ಮೊಟ್ಟ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯಲ್ಲಿ ಫ್ಯಾಶನ್ ಶೋ ಜನರ ಮೆಚ್ಚುಗೆಗೆ ಪಾತ್ರ!!!

0
369

ವಿಜಯನಗರ ಜಿಲ್ಲೆ ಹೊಸಪೇಟೆ:- ಜಾಗೃತಿ ಬೆಳಕು ನ್ಯೂಸ್

ಜ,16. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೊಟ್ಟ ಮೊದಲ ಬಾರಿಗೆ ಫ್ಯಾಶನ್ ಶೋ ಏರ್ಪಡಿಸಲಾಗಿತ್ತು. ವಿಶೇಷವಾಗಿ ಮಕ್ಕಳು ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳು ವಿವಿಧ ಮಾದರಿಯ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವುದನ್ನು ನೋಡಿ ಪ್ರೇಕ್ಷಕರು ಸಂತೋಷಪಟ್ಟು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಹೀಮುದ್ದೀನ್(ಮಿಸ್ಟರ್ ಸೌತ್ ಇಂಡಿಯಾ ಫಿಟ್ನೆಸ್ ಫ್ರೀಕ್ ಪ್ರಶಸ್ತಿ ವಿಜೇತ 2022) ರವರು ಮಾತನಾಡಿ ಫ್ಯಾಶನ್ ಎನ್ನುವುದು ಜೀವನದ ಮುಖ್ಯ ಅಂಶವಾಗಿರುತ್ತದೆ, ವ್ಯಾಯಾಮ, ಯೋಗ, ಕರಾಟೆ,ಕ್ರೀಡೆ, ಇತ್ಯಾದಿ ಚಟುವಟಿಕೆಗಳನ್ನು ಒಳಗೊಂಡಿರುವಂತಹ ಶಕ್ತಿ ಫ್ಯಾಶನ್ ಜೀವನದಲ್ಲಿ ಬಹಳ ಮುಖ್ಯವಾದಂತಹ ಒಂದು ಅಂಶ ಎಂದರೆ ಅದು ಫ್ಯಾಷನ್ ಇದನ್ನು ತಾವೆಲ್ಲರು ಮಾಡುವ ಮುಖಾಂತರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ತಮ್ಮಲ್ಲಿ ಹೇಳಲು ಇಷ್ಟ ಪಡುತ್ತೇನೆ.
ಸುನೀಲ್ ಗೌಡ ನನ್ನ ಗೆಳೆಯನಾದ ಅಕ್ಬರ್ ಮತ್ತು ಅವರ ತಂಡಕ್ಕೆ ಇಂತಹದೊಂದು ಒಳ್ಳೆಯ ಕಾರ್ಯಕ್ರಮ ಆಯೋಜಿಸುವುದಕ್ಕೆ ಅವರನ್ನು ನಾನು ತುಂಬಾ ಹೃದಯದಿಂದ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲೆಯ ಸಮಾಜಸೇವಕರಾದ ಸಿದ್ದಾರ್ಥ್ ಸಿಂಗ್ ರವರು ಮಾತನಾಡಿ ಪುಟ್ಟ ಪುಟ್ಟ ಮಕ್ಕಳನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಇಷ್ಟೊಂದು ಜನಸಾಮಾನ್ಯರು ಸೇರಿ ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ ಫ್ಯಾಶನ್ ಎನ್ನುವುದು ಜೀವನದ ಪ್ರಮುಖ ಅಂಶವಾಗಿರುತ್ತದೆ ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಇದೇ ರೀತಿ ನಮ್ಮ ವಿಜಯನಗರ ಜಿಲ್ಲೆಯ ಒಂದು ಉನ್ನತ ಮಟ್ಟದಲ್ಲಿ ಬೆಳೆಯಲೆಂದು ಆಶಿಸುತ್ತೇನೆ ಜೈ ಜೈ ವಿಜಯನಗರ ಎಂದು ಘೋಷಣೆ ಕೂಗುತ್ತಾ ತಮ್ಮ ಮಾತನ್ನು ಅಂತ್ಯಗೊಳಿಸಿದರು.

ಕಾರ್ಯಕ್ರಮಕ್ಕೆ ಭಾಗವಹಿಸಿದ ಸ್ಪರ್ಧಾಳಗಳಿಗೆ ನಾಮಪತ್ರ ಕೊಡುವ ಮುಖಾಂತರ ಅವರನ್ನು ಸಂತೋಷಪಡಿಸಿದ ಡಾರ್ಕ್ ನೈಟ್ ಈವೆಂಟ್ ತಂಡ!

ಮುಖ್ಯ ಅತಿಥಿಗಳಾಗಿ :- ಸಿದ್ದಾರ್ಥ್ ಸಿಂಗ್ (ಸಮಾಜ ಸೇವಕರು ವಿಜಯನಗರ ಜಿಲ್ಲೆ)

ರಹೀಮುದ್ದೀನ್(ಮಿಸ್ಟರ್ ಸೌತ್ ಇಂಡಿಯಾ ಫಿಟ್ನೆಸ್ ಫ್ರೀಕ್ ಪ್ರಶಸ್ತಿ ವಿಜೇತ 2022)
ಸುಸ್ಮಿತಾ ದತ್ತಾ( ಫಿಟ್ನೆಸ್ ಟ್ರೈನರ್ ಮತ್ತು ಹಾಟ್ ಬ್ಲೇಡ್ ಜಿಮ್ ಮಾಲೀಕರು )
ಗುಂಡಿ ರಮೇಶ್ (ರಾಷ್ಟ್ರ ಪ್ರಶಸ್ತಿ ವಿಜೇತರು)
ಅರುಣ್ ಗುಡ್ಡಿ
ಶ್ರೀ ಪ್ರವೀಣ್ ಕುಮಾರ್ (360 ಲವ್ ಚಿತ್ರ ನಟ)

ಡಾರ್ಕ್ ನೈಟ್ ಈವೆಂಟ್
ಸಂಘಟಕರು: ಸುನೀಲ್ ಗೌಡ, ಶ್ರೀ ಅಭಿಷೇಕ್ ನ್ಯಾಯಾಧೀಶರು,
ಶ್ರೀಮತಿ ಸಹರ್ ಕೃಷ್ಣನ್,ಮತ್ತು ತಂಡದವರು ಭಾಗವಹಿಸಿದ್ದರು
.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here