ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ನೂತನವಾಗಿ 31ನೇ ಜಿಲ್ಲೆಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಹಬ್ಬದ ವಾತಾವರಣವೇ ಉಂಟಾಗಿದೆ… ವಿಶ್ವಪರಂಪರೆಯ ಹಂಪಿಯನೇ ಹೊಸಪೇಟೆಯ ಮುನಿಸಿಪಾಲ್ ಮೈದಾನದಲ್ಲಿ ಧರೆಗಿಳಿಸಿದಂತಾಗಿದೆ.!
ಆದರೆ ವಿಜಯನಗರ ಜಿಲ್ಲೆ ಆಗಬೇಕು ಅಂತ ಸಾಕಷ್ಟು ವಿಜಯನಗರ ಜಿಲ್ಲೆಯ ಜನರು ಮತ್ತು ಸಂಘ-ಸಂಸ್ಥೆಯವರು ಜಾತಿ ಭೇದ ಮಾಡದೆ ಜಿಲ್ಲೆ ಗೋಸ್ಕರ ಹಗಲಿರುಳು ಹೋರಾಟ ಮಾಡಿದ್ದಾರೆ ಪತ್ರ ಚಳುವಳಿ ಮಾಡಿದ್ದಾರೆ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ ಇವರಿಗೋಸ್ಕರ ಯಾವತರ ವೇದಿಕೆ ಸಜ್ಜಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ ಇದು ನಾವು ಹೇಳುತ್ತಿರುವ ಮಾತಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಾರಾಡುತ್ತಿರುವ ಸುದ್ದಿ
ವಿದ್ಯಾರಣ್ಯ ವೇದಿಕೆ ಮೇಲೆ ಎಲ್ಲಾ ಸಮುದಾಯದ ಗುರುಗಳನ್ನು ಆಹ್ವಾನಿಸಿ ಸನ್ಮಾನಿಸ ಬೇಕಾಗಿತ್ತು ಆದರೆ ಇದು ಯಾವುದು ನಡೀತಾ ಇಲ್ಲ ಜಿಲ್ಲಾಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ತಾವು ಮಾಡುತ್ತಿದ್ದೀರಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಎಂಐಎಂ ಪಕ್ಷದ ಹೊಸಪೇಟೆ ತಾಲೂಕು ಅಧ್ಯಕ್ಷ ಖದಿರ್ ರವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡರು… ( ಫೇಸ್ಬುಕ್ ) ಜಿಲ್ಲಾಧಿಕಾರಿಗಳ ಗಮನಕ್ಕಿರಲಿ ಇದು ಸರ್ಕಾರದ ಕಾರ್ಯಕ್ರಮ ನಮಗೂ ಗೊತ್ತು ಆದರೆ ನಮ್ಮ ವಿಜಯನಗರ ಉತ್ಸವ ಇದು ನಮ್ಮ ಹಕ್ಕು ಸರ್ವಧರ್ಮ ವೇದಿಕೆಯಾಗಬೇಕು ಹೊರತು ರಾಜಕೀಯ ಬೇಡ ಎಂದು ಎಂಐಎಂ ಪಕ್ಷದ ಹೊಸಪೇಟೆ ತಾಲೂಕು ಅಧ್ಯಕ್ಷ ಮತ್ತು ಖದಿರ್ ರವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡರು…..
ವರದಿ :-ಮೊಹಮ್ಮದ್ ಗೌಸ್