ವಿಶ್ವ ಪ್ರಸಿದ್ಧ ಹಂಪೆಯ ಯೋಗ ಮಕ್ಕಳು ಐತಿಹಾಸಿಕ ಸಾಧನೆ

0
138

ಹೊಸಪೇಟೆ-ಹಂಪಿ :-ಜಾಗೃತಿ ಬೆಳಕು

ಥೈಲ್ಯಾಂಡ್ ದೇಶದ ಹವಾಡ ಕನ್ವೆನ್ಷನ್ ನಲ್ಲಿ ನಡೆದಂತಹ ಯೋಗ ಚಾಂಪಿಯನ್ಶಿಪ್ ನಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸಿದ ಹಂಪಿಯ ನಾಗಮ್ಮ ಮತ್ತು ಗಣೇಶ್ ಅವರು, 16-18 ವರ್ಷದ ಒಳಗಿನ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ನಾಗಮ್ಮ ಅವರು ಪ್ರಥಮ ಸ್ಥಾನ ಪಡೆದು ಸುವರ್ಣ ಪದಕವನ್ನು ವಿಜೇತರಾಗಿದ್ದು, ಪುರುಷರ ವಿಭಾಗದಲ್ಲಿ ಗಣೇಶ್ ದ್ವಿತೀಯ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕ ವಿಜೇತರಾಗಿರುತ್ತಾರೆ,

ವಿಶೇಷ ಏನೆಂದರೆ ಪ್ರಸ್ತುತ ಇವರಿಬ್ಬರ ಪೋಷಕರು ಹಂಪಿಯಲ್ಲಿ ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿದ್ದು, ಹಂಪಿಯ ರಂಜು ಆರ್ಟ್ಸ್ ಯೋಗ ಟ್ರಸ್ಟ್ ಸುಮಾರು 100ರಿಂದ 150 ಮಕ್ಕಳಿಗೆ ಉಚಿತ ಯೋಗ್ಯ ಅಭ್ಯಾಸವನ್ನು ಮಾಡಿಸುತ್ತಿದ್ದಾರೆ, ಇಬ್ಬರ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ ಯೋಗ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದ ಸಂದರ್ಭದಲ್ಲಿ ಇಬ್ಬರು ಭಾಗವಹಿಸಿ ವಿಜೇತರಾಗಿ ಥೈಲ್ಯಾಂಡ್ ಗೆ ಆಯ್ಕೆಯಾಗಿದ್ದರು,

ಹಣದ ಕೊರತೆ ಇರುವುದರಿಂದ ಇಬ್ಬರು ಮಕ್ಕಳಿಗೆ ಥೈಲ್ಯಾಂಡ್ ಹೋಗಲು ಅನೇಕ ದಾನಿಗಳು ಸಹ ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ, ಬಡತನದಲ್ಲಿ ಅರಳಿದ ಪ್ರತಿಭೆ ಇವರನ್ನು ಉನ್ನತ ಮಟ್ಟದಲ್ಲಿ ಹೋಗಲಿಕ್ಕೆ ಸಹಾಯ ಆಗಿದ್ದು, ಇವರು ನಮ್ಮ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿ ರಾಷ್ಟ್ರಕ್ಕೆ ಕೀರ್ತಿಯನ್ನು ತಂದಿರುತ್ತಾರೆ, ಈ ಸಂದರ್ಭದಲ್ಲಿ ಶ್ರೀಮತಿ ರಂಜಾನ್ ಬಿ ಪಿ, ಯೋಗ ವ್ಯವಸ್ಥಾಪಕರು, ಶ್ರೀ ಫಕ್ರುದ್ದೀನ್ ಯೋಗ ಕೋಚ್ ಇವರುಗಳ ಭಾಗವಹಿಸಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here