ಜಾಗೃತಿ ಬೆಳಕು- ಹೊಸಪೇಟೆ
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ 76ನೇ ಸ್ವಾತಂತ್ರ್ಯದ ಆಜಾದಿ ಕ ಅಮೃತ ಮಹೋತ್ಸವ ಬಹಳ ವಿಶೇಷವಾಗಿತ್ತು, ಹೊಸಪೇಟೆಯ ಲಿಟಲ್ ಫ್ಲವರ್ ಮೆಮೋರಿಯಲ್ ಸ್ಕೂಲ್ (ಪ್ರಾಥಮಿಕ ಶಾಲಾ ಮಕ್ಕಳು) ಭಾರತದ ಸಂಸ್ಕೃತಿಯ ಉಡುಗೊರೆಗಳನ್ನು ಧರಿಸಿಕೊಂಡು ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ತೊಡಗಿದ್ದರು,
ಅದೇ ರೀತಿ ಮಕ್ಕಳ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳನ್ನು ವಿಶೇಷ ರೀತಿಯಿಂದ ಬಟ್ಟೆಗಳಿಂದ ಅಲಂಕರಿಸಿ ತಮ್ಮ ಮಕ್ಕಳ ಪ್ರತಿಭೆಯನ್ನು ನೋಡುತ್ತಾ ಸಂತೋಷಪಡುತ್ತಿರುವ ದೃಶ್ಯ ಕಂಡು ಬಂತು,
ಮುಖ್ಯ ಅತಿಥಿಗಳಾಗಿ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ
ಡಾ.ಸಂದೀಪ್ ಕುಮಾರ್ ರವರು ಧ್ವಜಾರೋಹಣ ಮಾಡಿ ತಮ್ಮ ಭಾಷಣದಲ್ಲಿ ಇಂದಿನ ಮಕ್ಕಳು ನಮ್ಮ ದೇಶದ ಮುಂದಿನ ಭವಿಷ್ಯ ಎಂದು ಹೇಳೆದರೂ.
ಮಕ್ಕಳೇ ವಿದ್ಯಾವಂತರಾಗಿ ವಿಜಯನಗರ ಜಿಲ್ಲೆಯ ಮತ್ತು ಶಾಲೆಯ ಕೀರ್ತಿ ಹೆಚ್ಚಿಸಬೇಕೆಂದು ಮಕ್ಕಳಲ್ಲಿ ಸ್ಪೂರ್ತಿ ತುಂಬಾ ಮೂಲಕ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು,
ಪ್ರಾಥಮಿಕ ಶಾಲೆಯ ಮಕ್ಕಳ ನೃತ್ಯ ಕಲಾ ಮತ್ತು ಸ್ಕೌಟ್, ಮಾರ್ಚ್ ಫಾಸ್ಟ್, ಗಣ್ಯರಿಗೆ ಸಲಾಮಿ ಮತ್ತು ನಮ್ಮ ದೇಶದ ವೀರ ಯೋಧರಿಗೆ ಹಾಡು ಮತ್ತು ನೃತ್ಯದ ಮೂಲಕಾ ನೆನೆಸಿದರು,
ನೋಡಲು ಎರಡು ಕಣ್ಣು ಸಾಲದು ಅಷ್ಟು ಚೆನ್ನಾಗಿ ಮೂಡಿ ಬಂದಿರುತ್ತದೆ,
ವರದಿ :-ಮೊಹಮ್ಮದ್ ಗೌಸ್