ಸಿಂದಗಿ ಪೊಲೀಸ್ ಠಾಣೆಯಲ್ಲಿ:DYSP ಶ್ರೀಧರ ದೊಡ್ಡಿ ಅವರಿಂದ ಸುದ್ದಿಗೋಷ್ಠಿ!!

0
501

ಸಿಂದಗಿ :- ಸಿಂದಗಿ ಉಪಚುನಾವಣೆ ನಿಮಿತ್ಯವಾಗಿ ಪೊಲೀಸ್ ಇಲಾಖೆ ವತಿಯಿಂದ ರೊಡ ಮಾರ್ಚ್ ಮಾಡಲಾಯಿತು ಇದೆ ವೇಳೆ ಶ್ರೀಧರ ದೊಡ್ಡಿ ಚುನಾವಣಾ ನೋಡಲ್ ಅಧಿಕಾರಿಗಳು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು
ಇದೆ ಸಂದರ್ಭದಲ್ಲಿ ಈ ಚುನಾವಣೆ ಸಂಬಂದ ಪಟ್ಟ0ತೆ ನಾವು ಎಲ್ಲ ಕಡೆಯಿಂದ ಬಂದೋಬಸ್ತ ಮಾಡಲಾಗಿದೆ.ಹಳ್ಳಿಗಳಲ್ಲಿ ಆಗಲಿ ಚೆಕಪೋಸ್ಟ್ಗಳಲ್ಲಿ ಆಗಲಿ ತೀವ್ರವಾಗಿ ನಿಗವಹಿಸಲಿದ್ದಿವೆ
ಮತ್ತು ಯಾವುದೇ ಪಕ್ಷವಿರಲಿ ಸಂಘಟನೆಗಳಿರಲಿ ಅವರಗೆ ಬದ್ರತೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ.

ಈ ವಿಧಾನಸಭೆ ಉಪ ಚುನಾವಣೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬರದೆಂದು ನಮ್ಮ ಉದ್ದೇಶವಾಗಿದೆ ಮತ್ತು ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನಮ್ಮ ಇಲಾಖೆಯ ಬಂದೋಬಸ್ತ ಆಗಿದೆ ಎಂದು ತಿಳಿಸಿದರು

ಇದೆ ಸಮಯದಲ್ಲಿ ಸಿಂದಗಿಯ ನಗರದ ತಾಲೂಕ ಕಚೇರಿಯಿಂದ ಪೊಲೀಸ್ ಠಾಣೆಯ ವರೆಗೆ ಸುಮಾರು 100 ಜನ ಸಿಂಬಂದಿ ಮತ್ತು ಅಧಿಕಾರಿಗಳು ಕೂಡಿ ರೊಡ್ ಮಾರ್ಚ್ ಮಾಡಲಾಯಿತು.

ಹಾಗೂ ಮೊರಟಗಿ, ಬಮ್ಮನಜೋಗಿ, ದೇವಣಗಾವ,ವಿಭೂತಿಹಳ್ಳಿ,ಚಾಂದಕವಟೆ ಇನ್ನು ಬಹಳಷ್ಟು ಕಡೆ ಚೆಕಪೋಸ್ಟ್ಗಳನ್ನು ನಿರ್ಮಿಸಲಾಗಿದೆ ಮತ್ತು ಈ ಚೆಕಪೋಸ್ಟ್ನಲ್ಲಿ ಯಾವುದೇ ಒಂದು ಪಕ್ಷದ ವಾಹನ ಪಕ್ಷದ ದ್ವಜವನ್ನು ಹಾಕಿಕೊಂಡು ಹಾದುಹೋಗುವಾಗ ಅದರಲ್ಲಿ 50,000 ಕಿಂತ ಹೆಚ್ಚು ಹಣ ಸಿಕ್ಕರೆ ಅಂತಹ ವಾಹನಗಳನ್ನು ಸೀಜ ಮಾಡಲಾಗುವುದು. ಮತ್ತು ಇನ್ನಿತರ ಯಾವುದೇ ರೀತಿಯ ತುರ್ತುಪರಿಸ್ಥಿತಿಯ ವಾಹನಗಳು ಹಾದು ಹೋಗುವಾಗ ಅದರಲ್ಲಿ ಹಣ ಕಂಡು ಬಂದಲ್ಲಿ ಆ ಹಣದ ಬಗ್ಗೆ ನಿಕರ ಮಾಹಿತಿಯನ್ನು ನೀಡಿ ಹೋಗತಕ್ಕದು ಎಂದು ತಿಳಿಸಿದರು…

LEAVE A REPLY

Please enter your comment!
Please enter your name here