ವಿಜಯನಗರ ಜಿಲ್ಲೆಯಲ್ಲಿ 6ನೇ ವಾರ್ಡ್ ಜನರ ಗೋಳು ಕೇಳೋರು ಯಾರು?

0
836

ಜಾಗೃತಿ ಬೆಳಕು ಹೊಸಪೇಟೆ (ಬಿಗ್ ಬ್ರೇಕಿಂಗ್)

ಜೀವ ಬಲಿ ಆಗೋವರೆಗೂ ಆಡಳಿತ ಕಾರ್ಯರೂಪಕ್ಕೆ ಬರೋಲ್ಲ 6ನೇ ವಾರ್ಡ್ ನಿವಾಸಿಗಳ ಮನದಾಳದ ಮಾತಾಗಿದೆ !!

ಒಬ್ಬ ಪ್ರಭಾವಿ ಲೇಔಟ್ ಮಾಲೀಕರನ್ನು ರಕ್ಷಿಸಲು ಸಾವಿರಾರು ಬಡ ಜನರ ಜೀವನವನ್ನು ಸಾವಿನ ದವಡೆಯಲ್ಲಿಟ್ಟಿರುವ ಅಧಿಕಾರಿಗಳು!!

ಮಳೆ ಬಂದಾಗೆಲ್ಲ ಸಂಕಷ್ಟ, ಹಾನಿ ಎದುರಿಸುತ್ತಿರುವ ಜನರ ಸಮಸ್ಯೆ ದೊಡ್ಡದಲ್ಲ!! ಅಧಿಕಾರಿಗಳಿಗೆ ಲೇಔಟ್ ರಕ್ಷಣೆಯೇ ದೊಡ್ಡದು!!ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿಕೊಂಡ 6ನೇ ವಾರ್ಡ ಜನಸಾಮಾನ್ಯರು!!

6ನೇ ವಾರ್ಡ್ ಜನರ ಗೋಳು ಕೇಳೋರು ಯಾರೂ…
ಪ್ರತಿಬಾರಿ ಮಳೆ ಬಂದಗ ಜನಜೀವನ ಅಸ್ತವಸ್ತವಾಗುತ್ತದೆ… ಜನಸಾಮಾನ್ಯರು ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಾರೆ…

ಜಿಲ್ಲಾಡಳಿತಕ್ಕೂ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ಅಳಲು ಮತ್ತು ಕಷ್ಟವನ್ನು ಹೇಳಿಕೊಂಡರು ಗಮನಹರಿಸದ ಅಧಿಕಾರಿಗಳು ಮಳೆಯ ನೀರು ಮನೆಯ ಒಳಗಡೆ ನಗುತ್ತದೆ ಚಿಕ್ಕ ಚಿಕ್ಕ ಮಕ್ಕಳಿಗೆ ರೋಗ ಹರಡುವ ಸಾಧ್ಯತೆ… ಸರಿ ಸುಮಾರು 40 ರಿಂದ 50 ಮನೆಗಳಲ್ಲಿ ನೀರು ನುಗ್ಗಿರುತ್ತದೆ ಪ್ರತಿ ಬಾರಿ ಮಳೆ ಬಂದಾಗ ಅಧಿಕಾರಿಗಳು ಪರಿಶೀಲನೆ ಮಾಡಿ ಸಮಾಧಾನ ಹೇಳಿ ಮುಂದಿನ ದಿನಮಾನಗಳಲ್ಲಿ ಸರಿಪಡಿಸುತ್ತೇವೆ ಇದನ್ನು ಪರಿಶೀಲಿಸುತ್ತೇವೆ ಯಂದು ಹೇಳಿಕೆ ಹೇಳುತ್ತಾರೆ ಎಂದು ಜನಸಾಮಾನ್ಯರು ಅಧಿಕಾರಿಗಳ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.,

ಇದೇ ರೀತಿ ಜನಸಾಮಾನ್ಯರು ಕಷ್ಟವನ್ನು ಅನುಭವಿಸುತ್ತಾರೆ ಆದಷ್ಟು ಬೇಗನೆ ಜಿಲ್ಲಾಧಿಕಾರಿಗಳು ಇತ್ತಕಡೆ ಗಮನಹರಿಸಿ ನಮ್ಮ ಕಷ್ಟವನ್ನು ಪರಿಹರಿಸಿ ಕೊಡಬೇಕೆಂದು 6ನೇ ವಾರ್ಡ್ ನ ನಿವಾಸಿಗಳು ಮತ್ತು ನಗರಸಭೆ ಸದಸ್ಯರಾದ ಖಧೀರ್ ರವರು ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ…

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here