್ಡ್ ಮಶ್ರೂಮ್” ವಿಷಯಕ್ಕೆ ದಿನಾಂಕ 26/02/2022 ರಂದು ತಮಿಳುನಾಡಿನ ಹೊಸೂರಿನಲ್ಲಿ ನಡೆದ ” ಇಂಟರ್ನ್ಯಾಷನಲ್ ಪೀಸ್ ಯೂನಿವರ್ಸಿಟಿ ( International Peace University ) ಜರ್ಮನಿಯಿಂದ ‘ ಗೌರವ ಡಾಕ್ಟರೇಟ್ ‘ ಪದವಿ ನೀಡಲಾಯಿತು ಈ ಸಂದರ್ಭದಲ್ಲಿ ಡಾ|| ಕಿಮ್ ಜರ್ಮನಿ ಹಾಗು ಪುರಸ್ಕೃತರ ತಂದೆಯವರಾದ ಶ್ರೀ ಶಾಮರವ ಹೊಸಮನಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ದೇಗಲ್ಮಡಿ. ಕು || ಅಭಿಲಾಷ್ ಹೊಸಮನಿ ಹಾಗು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ವರದಿ :-ಸುಧೀರ ಕುಮಾರ ಬೀ ಪಾಂಡರೇ

LEAVE A REPLY

Please enter your comment!
Please enter your name here