ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರ: ಜಿಲ್ಲಾಧಿಕಾರಿಗಳ ಮನವಿ

0
96

ಜಾಗೃತಿ ಬೆಳಕು, ನ್ಯೂಸ್,ಹೊಸಪೇಟೆ (ವಿಜಯನಗರ)

ವಿಜಯನಗರ ಜಿಲ್ಲೆಯನ್ನು ಶೈಕ್ಷಣಿಕವಾಗಿ ಜಾಗೃತಗೊಳಿಸಲು ಮತ್ತು ಇಲ್ಲಿನ ವಿದ್ಯಾರ್ಥಿಗಳು ಉನ್ನತ ಮಟ್ಟದ ಸರ್ಕಾರಿ ಮತ್ತು ಇತರೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಹುದ್ದೆಯಲ್ಲಿ ಇರುವ ಉದ್ದೇಶ ಇಟ್ಟುಕೊಂಡು ಫೆ.18ರಂದು ಆಯೋಜಿಸಿರುವ ಕಾರ್ಯಗಾರದ ಸದುಪಯೋಗ ಪಡೆಯಲು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮನವಿ ಮಾಡಿದ್ದಾರೆ.
ವಿಷೇಶ ತರಬೇತಿದಾರರಾಗಿ ಶಿಕಾರಿಪುರದ ಸಾಧನ ಅಕಾಡಮಿಯ ಎಜ್ಯುಕೇಟರ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ್ ಬಿ., ರಾಣಿಬೆನ್ನೂರಿನ ಕರ್ನಾಟಕ ಲೀವಿಂಗ್ ಲೈಫ್ ಕೋಚರ್ ಬ್ರಾವೋ ವಿಶ್ವದಾಖಲೆ ಪುರಸ್ಕೃತರಾದ ನಂದೀಶ್.ಬಿ ಶೆಟ್ಟಾರ್ ಅವರು ಆಗಮಿಸಿ ಐ.ಎ.ಎಸ್., ಕೆ.ಎ.ಎಸ್., ಐ.ಪಿ.ಎಸ್., ಸಿಟಿಐ, ಪಿಡಿಓ, ಎಫ್.ಡಿ.ಎ., ಎಸ್.ಡಿ.ಎ., ಪಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯ ಕುರಿತು ಮತ್ತು ವ್ಯಕ್ತಿತ್ವ ವಿಕಸನ ಕುರಿತು ಭೋಧನೆ ಮಾಡಲಿದ್ದಾರೆ.
ಜಿಲ್ಲಾಡಳಿತ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಮತ್ತು ಪದವೀಧರ ವಸತಿ ನಿಲಯ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಇತರೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಕಾರ್ಯಗಾರವು ಫೆಬ್ರವರಿ 18ರಂದು ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಆಯೋಜಿಸಲಾಗಿರುವ ಕಾಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ಹೊಸಪೇಟೆ ಉಪವಿಭಾಗಾಧಿಕಾರಿಗಳಾದ ನೋಂಗ್ಟಾಯ್ ಮಹದ್ ಅಲಿ ಅಕ್ರಮ್ ಷಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶಾಷುಮೋದಿನ್ ಭಾಗವಹಿಸಲಿದ್ದಾರೆ. ಜಿಲ್ಲಾಡಳಿತವು ವಿಶೇಷ ಕಾಳಜಿ ವಹಿಸಿ ರೂಪಿಸಿರುವ ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಆಸಕ್ತ ಸ್ಪರ್ಧಾರ್ಥಿಗಳು ಭಾಗವಹಿ ಕಾರ್ಯಾಗಾರದ ಸದುಪಯೊಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here