ವಿಜಯನಗರ :(ಜಾಗೃತಿ ಬೆಳಕು ನ್ಯೂಸ್)
ಹೊಸಪೇಟೆ 3 ವರ್ಷದ ಬಾಲಕ ಪರಶುರಾಮಗೆ ಬೀದಿ ನಾಯಿ ಕಚ್ಚಿದ ಪ್ರಕರಣ ಕುರಿತು ಮಾಹಿತಿ.
ವಿಜಯನಗರ ಜಿಲ್ಲೆ ಹೊಸಪೇಟೆಯ ಚಿತ್ತವಾಡ್ಗಿ ಏರಿಯಾದಲ್ಲಿ ಬೀದಿ ನಾಯಿ ಕಡಿತದಿಂದ ತೀವ್ರತರ ಗಾಯಗಳಾಗಿ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ 3 ವರ್ಷದ ಮಗು ಪರಶುರಾಮಗೆ ಆ.01. ರಂದು ಮಧ್ಯಾಹ್ನ ಬಳ್ಳಾರಿಯ ( Truma care Center ) ಟ್ರೋಮ ಕೇರ್ ಸೆಂಟರ್ ನಲ್ಲಿ ಯಶಸ್ವಿಯಾಗಿ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆ ನಡೆದಿತ್ತು ಇಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುತ್ತಾನೆ.
ಬೀದಿ ನಾಯಿ ಕಡಿತಕ್ಕೆ ಒಳಗಾಗದ ಮಗುವಿನ ಮನೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ ಭಗತ್ ಸಿಂಗ್ ರಕ್ತಧಾನಿಗಳ ಸಂಘದ ಅಧ್ಯಕ್ಷರು ಕೆ.ಎಂ.ಸಂತೋಷ್ ಕುಮಾರ್ ಹಾಗೂ ಸಂಘದ ಮುಖಂಡರು ಮತ್ತು ಮಾಜಿ ನಗರಸಭಾ ಸದಸ್ಯರು.
ಆರ್ಥಿಕ ನೆರವು
ಮಗುವಿನ ಚಿಕಿತ್ಸೆಗೊಂದು ಹೊಸಪೇಟೆಯ HUDA ಅಧ್ಯಕ್ಷರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ರವರು10000/- , 1 ನೇ ವಾರ್ಡಿನ ನಗರಸಭೆ ಸದಸ್ಯರ ಮಗ ಡುಮ್ಮಿ ರುದ್ರಪ್ಪ ರವರು 3000/- ಸಾವಿರ ಹಾಗೂ ನಗರಸಭೆಯ ವತಿಯಿಂದ 10000/- ಸಾವಿರ ಪಡೆದಿರುತ್ತೇವೆ ಎಂದು ಕುಟುಂಬಸ್ಥರು ತಿಳಿಸಿದ್ದು. ಆರ್ಥಿಕ ಸಹಾಯ ಮಾಡಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಪತ್ರಿಕೆ ತಿಳಿಸಿದರು.
ಕಣ್ಮರೆಯಾದ ಪರಿಹಾರ
ಬೀದಿ ನಾಯಿ ಕಡಿತಕ್ಕೆ ಒಳಗಾದ ಮಗುವಿನ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆ ಕನಿಷ್ಠ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ನಗರದಲ್ಲಿ ಬೀದಿ ನಾಯಿ ಹಾವಳಿ ತಪ್ಪಿಸಲು ಕ್ರಮ ವಹಿಸಬೇಕು ಎಂದು ಕೂಗು ಕೇಳಿ ಬಂದರೂ ಸಹ ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು.
ವರದಿ :-ಮೊಹಮ್ಮದ್ ಗೌಸ್