ಹೊಸಪೇಟೆ :-ಜಾಗೃತಿ ಬೆಳಕು.ಬ್ರೇಕಿಂಗ್ ನ್ಯೂಸ್
ಜೂ.02 ರಂದು ಹೊಸಪೇಟೆ ನಗರದ ಅಂಜುಮನ್ ಶಾದಿಮಹಲ್ ಕಛೇರಿ ಆವರಣದಲ್ಲಿ ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭದ ಉಧ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ವನ್ನು ದಾನಿಗಳು, ಸಮಾಜಸೇವಕರು ಹಾಗು ಪ್ರಿಯದರ್ಶಿನಿ ಹೋಟೆಲ್ ಮಾಲೀಕರಾದ ಶ್ರೀನಿವಾಸ್ ರಾವ್ ರವರು ಉಧ್ಘಾಟಿಸಿ ಮಾತನಾಡಿ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಲಿದೆ ಎನ್ನುವ ಮಾತಿದೆ. ಹೀಗಾಗಿ ಗ್ರಾಮೀಣ ಹಾಗು ನಗರ ಭಾಗದ ಎಲ್ಲಾ ಧರ್ಮ, ಜಾತಿ, ಲಿಂಗ – ಭೇದ ಭಾವವಿಲ್ಲದೇ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಅಂಜುಮನ್ ಸಂಸ್ಥೆಯು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ಇಂತಹ ಸಮಾಜಮುಖಿ ಕೆಲಸಗಳಿಗೆ ಎಂದಿಗೂ ನಮ್ಮಿಂದ ಸಹಾಯ ಸಹಕಾರ ಇರುತ್ತದೆ ಎಂದು ಅವರು ಹೇಳಿದರು.
ಉಧ್ಘಾಟನಾ ಕಾರ್ಯಕ್ರಮವನ್ನು ಉಧ್ದೇಶಿಸಿ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಕಮಿಟಿಯು ಈಗಾಗಲೇ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಹೊಸಪೇಟೆ ಭಾಗದ ಎಸ್.ಎಸ್.ಎಲ್.ಸಿ ಮುಗಿಸಿದ ಎಲ್ಲಾ ಜಾತಿ ಧರ್ಮಗಳ ಬಡ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡಿಸಬೇಕೆನ್ನುವ ಮಹದಾಸೆಯು ಸಂಸ್ಥೆಯು ಹೊಂದಿದ್ದು, ಹೀಗಾಗಿ ಬಡ ವಿಧ್ಯಾರ್ಥಿಗಳ ಬದುಕು ರೂಪಿಸುವ ಸಲುವಾಗಿ ಬೇಸಿಕ್ ಕಂಪ್ಯೂಟರ್, ಇಂಗ್ಲೀಷ್ ಮತ್ತು ಕನ್ನಡ ನುಡಿ ಟೈಪಿಂಗ್ , ಎಮ್ ಎಸ್ ವರ್ಡ್ ,ಎಮ್ ಎಸ್ ಎಕ್ಸೆಲ್ , ಇಂತಹ ತರಬೇತಿ ನೀಡಲು ಸಂಸ್ಥೆಯು ಮುಂದಾಗಿದೆ. ಕಮಿಟಿಯು ಕಂಪ್ಯೂಟರ್ ತರಬೇತಿಯನ್ನು ಅಚ್ಚುಕಟ್ಟಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ಬದುಕು ಬದಲಿಸುವ ಕೆಲಸ ಮಾಡಲಿದೆ. ಹಾಗಾಗಿ ಎಸ್.ಎಸ್.ಎಲ್.ಸಿ ನಂತರದ ಎಲ್ಲಾ ವಿಧ್ಯಾರ್ಥಿಗಳು ತರಬೇತಿಯ ಸದಾವಕಾಶವನ್ನು ಪಡೆದುಕೊಳ್ಳಲು ಕರೆ ನೀಡಿದರು. ಹಾಗೂ ಮಾಹಿತಿಗಾಗಿ ಅಂಜುಮನ್ ಕಚೇರಿಗೆ ಸಂಪರ್ಕಸಿಲು ತಿಳಿಸದರು,
ಈ ಕಾರ್ಯಕ್ರಮದಲ್ಲಿ ಸಮಾಜಸೇವಕರು ಹಾಗು ದಾನಿಗಳಾದ ಅತೀಕ್ ಅಹಮದ್ , ರವಿಶಂಕರ್ , ಶಾಹೀದ್ ,ಹೈದರ್ ಅಲಿ, ತನ್ವೀರ್ , ಸತ್ಯನಾರಾಯಣ , ಹಾಗು ಅಂಜುಮನ್ ಕಮಿಟಿಯ
ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್, ಕಾರ್ಯದರ್ಶಿಗಳಾದ ಎಮ್.ಡಿ.ಅಬೂಬಕ್ಕರ್, ಖಾಜಾಂಚಿಗಳಾದ ಜಿ. ಅನ್ಸರ್ ಭಾಷ, ಸಹಕಾರ್ಯದರ್ಶಿಗಳಾದ ಡಾ.ಎಮ್.ಡಿ.ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಹುಸೇನ್, ಎಲ್. ಗುಲಾಮ್ ರಸೂಲ್ ಹಾಗೂ
ಸಮುದಾಯದ ಹಿರಿಯ ಮುಖಂಡರು ಭಾಗವಹಿಸಿದ್ದರು.
ವರದಿ :-ಮಹಮ್ಮದ್. ಗೌಸ್