ಹೊಸಪೇಟೆ:- ಜಾಗೃತಿ ಬೆಳಕು (ನ್ಯೂಸ್ )
ಹಗರಿಬೊಮ್ಮನಹಳ್ಳಿ ತಾಲೂಕು, ಮೋರಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಮತ್ತು ನರೇಗಾ ಸಿಬ್ಬಂದಿ ಸೇರಿ 8 ಜನರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಆರೋಪಿಸಿದ ಜಿಲ್ಲಾಧ್ಯಕ್ಷರು ಗ್ರಾ.ಸ. ಮ. ಒ.ಸಣ್ಣಕ್ಕಿ ಲಕ್ಷ್ಮಣ.
ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯ ಮೋರಿಗೇರಿ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನಲ್ಲಿ ತೀವ್ರ ಬರಗಾಲ ಇರುವುದರಿಂದ ಏಪ್ರೀಲ್ 01ನೇ ತಾರೀಖಿನಿಂದಲೇ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಕ್ರಮ ಕೈಗೊಂಡಿದ್ದು. ಇದಕ್ಕೆ ಸಂಬಂಧಿಸಿದಂತೆ ಮೋರಿಗೇರಿ ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ನರೇಗಾ ಸಿಬ್ಬಂದಿಯವರು ಸರ್ವೆ ನಂ: 654/ಎ ವಿಸ್ತೀರ್ಣ : 5-00 ಎಕರೆಯಲ್ಲಿ ಸರ್ಕಾರಿ ಭೂಮಿ ಗುರುತಿಸಿ ನರೇಗಾ ಕೂಲಿಕಾರ್ಮಿಕರಿಗೆ ಕೆಲಸ ನೀಡಲು ಈ ಕಾಮಗಾರಿ ಆಯ್ಕೆಮಾಡಿಕೊಂಡಿದ್ದು, ಕಾಮಗಾರಿ ಹೆಸರು: ಮೋರಿಗೇರಿ ಗ್ರಾಮದ ಸ.ನಂ: 654/ಎ,ರಲ್ಲಿ ಗೋಮಾಳದ ಸುತ್ತಲೂ ಟ್ರಾಚ್ ನಿರ್ಮಾಣ ಕಾಮಗಾರಿ (cod )3025 1505003014/WC/GIS/104558100 272 ಕಾರ್ಮಿಕರಿಗೆ ಕಾನೂನು ಪ್ರಕಾರ ಕೂಲಿ ನಿರ್ಮಾಣ. ಕಾಮಗಾರಿ ಕೋಡ್- ಕೆಲಸವನ್ನು ನೀಡಲಾಗಿತು. ಆದರೆ ಮೈಲಮ್ಮ ಇವರು ಜಮೀನು ನಮ್ಮದೆಂದು ಯಾವುದೇ ದಾಖಲೆ ಇಲ್ಲದೆ ಸದರಿ ಜಾಗದಲ್ಲಿ ಪದೇ ಪದೇ ವಾಗ್ವಾದ ನಡೆಸುತ್ತಾ, ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.
ಆದರೆ ಅಧಿಕಾರಿ ಗಳು ತಿಳುವಳಿಕೆ ಹೇಳಿ ಕಳುಹಿಸಿದರು ಸಹ ದಿ. 05.ರಂದು ವಿಷ ಸೇವಿಸಿ ಮೃತಪಟ್ಟಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ 8 ಜನ ಅಧ್ಯಕ್ಷರು, ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಡಗಲಿ ತಾಲೂಕು ಇಟ್ಟಿಗಿ ಪೊಲೀಸ್ ಠಾಣಿ ಯಲ್ಲಿ
ನೌಕರರ ಮೇಲೆ ದೂರು ದಾಖಲಿಸಿರುತ್ತಾರೆ ಯಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರು ಸಣ್ಣಕ್ಕಿ ಲಕ್ಷ್ಮಣ್ ರವರು ವಿಜಯನಗರ ಜಿಲ್ಲಾಧಿಕಾರಿಗೆ ಮನವಿ ಕೊಡುವ ಮುಖಾಂತರ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ವರದಿ :-ಮೊಹಮ್ಮದ್ ಗೌಸ್