ಸರಳವಾಗಿ ಆಚರಿಸಿದ ಡಾ.ಬಾಬು ಜಗಜೀವನ್ ರಾಮ್ ರವರ 115ನೇ ಜಯಂತಿ!!!

0
210

ವಿಜಯನಗರ ಜಿಲ್ಲೆ ಹೊಸಪೇಟೆ

ವಿಜಯನಗರ ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿ ಆಚರಣೆ
ವಿಜಯನಗರ(ಹೊಸಪೇಟೆ),ಏ.05 ವಿಜಯನಗರದ ಜಿಲ್ಲಾಡಳಿತ ವತಿಯಿಂದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ದಿವಂಗತ ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರದಂದು ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಎನ್. ಮಹೇಶ್ ಬಾಬು ಅವರು ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಮಾಜದ ಮುಖಂಡರರಿಗೆ ಜಯಂತಿಯ ಶುಭಾಷಯಗಳನ್ನು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ದಿನದಂದು ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.
ಉಪನ್ಯಾಸಕ ಗುರು ಬಸವರಾಜ್ ಅವರು ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ಅವರು ಧಾರ್ಮಿಕ, ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಅದ ಛಾಪು ಮೂಡಿಸಿದ್ದಾರೆ. ದಲಿತ, ಅಸ್ಪøಶ್ಯತೆಯ ವಿರುದ್ಧ ಹೋರಾಟದಿಂದ ಸಮಾಜದಲ್ಲಿ ಕ್ರಾಂತಿ ಮೂಡಿಸಿದ್ದಾರೆ ಹಾಗೂ ಹಲವಾರು ಕಾರ್ಮಿಕರ ಕಲ್ಯಾಣ ನೀತಿಗಳಿಗೆ ಅಡಿಪಾಯ ಹಾಕಿಕೊಟ್ಟಿದ್ದರು. ಇವರ ವಿಚಾರ ಮೌಲ್ಯಗಳನ್ನು ಸಾರ್ವಜನಿಕರು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ಸಹಾಯಕ ಆಯುಕ್ತರರಾದ ಸಿದ್ದರಾಮೇಶ್ವರ, ಗ್ರೇಡ್-1 ತಹಶೀಲ್ದಾರ್ ವಿಶ್ವಜಿತ ಮೇಹತಾ, ನಗರಸಭೆಯ ಪೌರಾಯುಕ್ತ ಮನ್ಸೂರು ಅಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್ ಸ್ನೇಹಲತಾ ಮತ್ತು ಕಚೇರಿ ಸಿಬ್ಬಂದಿಯವರು ಹಾಗೂ ದಲಿತ ಸಮಾಜದ ಮುಖಂಡರು ಇದ್ದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here