ಹೊಸಪೇಟೆ : ಜಾಗೃತಿ ಬೆಳಕು ( ಬ್ರೇಕಿಂಗ್ ನ್ಯೂಸ್)
ದಿ: 22 ರಂದು ನಗರದ ವಿವಿದ ಈದ್ಗಾ ಮೈದಾನಗಳಾದ ಆರ್ ಟಿ ಒ ಆಫೀಸ್ ಈದ್ಗಾ ಮೈದಾನದಲ್ಲಿ ಬೆಳಗ್ಗೆ ೦7-30 ಗಂಟೆಗೆ ಹಾಗು ಬಸ್ ಡಿಪೋ ಈದ್ಗಾ ಮೈದಾನ, ೦9-೦೦ ಗಂಟೆಗೆ ಕಾರಿಗನೂರು ಈದ್ಗಾ ಮೈದಾನ 09-45 ಗಂಟೆಗೆ , ಟಿ ಬಿ ಡ್ಯಾಂ ಈದ್ಗಾ ಮೈದಾನ್ 1೦-೦೦ ಗಂಟೆಗೆ ಹಾಗು ವಿಶೇಷವಾಗಿ ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನದಲ್ಲಿ 09-30 ಗಂಟೆಗೆ ಪವಿತ್ರವಾದ ರಂಜಾನ್ ಹಬ್ಬವು ಬಹಳ ಸಡಗರ ಸಂಬ್ರಮದಿಂದ ಆಚರಣೆ ಮಾಡಿದ್ದು, ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ಪ್ರಾರ್ಥನೆಯನ್ನು ಸಲ್ಲಿಸಿದರು, ನಂತರ ಪರಸ್ಪರ ಅಲಂಗಿಸುವ ಮೂಲಕ ಹಬ್ಬದ ಶುಭಾಶಗಳನ್ನು ತಿಳಿಸುತ್ತಿದ್ದರು,
ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಹಬ್ಬವನ್ನು ಉದ್ದೇಶಿ ಮಾತಾನಾಡಿದ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಶ್ರೀ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿರವರು ಎಲ್ಲಾ ಮುಸ್ಲಿಂ ಬಾಂದವರು 30 ದಿನಗಳ ಉಪವಾಸವನ್ನು ಪೂರೈಸಿದ ನಂತರ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾಡಬಾರದು ಎಂದು ಪ್ರತೀಜ್ಞೆಯನ್ನು ಮಾಡುತ್ತಾ ಈ ಒಂದು ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿರುತ್ತೆವೆ.
ಹಾಗು ಈ ವರ್ಷದ ರಂಜಾನ್ ಹಬ್ಬವು ನಮ್ಮ ಕ್ಷೇತ್ರದ ಸಮಸ್ತ ಜನತೆ ಹಾಗೂ ದೇಶದ ಪ್ರತಿಯೊಬ್ಬರಿಗೂ ಸುಃಖ ಶಾಂತಿ, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ ಪ್ರೇಮ ವಾತ್ಸಲ್ಯದಿಂದ ಸಮೃದ್ದಿಗೊಂಡು ಉತ್ತಮ ಆರೋಗ್ಯ ನೀಡಲಿ ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ರಂಜಾನ್ (ಈದ್ ಉಲ್ ಫಿತರ್) ಹಬ್ಬದ ಶುಭಕೋರಿದರು. ಇದೇ ಸಂದರ್ಭದಲ್ಲಿ ಅಂಜುಮನ್ ಕಮಿಟಿಯಿಂದ ಬಹಳಷ್ಟು ಅಭಿವೃದ್ದಿ ಕಾರ್ಯಕ್ರಮಗಳು ನೆಡೆಯುತ್ತಿದ್ದು ಹೆಚ್ಚಿನ ಅಭಿವೃದ್ದಿಗಾಗಿ ಕೇವಲ ಅಂಜುಮನ್ ಕಮಿಟಿಯ ಪದಾಧಿಕಾರಿಗಳಿಂದ ಸಾಧ್ಯವಿಲ್ಲ ಆದ್ದದರಿಂದ ತಮ್ಮೆಲ್ಲರ ಸಹಕಾರ ತನು ಮನ ಧನದ ಸಹಾಯದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್ ಕಾರ್ಯದರ್ಶಿಗಳಾದ ಎಮ್.ಡಿ.ಅಬೂಬಕ್ಕರ್ ಖಾಜಾಂಚಿಗಳಾದ ಜಿ ಅನ್ಸರ್ ಭಾಷ ಸಹಕಾರ್ಯದರ್ಶಿಗಳಾದ ಡಾ.ಎಮ್.ಡಿ.ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಮತ್ತು ಎಲ್ ಗುಲಾಮ್ ರಸೂಲ್ ಅಬ್ದುಲ್ ಖಾದರ್ ರಫಾಯಿ ಖದೀರ್ ಹಾಗೂ ಮುಸ್ಲಿಂ ಮುಖಂಡರುಗಳಾದ ಖದೀರ್. ಬಡಾವಲೀ. ವಾಹೀದ್ ಬೈ , ನಾಸೀರ್. ಖಾನ್‌ಸಾಬ್. ರಜಾಕ್. ಹಾಗೂ ಸಾವಿರಾರು ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.
ವರದಿ :-ಮಹಮ್ಮದ್ ಗೌಸ್