ಹೊಸಪೇಟೆ:- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)
ನ,17 ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ಕೋವಿಡ್ 19 ರ ಸಂದರ್ಭದಲ್ಲಿ ಕಾರ್ಯನಿರ್ವಹಿಸುವಾಗ ಮೃತರಾದ ಗ್ರಾಮ ಪಂಚಾಯತಿ ನೌಕರರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿಗಳಲ್ಲಿ ಆಶ್ವಾಸನೆ ನಿಧಿ ಸ್ಥಾಪಿಸಿ ಗ್ರಾಮ ಪಂಚಾಯತಿಗಳನ್ನು ಆಶ್ವಾಸನೆ ನಿಧಿಗೆ ಸ್ವಂತ ನಿಧಿಯಿಂದ 50,000 ಐವತ್ತು ಸಾವಿರ ರೂಗಳು ರೂಗಳನ್ನು ಖಾತೆಗೆ ವರ್ಗಾಯಿಸುವಂತೆ ಪಿಡಿಒ ಗಳ ಮೂಲಕ ಒತ್ತಾಯ ಮಾಡುತ್ತಿದೆ.
ತಮ್ಮ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಪಿ ಡಿ ಓ ಗಳ ಸಭೆ ಕರೆದು ತಾವು ಹಣ ವರ್ಗಾಯಿಸದಿದ್ದರೆ ಗ್ರಾಮ ಪಂಚಾಯಿತಿಯ ಲೆಕ್ಕಪತ್ರಗಳ ತನಿಖೆ ಮಾಡಿಸುತ್ತೇನೆ ಎಂದು ಬೆದರಿಸಿರುವ ಬಗ್ಗೆ ದೂರವಾಣಿ ಮುಖಾಂತರ ಪ್ರಜಾವಾಹಿನಿಗೆ ಸಣ್ಣಕಿಯವರು ತಿಳಿಸಿದರು.
ಆದ್ದರಿಂದ ಆಶ್ವಾಸನೆ ನಿಧಿಗೆ ಹಣ ವರ್ಗಾವಣೆ ಮಾಡುವುದನ್ನು ವಿರೋಧಿಸಿ ದಿನಾಂಕ 18.11.2022 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆಯನ್ನ ಹಮ್ಮಿಕೊಂಡಿದ್ದೇವೆ ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷನಾದ ಸಣ್ಣಕ್ಕೆ ಲಕ್ಷ್ಮಣ್ ಹೋರಾಟದಲ್ಲಿ ಭಾಗವಹಿಸುತ್ತಿದ್ದೇನೆ ಹಾಗೂ ನಮ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ ನಮ್ಮ ವ್ಯಾಪ್ತಿಯ ವಿಧಾನ ಪರಿಷತ್ ಸದಸ್ಯರ ಬೆಂಬಲವನ್ನು ಕೇಳೋಣ ದಯಮಾಡಿ ಎಲ್ಲರೂ ತಪ್ಪದೇ ಭಾಗವಹಿಸಿ ಈಗಾಗಲೇ 15ನೇ ಹಣಕಾಸು ಎಂ.ಎನ್.ಆರ್ ಜಿ.ಎ.ಯಾವುದರಲ್ಲೂ ಕೆಲಸ ಮಾಡಿಸಲು ಬಿಡುತ್ತಿಲ್ಲ ಹಾಗೂ ಜಲಜೀವನ ಮಿಷಿನ್ ಯೋಜನೆ ಅನುಷ್ಠಾನ ಗೊಳ್ಳದ ಗ್ರಾಮ ಪಂಚಾಯಿತಿಗಳ ಹಣವನ್ನ ಹಿಂದಿರುಗಿಸುತ್ತಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಬ್ಲಾಕ್ ಮೇಲ್ ತಂತ್ರವನ್ನು ಉಪಯೋಗಿಸಿ
ಗ್ರಾಮ ಪಂಚಾಯತಿಗಳ ಸ್ವಂತ ಆದಾಯಕ್ಕೂ ಕೈ ಹಾಕುವ ಕೆಲಸ ಜಿಲ್ಲಾ ಪಂಚಾಯತಿ ಸಿಇಒ ಅವರಿಂದ ನಡೆಯುತ್ತಿದೆ ಎನ್ನುವುದು ವಿಷಾದನೀಯ ಕಾರಣ ನಾವೆಲ್ಲರೂ ಒಂದಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಉಳಿಸುವುದರೊಂದಿಗೆ ಬೆಳೆಸಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ ಅವರು ತಿಳಿಸಿದರು
ವರದಿ :-ಮೊಹಮ್ಮದ್ ಗೌಸ್