ಸಿಂಗ್ ಈಸ್ ಕಿಂಗ್, ‘ಆನಂದ್ ಸಿಂಗ್’ ಅಂದರೇ ಹಂಪಿ ಉತ್ಸವದ ನೆನಪು…….

0
342

ಸಚಿವ ಆನಂದ್ ಸಿಂಗ್ ಅವರಿಗೆ ಕೆಟ್ಟ ಹೆಸರು ತರಲು ಮುಂದಾದ ಹೊಸ ವಾರ್ತಾಧಿಕಾರಿ ಧನಂಜಯಪ್ಪ ..!!!!!

ರಾಜ್ಯದ ಎಲ್ಲ ಜಿಲ್ಲೆಗಳಿಂದ ಈ ಹಂಪಿ ಉತ್ಸವಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು, ಇರುವದರಿಂದ ರಾಜ್ಯ ಮಟ್ಟದ, ಪ್ರಾದೇಶಿಕ, ಸ್ಥಳೀಯ ವಿವಿದ ಪತ್ರಿಕೆಗಳ ವರದಿಗಾರರು ಹಾಗೂ ಟಿವಿ ಮಾಧ್ಯಮದವರು ರಾಜ್ಯ, ದೇಶಾದ್ಯಂತ ಸುದ್ದಿ ಪ್ರಸಾರ ಮಾಡಲು ಸುಮಾರು 150ಕ್ಕೂ ಹೆಚ್ಚು ವರದಿಗಾರರು ಆಗಮಿಸಿದ ಮಾಹಿತಿಯಿದೆ. ಅದರಲ್ಲೂ ವಿಜಯನಗರ ನೂತನ ಜಿಲ್ಲೆಯಾದ ಬಳಿಕ ನಡೆಯಲಿರುವ ಮೊದಲ ಉತ್ಸವ ಇದಾಗಿದೆ. ಇದು ನಮ್ಮೆಲ್ಲರ ಸಂಭ್ರಮದ ಉತ್ಸವವಾಗಿದೆ, ಆನಂದ್ ಸಿಂಗ್ ಅವರು ಅತ್ಯುತ್ಸಾಹದಿಂದ ಉತ್ಸವ ಆಚರಿಸಲು ಮುಂದಾಗಿದ್ದಾರೆ, ಇದಕ್ಕೆ ಎಲ್ಲ ಜನರ ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದೆ. ವರದಿ ಮಾಡಲು ವರದಿಗಾರರಿಗೆ ಉತ್ಸವದ ಪಾಸ್ ನೀಡಿದರೇ ಸರ್ಕಾರಕ್ಕೇನು ನಷ್ಟಯಿಲ್ಲ, ಸಚಿವರಿಗೂ ತೊಂದರೆ ಎದುರಾಗೋಲ್ಲ, ದುಬಾರಿ ಹಣವೂ ಖರ್ಚಾಗೋಲ್ಲ, ಯಾಕೆ ??? ಈ ಸಮಸ್ಯೆ !!!!!!!

ಅವರವರ ಸಂಸ್ಥೆಗಳು ವರದಿಗಾರರಿಗೆ ಅಧಿಕೃತವಾಗಿ ನೀಡಿರುವ ಐಡಿ ಕಾರ್ಡ್ ಮೇಲೆ ಉತ್ಸವದ ಪಾಸ್ ಗಳನ್ನು ವಿತರಣೆ ಮಾಡಬಹುದು. ಆದರೇ, ವಾರ್ತಾಧಿಕಾರಿ ಧನಂಜಯಪ್ಪ ಅವರು, ಇಲ್ಲಿ ಮಲತಾಯಿ ಧೋರಣೆ ತೊರಿಸುತ್ತಿದ್ದಾರೆ, ಕೇವಲ 50 ಪಾಸ್ ಗಳೇ ನೀಡಿದರೇ ಉಳಿದ ವರದಿಗಾರರ ಪಾಡೇನು, ದಯವಿಟ್ಟು ಈ ವಿಷಯದ ಬಗ್ಗೆ ಮಾನ್ಯ ಸಚಿವರು, ಗಂಭೀರವಾಗಿ ಪರಿಗಣಿಸಿ ಮೂರು ದಿನಗಳ ಉತ್ಸವಕ್ಕೆ ವರದಿ ಮಾಡಲು ಆಗಮಿಸಿದ ವರದಿಗಾರರಿಗೆ ಪಾಸ್ ವಿತರಿಸುವ ವ್ಯವಸ್ಥೆ ‌ಕಲ್ಪಿಸಬೇಕು,

ವಾರ್ತಾಧಿಕಾರಿ ಧನಂಜಯಪ್ಪ ಅವರ ಹತ್ತಿರ ನಮ್ಮ ವರದಿಗಾರರೆಲ್ಲರೂ ಹೋಗಿ ಅವರವರ ಸಂಸ್ಥೆಗಳು ನೀಡಿದ ಐಡಿ ಕಾರ್ಡ್ ನ್ನು ತೋರಿಸಿ ಪಾಸ್ ನೀಡಲು ಮನವಿ ಮಾಡಿದರೇ, ನಿರ್ಲಕ್ಷ್ಯ ದಿಂದ ಬೇಜವಾಬ್ದಾರಿಯಿಂದ ಉತ್ತರವನ್ನು ನೀಡುತ್ತಿದ್ದಾರೆ, ಯಾರಿಗೆ ಬೇಕಾದರೂ ಹೇಳಿ, ನಾನು ಕೊಡುವುದು ಇಷ್ಟೇ ಅಂತ ಖಡಕ್ ಆಗಿ ಹೇಳುವ ವ್ಯವಸ್ಥೆಯಾಗಿದೆ, ಈ ಉತ್ಸವ ಅಖಂಡ ಜಿಲ್ಲೆ ಇಭ್ಭಾಗವಾದ ನಂತರ ವಾರ್ತಾಧಿಕಾರಿ ಧನಂಜಯಪ್ಪ ಅವರ ನೇತೃತ್ವದಲ್ಲಿ ಈ ಉತ್ಸವ ನಡೆಯುತ್ತಿದೆಯಾ ಅಥವಾ ಸರ್ಕಾರದ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯುತ್ತಿದೆಯಾ ಅರ್ಥವಾಗುತ್ತಿಲ್ಲ,

ಪತ್ರಕರ್ತರ ಮೇಲೆ ತಾರತಮ್ಯಾಕೆ?

ದಯವಿಟ್ಟು ನಮ್ಮ ಸಚಿವರು ಇದನ್ನು ಪರಿಗಣಿಸಿ, ನಮ್ಮ ಎಲ್ಲ ಪತ್ರಕರ್ತರಿಗೆ ಪಾಸ್ ವ್ಯವಸ್ಥೆ, ವ್ಯವಸ್ಥೆ ಕಲ್ಪಿಸಬೇಕು ಎಂದು‌ ನಮ್ಮ ಮನವಿ.

ಸಚಿವರಾದ ಆನಂದ್ ಸಿಂಗ್ ಅವರು ಅಭಿವೃದ್ಧಿ ಹರಿಕಾರರು ಎನ್ನುವ ಹೆಸರಿದೆ, ನೂತನ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ನಡೆಯಲಿರುವ ಈ ಹಂಪಿ ಉತ್ಸವದಲ್ಲಿ ಮಾಧ್ಯಮದವರಿಗೆ ಈ ಅವ್ಯವಸ್ಥೆ ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here