ಮುಖ್ಯಮಂತ್ರಿ ಪದಕ್ಕೆ ಆಯ್ಕೆಯಾದ ಬಿ.ರಾಘವೇಂದ್ರ ರವರಿಗೆ ಕನಕ ನೌಕರರ ಸಂಘದಿಂದ ಸನ್ಮಾನ.

0
439

ಹೊಸಪೇಟೆ : ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಜನರ ಸೇವೆ ಮಾಡುತ್ತಿರುವ ಜನನಾಯಕ. ಜನಸೇವಕ ಎಂದು ಕೀರ್ತಿ ಪಡೆದಿರುವ ಬೇವಿನಮರದ ರಾಘವೇಂದ್ರ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಗೌರವಕ್ಕೆ ಹೊಸಪೇಟೆ ಪಟ್ಟಣ ಠಾಣೆಯ ಮುಖ್ಯಪೇದೆ ಆಯ್ಕೆಯಾಗಿದ್ದಾರೆ.

ಹೊಸಪೇಟೆಯ ಅನಂತಶಯನಗುಡಿಯ ನಿವಾಸಿಯಾಗಿರುವ ರಾಘವೇಂದ್ರ ಅವರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಪದಕ ಪ್ರಧಾನ ಸಮಾರಂಭವು ಏ.2 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಬಿ.ರಾಘವೇಂದ್ರ ರವರಿಗೆ ಕನಕ ನೌಕರರ ಸಂಘದಿಂದ ಗುರುವಾರ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕನಕ ನೌಕರರ ಸಂಘದ ಗೌರವಾಧ್ಯಕ್ಷ ಶೇಖರ್ ಹೊರಪೇಟಿ, ಜಿಲ್ಲಾಧ್ಯಕ್ಷ ಕೆ.ಬಿ.ತಿಮ್ಮಪ್ಪ, ಕಾರ್ಯಧ್ಯಕ್ಷ ಮೋಟಿಗಿ ಮಲ್ಲಯ್ಯ, ಉಪಾಧ್ಯಕ್ಷ ಎರಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ರಮೇಶ, ಜಿಲ್ಲಾ ಉಪಾಧ್ಯಕ್ಷ ಕೆ.ಉದೇದಪ್ಪ, ತಾಲೂಕು ಗೌರವಾಧ್ಯಕ್ಷ ಎಚ್.ಶ್ರೀನಿವಾಸ, ಅಧ್ಯಕ್ಷ ಟಿ.ವಿಶ್ವನಾಥ, ಪ್ರ.ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ, ಖಜಾಂಚಿ ಬಣಕಾರ ಹನುಮಂತಪ್ಪ, ಉಪಾಧ್ಯಕ್ಷ ಮಂಜಪ್ಪ, ಹಂಪಿ ಕನ್ನಡ ವಿ.ವಿ.ಯ ಶಿವಪುತ್ರ, ಪೊಲೀಸ್ ಇಲಾಖೆಯ ಕೆ.ಜಗದೀಶ್ ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here