ವಿಜಯನಗರ ಜಿಲ್ಲೆಯ ನಗರಸಭೆ ಚುನಾವಣೆಯ ಅಖಾಡದಲ್ಲಿ SDPI ?

0
674

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ವಿಜಯನಗರ ಜಿಲ್ಲೆಯಲ್ಲಿ ಚುನಾವಣಾ ಆಯೋಗದಿಂದ ನಗರಸಭೆ ಚುನಾವಣೆ ಆದೇಶ ಬಂದ ತಕ್ಷಣವೇ 35 ವಾರ್ಡ್ ಗಳಲ್ಲಿ ನಗರಸಭಾ ಚುನಾವಣೆಯ ತಯಾರಿ ಬಲು ಜೋರಾಗಿಯೇ ಕಂಡುಬಂತು ಕೆಲವೊಂದು ವಾರ್ಡಗಳಲ್ಲಿ ಮತದಾರರ ಮತಗಳನ್ನು ಸೆಳೆಯಲು ಬಂಗಾರದ ಮೂಗುಬಟ್ಟು, ಕೆಲವೊಂದು ಕಡೆ ಐದುನೂರು ರೂಪಾಯಿ ಇಂದ ಒಂದು ಸಾವಿರ ರೂಪಾಯಿಯ ಟೋಕನ್ ಹಂಚುವ ಮೂಲಕ ಮತದಾರ ಮನಸ್ಸು ಗೆಲ್ಲುವ ಪ್ರಯತ್ನಪಟ್ಟರು ಆದರೆ ಈ ಸಲ ಮತದಾರರು ನಮ್ಮ ಅಭ್ಯರ್ಥಿಯನ್ನು ಶ್ರೇಷ್ಠವಾಗಿ ಆಯ್ಕೆ ಮಾಡುತ್ತೇವೆ ಎಂದು ಜನರ ಮಾತಾಗಿತ್ತು,,

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಭೆಯೂ ರಾಜ್ಯ ಸಮಿತಿ ಸದಸ್ಯರಾದ
ಅಮ್ಜದ್ ಖಾನ್ ರವರ ಅಧ್ಯಕ್ಷತೆಯಲ್ಲಿ ಹೊಸಪೇಟೆ ನಗರಸಭೆ ಚುನಾವಣೆ ಸಂಬಂಧ ದಿನಾಂಕ 28-11-2021 ಪೂರ್ವಭಾವಿ ಸಭೆ ಜರುಗಿತು.

ಸಭೆಗೆ ಮಾಹಿತಿ ನೀಡಿದ ವಿಜಯನಗರ ಜಿಲ್ಲಾಧ್ಯಕ್ಷ ವಲಿ ಭಾಷಾ ಹೊಸಪೇಟೆ ನಗರಸಭೆಯ ಎಲ್ಲಾ 35 ವಾರ್ಡ್ ಗಳಿಗೂ ಸ್ಪರ್ಧಿಸುವ ಬಗ್ಗೆ ಒಲವು ವ್ಯಕ್ತವಾಗಿದ್ದು,
ಎಲ್ಲಾ ಜಾತಿಯ ಧರ್ಮದವರಿಗೂ ಆದ್ಯತೆ ಕೊಡಲಾಗುವುದು
,,

ಈಗಾಗಲೆ ಎಸ್ಡಿಪಿಐ(SDPI)ಎಲ್ಲ ಜಾತಿಗಳ ಒಲವು ಗಳಿಸಿಕೊಳ್ಳುವುದರ ಮುಲಕ ಅನೇಕ ರಾಜ್ಯ ಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿಸುವ ಕಾರ್ಯವೇನೋ ನಡೆಸಿದೆ ಅಂತೆಯೆ ನೂತನ ಜಿಲ್ಲೆಯಲ್ಲಿ ಈ ಹೋಸ ಪ್ರಯೋಗಗಳನ್ನು ಮಾಡುವುದರ ಮುಲಕ ಓಲೈಕೆ ಮಾಡುವ ಕೆಲ ರಾಜಕೀಯ ಪಕ್ಷಗಳಿಗೆ ಪಾಠಕಲಿಸಲು ವೇದಿಕೆ ಸಿದ್ದ ಪಡಿಸುತ್ತಿದೆ,

ಆಡಳಿತ ನಡೆಸಿರುವ ವಿವಿಧ ಪಕ್ಷಗಳು ಜನಪರ ಆಡಳಿತ ನೀಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಆದುದರಿಂದ ಪ್ರಸ್ತುತ ರಾಜಕೀಯ ಸನ್ನಿವೇಶ ಎಸ್.ಡಿ.ಪಿ.ಐ ಪಕ್ಷದ ಪರವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ವೀಕ್ಷಕರಾದ ಪ್ರೊಫೆಸರ್ ಗಯಾಸುದ್ದೀನ್ ಹಾಗೂ ಕಲೀಲ್ ರವರು ರಾಜ್ಯ ಸಮಿತಿಗೆ ಶಿಫಾರಸು ಮಾಡಲಿದ್ದಾರೆ. ಶೀಘ್ರದಲ್ಲಿಯೇ ರಾಜ್ಯ ಸಮಿತಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ವಿಜಯನಗರ ಜಿಲ್ಲಾ SDPI ಉಪಾಧ್ಯಕ್ಷರಾದ ನಜೀರ್ ಖಾನ್, ಕಾರ್ಯದರ್ಶಿಗಳಾದ ಕಟಗಿ ಇರ್ಫಾನ್ ಮತ್ತು ಇನ್ನಿತರ ಪ್ರಮುಖ ಜಿಲ್ಲಾ ನಾಯಕರುಗಳು ಉಪಸ್ಥಿತಿರಿದ್ದರು.

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here